ಲಕ್ಕಮ್ಮದೇವಿ ದೇವಸ್ಥಾನದ ಜೀಣೋರ್ದ್ದಾರ, ಗೋಪುರ ಲೋಕಾರ್ಪಣೆ ಸಮಾರಂಭ

Published on

ಗದಗ: ಜಿಲ್ಲೆಯ ರೋಣ ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಗ್ರಾಮದೇವತೆ ಲಕ್ಕಮ್ಮದೇವಿ ದೇವಸ್ಥಾನದ ಜೀಣೋರ್ದ್ಧಾರ, ನೂತನ ಗೋಪುರ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಏ.27ರಿಂದ ಮೇ 1ರವರೆಗೆ ನಡೆಯಲಿದೆ ಎಂದು ಗ್ರಾಮದ ಮುಖಂಡ ಕೃಷ್ಣ ದೇಶಪಾಂಡೆ ಹೇಳಿದರು.

ಏ.27ರಂದು ಬೆಳಿಗ್ಗೆ 8ಕ್ಕೆ ಮಹಾ ಗಣಪತಿ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ ಧರ್ಮ ಸಭೆ ನಡೆಯಲಿದೆ. ಗುಳೇದಗುಡ್ಡದ ಒಪ್ಪತ್ತೇಶ್ವರಮಠದ ಶ್ರೀಗಳು, ಮುಕ್ಕಣ್ಣೇಶ್ವರಮಠದ ಶಂಕರಾನಂದ ಸ್ವಾಮೀಜಿ, ಕೊತಬಾಳ ಅಡವಿಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಉಪಸ್ಥಿತಿ ಇರುವರು. ಏ.28ರಂದು ಬೆಳಿಗ್ಗೆ 8ಕ್ಕೆ ರುದ್ರಸ್ವಾಹಾಕಾರ ಹೋಮ, ಏ.29ರಂದು ಬೆಳಿಗ್ಗೆ 8ಕ್ಕೆ ಚಂಡಿ ಹೋಮ, ಏ. 30ರಂದು ಬೆಳಿಗ್ಗೆ 11ಕ್ಕೆ ಕಳಸದ ಮೆರವಣಿಗೆ, ಮೇ 1ರಂದು ಬೆಳಿಗ್ಗೆ 5.30ಕ್ಕೆ ಗ್ರಾಮದೇವತೆ ಲಕ್ಕಮ್ಮದೇವಿ ಹೋಮ ಹಾಗೂ ಪೂರ್ಣಾಹುತಿ ಪೂಜಾ ನಡೆಯುವುದು ಎಂದರು.

ಶರಣಪ್ಪ ಮೆಣಸಗಿ, ಮುತ್ತು ಕಮತರ, ಶಿವನಗೌಡ ಸಿದ್ದನಗೌಡ್ರ, ಹನಮಂತ ಹೊಸೂರು, ವೀರೇಶ ವಾಲ್ಮೀಕಿ, ನಿಂಗಪ್ಪ ಮಾದರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net