

ಸಿಎಂ ಸಿದ್ದರಾಮಯ್ಯ, ಸಚಿವ ಎಚ್.ಕೆ. ಪಾಟೀಲ, .ಎಂ. ರೇವಣ್ಣ ಭಾಗಿ
ವಿಜಯವಾಣಿ ಸುದ್ದಿಜಾಲ ಗದಗ
ನಗರದ ವಿವೇಕಾನಂದ ಸಭಾಗಣದಲ್ಲಿ ದಿ. ಕರ್ನಾಟಕ ಕುರುಬರ ಸಂ, ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂ ನಿಯಮಿತದ ಶತಮಾನೋತ್ಸವ ಕಾರ್ಯಕ್ರಮವನ್ನು ಜೂ. 3ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ನಿಯಮಿತದ ಅಧ್ಯಕ್ಷ ವಾಸಪ್ಪ ಕುರಡಗಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನೋತ್ಸವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು. ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಶತಮಾನೋತ್ಸವ ನೆನಪಿನ ಕಾಣಿಕೆ ಬಿಡುಗಡೆಗೊಳಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶತಮಾನೋತ್ಸವದ ಲಾಂಛನ ಬಿಡುಗಡೆಗೊಳಿಸುವರು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಎಂ. ರೇವಣ್ಣ ಶತಮಾನೋತ್ಸವ ಕೈಪಿಡಿ ಬಿಡುಗಡೆಗೊಳಿಸಲಿದ್ದಾರೆ ಎಂದು ಹೇಳಿದರು.
ಸ್ವಾತಂರ್ತ್ಯ ಪೂರ್ವ 1921ರಲ್ಲಿ ಕುರುಬ ಸಮಾಜದ ಏಳಿಗೆಗಾಗಿ ಕರುಬ ಸಮಾಜದ ಮುಖಂಡರಾದ ಹನಮಂತಪ್ಪ ವಾಸಪ್ಪ ಕುರಡಗಿ, ಪವಾಡಿಗೌಡ ಫ. ಪಾಟೀಲ, ಚನ್ನಬಸಪ್ಪ ನೀ. ಆಲದಕಟ್ಟಿ ಅವರು ಕುರುಬ ಸಮಾಜದ ಸಾಮಾಜಿಕ, ಶೈಕ್ಷಣಿಕ ಹಾಗೂ ಆಥಿರ್ಕ ಬಲವರ್ಧನೆಗಾಗಿ ದಿ. ಕರ್ನಾಟಕ ಕುರುಬರ ಸಂ ಹಾಗೂ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂ ನಿಯಮಿತ ಸ್ಥಾಪಿಸಿದರು. ಕಳೆದ 100 ವರ್ಷಗಳಿಂದ ಕುರುಬ ಸಮಾಜದ ಉನ್ನತಿಗಾಗಿ, ಉತ್ತರ ಕರ್ನಾಟಕದ ಜನತೆಗೆ ಶೈಕ್ಷಣಿಕ, ಸಾಮಾಜಿ ಹಾಗೂ ಆಥಿರ್ಕವಾಗಿ ಸಹಾಯ ಮಾಡುತ್ತ ಬಂದಿದೆ ಎಂದರು.
ಮುಂಬಯಿ ಕರ್ನಾಟಕ ಭಾಗವಾಗಿದ್ದ ಗದಗ ನಗರದಲ್ಲಿ ಅಕ್ಟೊಬರ್ 10, 1921 ರಲ್ಲಿ ಮುಂಬಯಿ ಕರ್ನಾಟಕ ಹಾಲುಮತ ಕೊ&ಆಪ&ಕ್ರೆಡಿಟ್ ಸೊಸೈಟಿ ಲಿ, ಸ್ಥಾಪನೆ ಆಯಿತು. ಹರ್ಲಾಪುರು ಗ್ರಾಮದ ಸೋಮನಗೌಡ ಬಸನಗೌಡ ಪಾಟೀಲ ನೇತೃತ್ವದಲ್ಲಿ ಕೊಆಪ್ ಕ್ರೆಡಿಟ್ ಮೊದಲನೆಯ ಸಭೆ ಜರುಗಿತು. ಗದಗ ನಗರದ 88 ಜನ ಸದಸ್ಯರೊಂದಿಗೆ 3 ರೂ. ಮುಖಬೆಲೆಯ 264 ರೂ.ಗಳ ಶೇರು ಸಂಗ್ರಹಗಳೊಂದಿಗೆ ಸೊಸೈಟಿ ತನ್ನ ಕಾರ್ಯ ಪ್ರಾರಂಭಿಸಿತು ಎಂದು ಕುರುಬ ಸಂದ ಶ್ರಮದಾನವನ್ನು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮೋಹನ ದುರಗಣ್ಣವರ, ದೇವಪ್ಪ ಗುಂಡಿಕೇರಿ, ವೀರೇಂದ್ರ ಪಾಟೀಲ, ಮಲ್ಲಪ್ಪ ಉಮಚಗಿ, ಬಸವರಾಜ ಕಂಬಳಿ, ಸತೀಶಗೌಡ ಪಾಟೀಲ, ಡಾ. ಶ್ರೀಧರ್ ಕುರಡಗಿ, ಸಚಿನ ಕುರಡಗಿ ಸೇರಿ ಇತರರು ಇದ್ದರು.