ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರ ದಿನಾಚರಣೆ

23GDG06
ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜರುಗಿದ ರೈತ ದಿನಾಚರಣೆಯಲ್ಲಿ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಸ್ಪೊತಿರ್ ಜಿ. ಎಸ್​, ಸುಧಾ ಮಂಕಣಿ, ಡಾ. ಗೀತಾ ಚೆನ್ನಾಳ, ಪಾಲಕ್ಷಗೌಡ ಇತರರು ಇದ್ದರು.
Published on

ರೈತ ಸಾಧಕರಿಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಗದಗ

ತಾಲೂಕಿನ ಹುಲಕೋಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ರೈತ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಕೃಷಿ ಇಲಾಖೆ ಉಪನಿರ್ದೇಶಕಿ ಸ್ಪೊತಿರ್ ಜಿ. ಎಸ್​ ಮಾತನಾಡಿ, ರೈತರು ಇಲಾಖೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು. ಇಲಾಖೆಯಲ್ಲಿರುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು, ನವೀನ ತಾಂತ್ರಿಕತೆಗಳನ್ನು ಅಳವಡಿಕೊಂಡು ಅಧಿಕ ಕೃಷಿ ಇಳುವರಿ ಪಡೆಯುವಂತಾಗಬೇಕು. ಹೊಸ ತಳಿಗಳನ್ನು ಬಳಸಿ, ಸಾವಯವ ಕೃಷಿಯನ್ನು ಅಳವಡಿಸಕೊಳ್ಳಬೇಕು. ಲು ಪೋಷಕಾಂಶಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಸುಧಾ ಮಂಕಣಿ ಮಾತನಾಡಿ ಮಣ್ಣಿನ ಸಂರಣೆಯನ್ನು ಕಾಪಾಡಿಕೊಳ್ಳಲು ಸಾವಯವ, ಜೈವಿಕ ಗೊಬ್ಬರಗಳನ್ನು ಕೃಷಿಯಲ್ಲಿ ಬಳಕೆ ಮಾಡವುದು ಇಂದಿನ ದಿನದಲ್ಲಿ ಅತ್ಯವಶ್ಯ. ಕೃಷಿ ಸಂಸ್ಕರಣೆಗಳಂತಹ ಗುಡಿ ಕೈಗಾರಿಕೆಗಳನ್ನು ಮಾಡಿ ಮೌಲ್ಯವರ್ಧನೆಗೆ ಒತ್ತು ನೀಡಿ, ಸಿರಿಧಾನ್ಯಗಳನ್ನು ಬೆಳೆಸಬೇಕು. ಕೃಷಿ ವಿಜ್ಞಾನ ಕೇಂದ್ರದಲ್ಲಿ ನೀಡಲಾಗುವ ವಿವಿಧ ಕೃಷಿ ಮತ್ತು ಕೃಷಿ ಸಂಬಂಧಿ-ತ ತರಬೇತಿಗಳನ್ನು, ವಿವಿಧ ಕೌಶಲ್ಯಗಳನ್ನು, ಜ್ಞಾನ, ತಾಂತ್ರಿಕ ಮಾಹಿತಿ, ತೋಟಗಾರಿಕಾ ಬೆಳೆಗಳು, ವಿವಿಧ ಬೆಳೆಗಳ ರೋಗ ಹಾಗೂ ಕೀಟಗಳ ನಿಯಂತ್ರಣ ಕುರಿತು ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ಕೃಷಿ ವಿವಿ ಸಹ ಪ್ರಾಧ್ಯಾಪಕಿ ಡಾ. ಗೀತಾ ಚೆನ್ನಾಳ ಮಾತನಾಡಿ ಸಾವಯವ ಕೃಷಿಗೆ ಒತ್ತು ಕೊಟ್ಟು, ಕೃಷಿಯೊಂದಿಗೆ ಉಪಕಸುಬುಗಳನ್ನು ಮಾಡಬೇಕು. ಸಾವಯವ ಮತ್ತು ನೈಸಗಿರ್ಕ ಕೃಷಿಗೆ ಒತ್ತು ನೀಡಲು ಹಾಗೂ ಇಲಾಖೆಯ ಯೋಜನೆಗಳ ಸದ್ಭಳಕೆಯನ್ನು ಮಾಡಿಕೊಳ್ಳಲು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಆಗಮಿಸಿದ ವಿವಿಧ ರೈತ ಸಂಟನೆಗಳ ಅಧ್ಯರು, ಪದಾಧಿಕಾರಿಗಳು ಹಾಗೂ ಪ್ರಗತಿಪರ ರೈತರಿಂದ ಚರ್ಚಾಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಬೆಳೆ ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಕೃಷಿ ಇಲಾಖೆಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕೃಷಿ ಉಪನಿರ್ದೇಶಕ ಪಾಲಗೌಡ, ಸಂಗನಗೌಡ ಪಾಟೀಲ, ತಿರಕಪ್ಪ ಬೋಳನ್ನವರ, ಈಶ್ವರಪ್ಪ ಗುಜಮಾಗಡಿ, ವಿಜಯ ಕುಮಾರ ಸಂಕದ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net