Gadag:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು ಒಂದು ರಾಷ್ಟ್ರ ಮುಂದುವರಿಯಬೇಕಾದರೆ ಆ ರಾಷ್ಟ್ರದ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಬಹುದೊಡ್ಡದು ಕರ್ನಾಟಕ ವಿಶ್ವವಿದ್ಯಾಲಯ ಎನ್ಎಸ್ಎಸ್ ಕೋಶ ಧಾರವಾಡ ,ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ.ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಹಾಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕ ಜಿಲ್ಲಾ ಪಂಚಾಯತ್, ಗದಗ ತಾಲೂಕ್, ಪಂಚಾಯತ್ ಗದಗ. ಗ್ರಾಮ ಪಂಚಾಯಿತಿ ಲಕ್ಕುಂಡಿ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಎನ್ ಎಸ್ ಎಸ್ ವಾರ್ಷಿಕ ಶಿಬಿರದ ವಿಶೇಷ ಅತಿಥಿಗಳಾಗಿ ಆಗಮಿಸಿದ ಡಾ ಶರಣು ಗೋಗೇರಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯನ್ನು ಕೇಂದ್ರ ಸರ್ಕಾರವು 1969 ರಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷ ಪ್ರಾರಂಭಿಸಿ ಈ ಯೋಜನೆಯನ್ನು ಅಂದಿನಿಂದ ಇಂದಿನವರೆಗೂ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಾ ಬಂದಿವೆ ವಿದ್ಯಾರ್ಥಿಗಳಲ್ಲಿ ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಅದರೊಂದಿಗೆ ಗ್ರಾಮಗಳಲ್ಲಿ ಪ್ರತಿ ವರ್ಷ ಒಂದು ವಿಶೇಷ ಶಿಬಿರಗಳನ್ನ ಹಾಕಿಕೊಳ್ಳುವುದು ಆ ವಿಶೇಷ ಶಿಬಿರಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಶೌಚಾಲಯ ಬಳಕೆ, ಮತದಾನದ ಮಹತ್ವ ಆರೋಗ್ಯ ಬಗ್ಗೆ ಮಾಹಿತಿ ಹೀಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಈ ಒಂದು ಶಿಬಿರದಲ್ಲಿ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಕಾಲೇಜ್ ಹಂತದಲ್ಲಿ ಈ ಒಂದು ಎನ್ ಎಸ್ ಎಸ್ ಯೋಜನೆ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತ ಅಂದರೆ ವ್ಯಕ್ತಿತ್ವವನ್ನ ರೂಪಿಸಿಕೊಳ್ಳಲು ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸುವದು ವಿದ್ಯಾರ್ಥಿಗಳಲ್ಲಿ ಬಾಹುಬಲಿ ಬುದ್ಧಿ ಬಲ ಆದರ್ಶ ಉತ್ಸಾಹ ಇದ್ದು ಸಮಾಜದ ಏಳಿಗೆಗೆ ದುಡಿಯಬೇಕೆಂಬ ಹಂಬಲ ಇವರಲ್ಲಿ ಇದೆ. ಈ ಶಕ್ತಿ ಉತ್ಸಾಹವನ್ನು ಬಳಸಿಕೊಂಡು ಅವರ ಕ್ರಿಯಾತ್ಮಕ ಕಾರ್ಯಗಳಿಗೆ ತೊಡಗಿಸುವುದು ಈ ಯೋಜನೆಯ ಮುಖ್ಯ ಗುರಿ ಎಂದು ತಮ್ಮ ಮಾತುಗಳಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ವಿಶೇಷ ಶಿಬಿರವನ್ನ ಲಕ್ಕುಂಡಿಯಲ್ಲಿ ಹಮ್ಮಿಕೊಂಡಿದ್ದಕ್ಕಾಗಿ ಆದರ್ಶ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ಪ್ರಾಧಿಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಜ್ಯೋತಿ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಲಕ್ಕುಂಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಕೆಂಚಪ್ಪ ಪೂಜಾರ ಅವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಶಿಸ್ತು ಸಂಯಮ ಉತ್ತಮ ನಾಯಕತ್ವ ಸಹ ಬಾಳ್ವೆ ಜಾತ್ಯತೀತತೆ ಭಾವೈಕ್ಯತೆ ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಲು ಬಹಳಷ್ಟು ಸಹಕಾರಿಯಾಗಿದೆ. ಸಮಾಜದಲ್ಲಿ ನಾವು ಗಮನಿಸುತ್ತಿರುವ ಹಾಗೆ ಇತ್ತೀಚಿನ ದಿನಮಾನಗಳಲ್ಲಿ ಮನೆಯ ಸದಸ್ಯರಿಗೆ ಗೌರವ ಕೊಡುವುದು ಕಡಿಮೆಯಾಗುತ್ತಿದೆ ಹೀಗಾಗಿ ಪ್ರತಿಯೊಬ್ಬರು ಮೊದಲು ತಮ್ಮ ತಮ್ಮ ಗ್ರಾಮಗಳನ್ನು ಗೌರವಿಸಿ ತಮ್ಮ ತಂದೆ ತಾಯಿಗಳನ್ನ ಮನೆಯ ಸದಸ್ಯರನ್ನ ಗೌರವಿಸಿ ಎಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿಕೊಂಡರು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರು ಯುವ ನಾಯಕರು ಶ್ರೀ ಸಿದ್ದಲಿಂಗೇಶ್ವರ ಎಚ್ ಪಾಟೀಲ್ ರವರು ಮಾತನಾಡಿ ,
ಸೇವೆಯ ಮೂಲಕ ಶಿಕ್ಷಣ ಹಾಗೂ ಶಿಕ್ಷಣದ ಮೂಲಕ ಸೇವೆಯನ್ನು ನೀಡುವ ಯೋಜನೆಯ ರಾಷ್ಟ್ರೀಯ ಸೇವಾ ಯೋಜನೆಯಾಗಿದ್ದು ವಿದ್ಯಾರ್ಥಿಯು ಸೂಕ್ತ ಸಾಮರ್ಥ್ಯಗಳನ್ನ ಬೆಳೆಸಿಕೊಳ್ಳುವುದರ ಜೊತೆಗೆ ಇರಬಹುದಾದ ಓರೆ ಕೋರೆಗಳನ್ನು ತಿದ್ದಿಕೊಳ್ಳಲು ಇದು ಸಾಧನವಾಗುವುದು ಸಮಾಜದ ನೇರ ಸಂಪರ್ಕವನ್ನು ಪಡೆದಾಗ ಸಮಾಜದ ನೂ ನಲಿವುಗಳಿಗೆ ಸ್ಪಂದಿಸುವ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರವೃತ್ತಿ ಹುಟ್ಟುತ್ತದೆ ಅಂತಹ ಎಲ್ಲ ವಿಚಾರಗಳನ್ನ ಶಿಬಿರದ ಮೂಲಕ ಗ್ರಾಮೀಣ ಭಾಗದಲ್ಲಿ ನಾವು ಕಲಿಯಬಹುದು ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಲಕ್ಕುಂಡಿ ಗ್ರಾಮ ಪಂಚಾಯಿತಿಯ ಪಿ ಡಿ ಓ ಶ್ರೀ ಅಮೀರ್ ಅಹಮದ್ ಜಾನ್ ಸಾಬ್ ನಾಯಕ್ ರವರು ಮಾತನಾಡಿ ಎನ್ಎಸ್ಎಸ್ ಧ್ಯೇಯ ಬಹಳ ಸುಂದರ ನಾನು ನನಗಾಗಿ ಮಾತ್ರವಲ್ಲ ನಮ್ಮೆಲ್ಲರಿಗಾಗಿಯೂ ಎಂಬುದಾಗಿದೆ ಅಂದರೆ ಸಮಾಜದಲ್ಲಿ ನಾವು ಬದುಕುವಾಗ ಪ್ರತಿಯೊಬ್ಬರನ್ನ ಗೌರವಿಸಬೇಕು ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕು ಅಂದರೆ ಸುಂದರವಾದ ಬದುಕನ್ನು ಕಾಣಬಹುದು ಭೂಮಿ ಮೇಲೆ ಇರುವಷ್ಟು ದಿನ ನಾವೆಲ್ಲರೂ ಉತ್ತಮ ಸಂಬಂಧಗಳನ್ನು ಹೊಂದುವ ಮೂಲಕ ಜೀವನವನ್ನು ಸಾಗಿಸಬೇಕು ಎಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ವೇದಿಕೆ ಮೇಲೆ 2023-24 ಸಾಲಿನ ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದ ಶ್ರೀ ಬಸವರಾಜ್ ಹಡಗಲಿ, ಗ್ರಾಮ ಪಂಚಾಯತಿಯ ಸದಸ್ಯರಾದ ಕುಬೇರಪ್ಪ ಎಸ್ ಬೆಂತೂರು ರಮೇಶ್ ಭಾವಿ, ಹಿರಿಯ ಜನಪದ ಕಲಾವಿದರಾದ ಶಿವು ಭಜಂತ್ರಿ, ಯುವ ಗಾಯಕ ರಾಹುಲ್ ರಾಥೋಡ್, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಾಹುಬಲಿ ಪಿ ಜೈನರ ವಿದ್ಯಾರ್ಥಿ ಮುಖಂಡನಾದ ಕು ಜನಕ ರೆಡ್ಡಿ .ಎಚ್. ಗ್ರಾಮದ ಗುರು ಹಿರಿಯರು ಎನ್ ಎಸ್ ಎಸ್ ಸ್ವಯಂಸೇವಕ ಸೇವಕಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.