ಗೋಡಂಬಿ ಕೀಟ ಹತೋಟಿಗೆ ಕ್ರಮ ವಹಿಸಿ: ಡಾ. ನಾಗರಾಜ

22GDG01
Published on

ಗೋಡಂಬಿ ಬೆಳೆ ವಿಚಾರ ಸಂಕಿರಣ

ವಿಜಯವಾಣಿ ಸುದ್ದಿಜಾಲ ಗದಗ

ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಗೋಡಂಬಿ ಬೆಳಗಾರರ ವಿಚಾರ ಸಂಕಿರಣ ಜರುಗಿತು.

ಶಿವಮೊಗ್ಗ ತೋಟಗಾರಿಕೆ ಇಲಾಖೆ ಪ್ರಾಧ್ಯಾಪಕ ಡಾ. ನಾಗರಾಜಪ್ಪ ಅಡಿವೆಪ್ಪಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗೋಡಂಬಿ ಬೆಳೆಯು ಅತೀ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತಿದೆ. ಜಿಲ್ಲೆಯ ವಾತಾವರಣ ಈ ಬೆಳೆಗೆ ಸೂಕ್ತವಾಗಿದೆ. ಗೋಡಂಬಿ ಬೆಳೆಯಲ್ಲಿ ಬರುವ ಪ್ರಮುಖ ಕೀಟ ಮತ್ತು ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳನ್ನು ಗೋಡಂಬಿ ಬೆಳೆಗಾರರು ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಗೋಡಂಬಿ ಬೆಳೆಗಾರರ ಸಂದ ಅಧ್ಯ ಜಿ. ಆರ್​. ಓದುಗೌಡರ ಮಾತನಾಡಿ, ಜಿಲ್ಲೆಯಲ್ಲಿ ಬೆಳೆಯುವ ಗೋಡಂಬಿಯು ಉತ್ತಮ ಗುಣಮಟ್ಟದ್ದಾಗಿದೆ. ರ್ತು ಮಾಡಲು ಯೋಗ್ಯವಾಗಿದೆ. ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಸಲಹೆಯಿಂದ ಹುಲಕೋಟಿಯಲ್ಲಿ ಗೋಡಂಬಿ ಸಂಸ್ಕರಣಾ ಟಕವನ್ನು ಸ್ಥಾಪಿಸಲಾಗಿದೆ. ಇದರಿಂದ ಗೋಡಂಬಿ ಬೆಳೆಗಾರರಿಗೆ ಉತ್ತಮ ಧಾರಣೆ ದೊರೆಯುತ್ತಿದೆ ಎಂದರು.

ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕ ಶಶಿಕಾಂತ ಕೋಟೆಮನಿ ಮಾತನಾಡಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಸಹಯೋಗದಲ್ಲಿ ಜಿಲ್ಲೆಯಲ್ಲಿ ಸುಮಾರು 2000 ಎಕರೆಯಷ್ಟು ಗೋಡಂಬಿ ಬೆಳೆಯನ್ನು ವಿಸ್ತರಿಸಲಾಗಿದೆ. ಗೋಡಂಬಿ ಬೆಳೆಗಾರರಿಗೆ ಸಸಿ ವಿತರಣೆ ಹಾಗೂ ಬೆಳೆ ನಿರ್ವಹಣೆಗೆ ಸಹಾಯಧನ ನೀಡುವ ಮೂಲಕ ತೋಟಗಾರಿಕೆ ಇಲಾಖೆ ಹಾಗೂ ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ ನೆರವಾಗುತ್ತಿವೆ ಎಂದು ತಿಳಿಸಿದರು.

ಗೋಡಂಬಿ ಬೆಳೆಗಾರರ ಸಂದ ಉಪಾಧ್ಯ ಈಶ್ವರಪ್ಪ ಹಂಚಿನಾಳ ಅವರು ಗೋಡಂಬಿ ಬೆಳೆಯಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿ, ಗೋಡಂಬಿ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಹೆಚ್ಚಿನ ಸಂಶೋಧನೆ ಕೈಗೊಂಡು ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ 140 ಕ್ಕೂ ಹೆಚ್ಚು ಗೋಡಂಬಿ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದ ನಂತರ ಗೋಡಂಬಿ ಬೇಸಾಯದ ಕುರಿತು ತಾಂತ್ರಿಕ ಸಲಹೆ ಹಾಗೂ ರೈತರ ಜೊತೆ ಗುಂಪು ಚರ್ಚೆ ಏರ್ಪಡಿಸಲಾಯಿತು. ತದನಂತರ ಗೋಡಂಬಿ ಬೆಳೆದ ರೈತರ ತೋಟಗಳಿಗೆ ಹಾಗೂ ನೂತನವಾಗಿ ಪ್ರಾರಂಭವಾಗಿರುವ ಗೋಡಂಬಿ ಸಂಸ್ಕರಣಾ ಟಕಕ್ಕೆ ೇತ್ರ ಭೆಟ್ಟಿಯನ್ನು ಏರ್ಪಡಿಸಲಾಯಿತು.

ಬಾಗಲಕೋಟೆ ತೋಟಗಾರಿಕೆ ವಿವಿ ಪ್ರಾಧ್ಯಾಪಕ ಡಾ. ರಾಮೇಗೌಡ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುಧಾ ಮಂಕಣಿ, ಎನ್​. ಎಚ್​. ಭಂಡಿ, ಡಾ. ಕೆ. ವಿ.ಪಾಟೀಲ, ಹೇಮಾವತಿ ಹಿರೇಗೌಡ್ರ, ಡಾ. ವಿನಾಯಕ ನಿರಂಜನ, ವಿಶ್ವನಾಥಗೌಡ ಹಿರೇಗೌಡರ, ಸುಭಾಸಗೌಡ ಆದಪ್ಪಗೌಡರ, ಕೆ. ವಿ. ಆದಪ್ಪಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net