

ಗದಗ: ಗದಗ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಾಷ್ಟಿçÃಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಕುಷ್ಟರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನ 2024-25 ರ ಸಮೀಕ್ಷೆಯ ಕಾರ್ಯಕ್ರಮವನ್ನು ನವೆಂಬರ್ 4 ರಿಂದ 21 ರವರೆಗೆ ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಒಬ್ಬ ಆಶಾ ಕಾರ್ಯಕರ್ತೆ ಮತ್ತು ಪುರುಷ ಸ್ವಯಂ ಸೇವಕರ ತಂಡಗಳನ್ನು ರಚಿಸಲಾಗಿದೆ. ಈ ಪರಿಣಿತರ ತಂಡದ ಸದಸ್ಯರು ಮನೆ- ಮನೆಗೆ ಭೇಟಿ ನೀಡಿ ಕುಷ್ಟರೊಗದ ಬಗ್ಗೆ ಮಾಹಿತಿಯನ್ನು ನೀಡಿ ಪ್ರತಿಯೊಬ್ಬರ ದೇಹದ ಚರ್ಮದ ಮೇಲಿನ ಮಚ್ಚೆಗಳನ್ನು ಪರೀಕ್ಷಿಸಿ ಮುಂದಿನ ಚಿಕಿತ್ಸಾ ಕ್ರಮಕ್ಕಾಗಿ ವೈದ್ಯಾಧಿಕಾರಿಗಳು ಅಥವಾ ಚರ್ಮ ರೋಗ ತಜ್ಞರು ಹಾಗೂ ಜಿಲ್ಲಾ ಕುಷ್ಟ ರೋಗ ನಿರ್ಮೂಲನ ಅಧಿಕಾರಿಗಳು/ ತಂಡದವರಲ್ಲಿ ಕಳುಹಿಸಿ ಉಚಿತವಾಗಿ ಸೂಕ್ತ ಚಿಕಿತ್ಸೆಯನ್ನುನೀಡಲಾಗುತ್ತದೆ ಎಂದು ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಷ್ಠರೋಗದ ಬಗ್ಗೆ ಮಾಹಿತಿ : ಕುಷ್ಠರೋಗವು ಒಂದು ಸೋಂಕು ರೋಗ. ಇದು ಒಂದು ಸಾಮಾನ್ಯ ಸೋಂಕು ರೋಗ. ಮೈಕೋ ಬೆಕ್ಟರಿಯಂ ಲೆಪ್ರೆ ಎಂಬ ಸೂಕ್ಷö್ಮ ರೋಗಾಣುವಿನಿಂದ ಬರುವ ಸೋಂಕು ರೋಗ ಇದಾಗಿದೆ. ನಿಧಾನವಾಗಿ ಹರಡುವ ಸೋಂಕು ರೋಗ. ಇದು ಮುಖ್ಯವಾಗಿ ಚರ್ಮ ಹಾಗೂ ನರಗಳಿಗೆ ತಗಲುತ್ತದೆ. ರೋಗ ಬಡವರು, ಶ್ರೀಮಂತರು, ಗಂಡು ಹೆಣ್ಣು ಎಂಬ ಬೇದ ಭಾವವಿಲ್ಲದೇ ಯಾರಿಗಾದರೂ ಬರಬಹುದು. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆಗೊಳಪಡಿಸದಿದ್ದರೆ ಅಂಗವಿಕಲತೆಯನ್ನುAಟು ಮಾಡಬಹುದು.
ಕುಷ್ಠರೋಗದ ಲಕ್ಷಣಗಳು : ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ತಿಳಿ-ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು, ಸ್ಪರ್ಶಜ್ಞಾನ ಇಲ್ಲದಿರುವುದು. ಮುಖದಲ್ಲಿ ಮತ್ತು ಕಿವಿಗಳ ಮೇಲೆ ಎಣ್ಣೆ ಸವರಿದಂತೆ ಹೊಳೆಯುವುದು ಮತ್ತು ಗಂಟುಗಳು ಕಾಣಿಸುವುದು.
ಕುಷ್ಠರೋಗದ ಚಿಕಿತ್ಸೆ : ಬಹು ಔಷಧಿ ಚಿಕಿತ್ಸೆ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ.ಚಿಕಿತ್ಸೆಯ ಅವಧಿ ಆರು ತಿಂಗಳಿನಿAದ ಹನ್ನೆರಡು ತಿಂಗಳು ಇರುತ್ತದೆ. ಕುಷ್ಠರೋಗವನ್ನು ಗುಣಪಡಿಸುವ ಔಷಧಿಗಳು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ದಿವಸ ಉಚಿತವಾಗಿ ದೊರೆಯುತ್ತವೆ.
ಕುಷ್ಠರೋಗವನ್ನು ನಿರ್ಮೂಲನೆ ಮಾಡುವ ವಿಧಾನ : ಹೊಸ ಕುಷ್ಠರೋಗಿಗಳನ್ನು ಪತ್ತೆ ಹಚ್ಚುವುದು ಹಾಗೂ ಬಹು ಔಷಧಿ ಚಿಕಿತ್ಸೆಗೆ ಒಳಪಡಿಸುವುದು. ದಯವಿಟ್ಟು ನಿಮ್ಮ ಮೈ ಮೇಲಿನ ಚರ್ಮದ ತೊಂದರೆಗಳಿದ್ದಲ್ಲಿ ಪರೀಕ್ಷಿಸಿಕೊಳ್ಳಬೇಕು. ನಿಮ್ಮ ಕುಟುಂಬದ ಸದಸ್ಯರಿಂದ ನಿಮ್ಮ ನಿಮ್ಮಲ್ಲೆ ಪರೀಕ್ಷಿಸಿಕೊಳ್ಳಿ.