

ವಿಜಯವಾಣಿ ಸುದ್ದಿಜಾಲ ಗದಗ
ಶೋಚನೆಗೆ ಒಳಪಟ್ಟ ಜಾತಿಗಳು ಅಭಿವೃದ್ಧಿ ಹೊಂದಬೇಕಾದರೆ ಜಾತಿ ಸಂಟನೆ ಅವಶ್ಯ. ಶೈಕ್ಷಣಿಕ, ಸಂಟನೆ ಮತ್ತು ಹೋರಾಟ ಮೂಲಕ ಹಿಂದುಳಿದ ಜಾತಿಗಳು ಅಭಿವೃದ್ಧಿ ಆಗಬಹುದು. ಇದನ್ನೇ ಅಂಬೇಡ್ಕರ್ ಅವರು ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗದ ಕನಕ ಭವನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಕಮಕೋತ್ಸವ, ತಾಲೂಕು ಕುರುಬ ಸಂದ ರಜತ ಮಹೋತ್ಸವ ಹಾಗೂ ಕೀರಪ್ಪ ಹೆಬಸೂರು ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ದೇಶದಲ್ಲಿ ಜಾತಿ ವ್ಯವಸ್ಥೆಗೆ ಚಲನವೇ ಇಲ್ಲದಂತಾಗಿದೆ. ಚಲನವಿಲ್ಲದೇ ಹೋದರೆ ಸಮಾಜ ಆಥಿರ್ಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವೇ ಇಲ್ಲ. ಹಿಂದುಳಿದ ಮತ್ತು ಶೂದ್ರರನ್ನು ದೇವರ ಹೆಸರಲ್ಲಿ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ದೇವರು ಮತ್ತು ಜಾತಿ ಹೆಸರಲ್ಲಿ ನಮ್ಮಂತವರು ಮಾರು ಹೋಗಿದ್ದಾರೆ. ಸಮ ಸಮಾಜ ನಿರ್ಮಾಣ ಆಗಬೇಕು. ಬುದ್ಧ, ಬಸವ ಹಾಗೂ ಅಂಬೇಡ್ಕರ ಇದನ್ನೇ ಹೇಳಿದ್ದರು. ಅಂಬೇಡ್ಕರ್ ಸಂವಿಧಾನವನ್ನೇ ಕೊಟ್ಟರು ಎಂದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾಜ ಸುಧಾರಕ ಎಂದು ಹೇಳಿಕೊಂಡವರಿಂದಲೇ ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿತು. ಜಾತಿ ವ್ಯವಸ್ಥೆ ಹೋಗಲಾಡಿಸಲು ಸಾಮಾಜಿಕ, ಶೈಕ್ಷಣಿಕ ಶಕ್ತಿ ತುಂಬವ ಕೆಲಸ ಮಾಡಬೇಕು. ಪ್ರತಿಯೊಬ್ಬರು ಸಮಾಜಮುಖಿ ಆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಇದೇ ಮನುಷ್ಯದ ಮೂಲ ಧರ್ಮ ಆಗಬೇಕು. ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಕುರುಬ ತಾಲೂಕು ಸಂ 25 ವರ್ಷ ಪೂರೈಸಿದ್ದು ಸಂದ ಬಲವರ್ಧನೆ ಸೂಚಿಸುತ್ತಿದೆ. ಕುರುಬ ಸಂ ಸಮಾಜದ ಏಳ್ಗೆಗೆ ಶ್ರಮೀಸಲಿ ಎಂದು ಸಿದ್ದರಾಮಯ್ಯ ಹೇಳಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕೃಷ್ಣ ಮೇಲ್ದಂಡೆ ಮೂರನೇ ಹಂತದ ಯೋಜನೆ ರ್ಪೂಣಗೊಳಿಸಲು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದಾರೆ. 73 ಸಾವಿರ ಎಕರೆ ಭೂಸ್ವಾಧಿನ ಪಡಿಸಿಕೊಂಡು ಯೋಜನೆ ರ್ಪೂಣ ಗೊಳಿಸಲಾಗುವುದು. ನೀರಾವರಿಯಿಂದ ಉತ್ತರ ಕರ್ನಾಟಕ ಭಾಗದ ರೈತರ ಆಥಿರ್ಕ ಬಲವರ್ಧನೆಗೆ ಸಹಕಾರಿ ಆಗಲಿದೆ ಎಂದರು. ಕುರುಬ ಸಮುದಾಯ ರಾಜಕೀಯದಲ್ಲಿ ಮುಂಚೂಣಿಯಲ್ಲಿ ಇರುವ ಸಮಾಜ. ಕಾಟನ್ ಸೇಲ್ ಸೊಸೈಟಿ ಉಳಿದು, ಬೆಳೆಯಲು ಹಲವು ಕುರುಬ ಸಮಾಜದ ಮುಖಂಡರು ಕಾರಣರು ಎಂದರು.
