ಕುಸ್ತಿ ಪಂದ್ಯಾವಳಿ ಆಯ್ಕೆ ಪ್ರಕ್ರಿಯೆಗೆ ಚಾಲನೆ

WhatsApp Image 2025-06-09 at 5.33.39 PM
Published on

ಗದಗ: ಗದಗ ಜಿಲ್ಲಾ ಕುಸ್ತಿ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ 15 ವರ್ಷ ವಯೋಮಿತಿ ಒಳಗಿನ ರಾಷ್ಟçಮಟ್ಟದ ಬಾಲಕ, ಬಾಲಕಿಯರ ಆಯ್ಕೆ ಕುಸ್ತಿ ಪಂದ್ಯಾವಳಿಯ ಉದ್ಘಾಟಣ ಸಮಾರಂಭವು ನಗರದ ಕೆ. ಎಚ್. ಪಾಟೀಲ ಕ್ರೀಡಾಂಗಣದ ಕುಸ್ತಿ ಮನೆಯಲ್ಲಿ ನೆರವೇರಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷ್ಣಗೌಡ ಎಚ್. ಪಾಟೀಲ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಕುಸ್ತಿಪಟುಗಳಿಂದ ಪರಸ್ಪರ ಕೈ ಕೊಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಗದಗ ಜಿಲ್ಲೆಯಲ್ಲಿ ರಾಷ್ಟçಮಟ್ಟದ ಕುಸ್ತಿಪಟುಗಳ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಈ ಆಯ್ಕೆಯಲ್ಲಿ ಪ್ರಕ್ರಿಯೆಯಲ್ಲಿ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ತಮ್ಮ ಕ್ರೀಡೆಯನ್ನು ಪ್ರದರ್ಶಿಸಿ ಆಯ್ಕೆಗೆ ಶ್ರಮಿಸಬೇಕು ಒಂದು ವೇಳೆ ಆಯ್ಕೆಯಾಗುವಲ್ಲಿ ವಿಫಲವಾದರೆ ನಿರಾಶರಾಗದೆ ಮತ್ತೆ ಪ್ರಯತ್ನ ಮಾಡಬೇಕೆಂದು ಕಿವಿ ಮಾತು ಹೇಳಿದರು.

ಸಮಾರಂಭದ ಅದ್ಯಕ್ಷತೆಯನ್ನು ಶ್ರೀ ಶರಣು ಗೋಗೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ ಇವರು ವಹಿಸಿಕೊಂಡಿದ್ದರು.

ಈ ಸಮಾರಂಭದಲ್ಲಿ ಶ್ರೀ ವಿನಾಯಕ ಯಂಕAಚಿ ಗದಗ್ ಜಿಲ್ಲಾ ಕುಸ್ತಿ ತರಬೇತಿದಾರರು ಶ್ರೀ ವಸಂತ ಪ ಸಿದ್ದಮ್ಮನಹಳ್ಳಿ ಕುಸ್ತಿ ವ್ಯವಸ್ತಾಪಕರು ಗದಗ ಶ್ರೀ ಅನಿಲ್ ಪ. ಸಿದ್ದಮ್ಮನಹಳ್ಳಿ, ಆದಪ್ಪ ಮಾರೆಪ್ಪ ಮಾರೆಪ್ಪನವರ, ಗಣಪತಿ ಭೋವಿ, ಪಾಂಡು ಜಾಧವ, ಸೋಮಪ್ಪ ಮೇಲ್ಮನಿ, ಬೀರಲಿಂಗೇಶ ಬಿಂಗಿ, ಬಾಲೆಸಾಬ ನದಾಫ, ಬಸವರಾಜ ನವಲಗುಂದ, ಮಾಬುಸಾಬ ಹರಿವಾಣ, ಬಸವರಾಜ ಕರಿಮೇರಿ, ಸಿದ್ದಪ್ಪ ನಾಗೂರ, ಡಾ. ವಿನೋದ ಕುಮಾರ ಕೆ., ಅಂತರಾಷ್ಟಿçÃಯ ಕುಸ್ತಿ ತರಬೇತುದಾರರು, ಸೇರಿದಂತೆ ಸುಮಾರು 100 ರಿಂದ 150 ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಕಾಂಗ್ರೆಸ್ ಯುವ ಮುಖಂಡರು ಹಾಗೂ ಗಣ್ಯರು, ಕ್ರೀಡಾ ತರಬೇತಿದಾದರು, ಯುವಕರು, ಕ್ರೀಡಾ ಅಭಿಮಾನಿಗಳು, ಯುವ ಕುಸ್ತಿ ಪಟುಗಳು ಭಾಗವಹಿಸಿ ಸಮಾರಂಭ ಯಶಸ್ವಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net