ಎಚ್. ಎಂ. ರೇವಣ್ಣ ಮಾತನಾಡಿ, ಬಿಜೆಪಿ ಮುಖಂಡರು ಭಾವನೆ ಗಳೊಂದಿಗೆ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಜಿಲ್ಲಾ ಕುರುಬ ಸಂದ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಕಡಗ ತೋಡಿಸಿ, ಬೆಳ್ಳಿ ಗದ ನೀಡಿ ಗೌರವಿಸಲಾಯಿತು. ಸಲೀಂ ಅಹಮ್ಮದ ತಮ್ಮ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕುರುಬ ಸಂಕ್ಕೆ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ, ಶಾಸಕ ಎನ್. ಎಚ್. ಕೋನರೆಡ್ಡಿ, ಫಕ್ಕಿರಪ್ಪ ಹೆಬಸೂರು, ಮಾಜಿ ಶಾಸಕ ಬಿ. ಆರ್. ಯಾವಗಲ್ಲ, ವಾಸಣ್ಣ ಕುರಡಗಿ, ಮಾಜಿ ಶಾಸಕ ಡಿ. ಆರ್. ಪಾಟೀಲ ಇತರರು ಇದ್ದರು.
ಬಾಕ್ಸ್:
ಕುರುಬರಿಗೂ ಪ್ರಾತಿನಿಧ್ಯ ಕೊಡಿ: ಎಚ್.ಎಂ. ರೇವಣ್ಣ
ಗದಗ: ಜಿಲ್ಲೆಯಲ್ಲೂ ಕುರುಬರಿಗೂ ರಾಜಕೀಯ ಪ್ರತಿನಿಧ್ಯ ಕೊಡಿ ಎಂದು ವೇದಿಕೆಯಲ್ಲೇ ಮಾಜಿ ಸಚಿವ, ಗ್ಯಾರಂಟಿ ಯೋಜನೆ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್. ಎಂ. ರೇವಣ್ಣ ಹೇಳಿದರು.
ವೇದಿಕೆಯಲ್ಲಿ ಪ್ರಾಸ್ತಾವಿಕ ಮಾತನಾಡುವ ವೇಳೆ ಡಿ.ಆರ್. ಪಾಟೀಲ ಭಾಷಣ ಸಂದರ್ಭದಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನು ಪುನರುಚ್ಚರಿಸಿದರು. ಕುರುಬರಿಂದ ಬೋಣಿಗೆ, ಕುರುಬರಿಂದ ಮೊದಲ ಮತ, ಗುದ್ದಲಿ ಪೂಜೆ ಮಾಡಿಸಲಾಗುತ್ತದೆ. ಕುರುಬರು ಶುಬ ಶಕುನ ಎಂದು ಡಿ.ಆರ್. ಪಾಟೀಲ ಹೇಳಿದ್ದರು. ಎಚ್. ಎಂ. ರೇವಣ್ಣ ಮಾತನಾಡುವ ವೇಳೆ ಡಿ.ಆರ್. ಪಾಟೀಲ ಭಾಷಣ ಸಂದರ್ಭದಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನು ಪುನರುಚ್ಚರಿಸಿ, ಜಿಲ್ಲೆಯಲ್ಲಿ ಕುರುಬರಿಗೂ ರಾಜಕೀಯ ಪ್ರಾತಿನಿಧ್ಯ ಕೊಡಬೇಕು ಎಂದು ಹೇಳಿದರು.