ಮಹಾಕುಂಭ ಮೇಳಕ್ಕೆ ಗದಗ ನಗರದಿಂದ ಪ್ರಯಾಣ

Mahakumbha Melakke Gadag Nagardinda Prayan News Photo
Published on

ಗದಗ: ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಗದಗ ನಗರದ ಎಪಿಎಂಸಿ ವಾಕಿಂಗ್ ಮಿತ್ರರು ಹಾಗೂ ಗದಗ ಜಿಮಖಾನಾ ಕ್ಲಬ್ ಸದಸ್ಯರಾದ ಪ್ರಕಾಶ ಉಗಲಾಟದ, ಮುರುಘರಾಜೇಂದ್ರ ಬಡ್ನಿ, ಉಮೇಶ ನಾಲ್ವಾಡ, ಮಧುಸೂಧನ ಪುಣೇಕರ, ಚನ್ನವೀರಪ್ಪ ಹುಣಸಿಕಟ್ಟಿ, ರಾಜು ಮ¯್ಲÁಡದ, ಉಮೇಶ ಹೂಗಾರ, ಸಂಜಯ ಬಾಗಮಾರ, ವಿಜಯಕುಮಾರ ಶಿವಪ್ಪಗೌಡ್ರ, ಚಂದ್ರಶೇಖರ ಸುರಕೋಡ, ಶಂಕ್ರಪ್ಪ ಶಾನಭೋಗರ, ಸಿದ್ರಾಮಪ್ಪ ಉಮಚಗಿ, ಗಂಗಣ್ಣ ಮುನವಳ್ಳಿ, ಸಂಪತ್‌ಕುಮಾರ ಹುಣಸಿಕಟ್ಟಿ, ಕೆ. ಎಸ್. ಕೋರಿಮಠ, ಅಶೋಕ ಪಾಟೀಲ ಇದೇ ದಿನಾಂಕ ೧೨-೦೧-೨೦೨೫ ರಂದು ಪ್ರಯಾಣ ಬೆಳಸಲಿರುವರು.

ಇದರ ಅಂಗವಾಗಿ ದಿನಾಂಕ ೯-೧-೨೦೨೫ ರಂದು ಗದಗ ಜಿಮಖಾನಾ ಕ್ಲಬ್‌ನಲ್ಲಿ ಶುಭ ಹಾರೈಸಿ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಗದಗ ಜಿಮಖಾನಾ ಕ್ಲಬ್ ಉಪಾಧ್ಯP್ಷÀರಾದ ಸಂಗಣ್ಣ ಬಂಗಾರಶೆಟ್ರ ಮಾತನಾಡಿ ಎಲ್ಲ ವ್ಯಾಪಾರಸ್ಥರು ಹೋಗುತ್ತಿದ್ದು, ನಿಮ್ಮ ವ್ಯಾಪಾರ ಅಭಿವೃದ್ಧಿಯ ಜೊತೆಗೆ ಗದಗ ನಗರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಗದಗ ಜಿಮಖಾನಾ ಕ್ಲಬ್ ಕಾರ್ಯದರ್ಶಿ ಮಲ್ಲಣ್ಣ ಸಿಕ್ಕೇದೇಸಾಯಿ, ಹುಬ್ಬಳ್ಳಿ ಪಿ.ಎಲ್.ಡಿ. ಬ್ಯಾಂಕಿನ ಅಧ್ಯP್ಷÀರಾದ ಗಂಗಣ್ಣ ಗಾಣಿಗೇರ, ಗದಗ ಚೇಂಬರ್ ಆಫ್ ಕಾಮರ್ಸಿನ ಅಧ್ಯP್ಷÀರಾದ ತಾತನಗೌಡ ಪಾಟೀಲ, ಗದಗ ಮರ್ಚಂಟ್ ಲಿಬರಲ್ ಬ್ಯಾಂಕಿನ ಉಪಾಧ್ಯP್ಷÀರಾದ ಶರಣಪ್ಪ ಕುರಡಗಿ, ಗದಗ ಚೇಂಬರ್ ಆಫ್ ಕಾಮರ್ಸಿನ ಮಾಜಿ ಅಧ್ಯP್ಷÀರಾದ ರಾಮನಗೌಡ ದಾನಪ್ಪಗೌಡ್ರ, ಶರಣು ಗದಗ ಮಾತನಾಡಿ ಶುಭ ಹಾರೈಸಿದರು.

ಪ್ರಯಾಗರಾಜನಲ್ಲಿ ಜರುಗುವ ಮಹಾಕುಂಭ ಮೇಳಕ್ಕೆ ಹೋರಟಿರುವ ಉಮೇಶ ಹೂಗಾರ ಮಾತನಾಡಿ ಕಳೆದ ಕುಂಭ ಮೇಳದಲ್ಲಿ ನಾನು ಸೇವೆ ಸಲ್ಲಿಸಿz್ದೆ, ಈ ವರ್ಷದ ಕುಂಭ ಮೇಳದಲ್ಲಿ ಪಾಲ್ಗೊಳ್ಳುವದು ನನ್ನ ಸಂಕಲ್ಪವಾಗಿತ್ತು, ಅದು ನಿಮ್ಮೆಲ್ಲರೊಂದಿಗೆ ಈಡೇರಲಿದೆ ಎಂದರು. ಗದಗ ಚೇಂಬರ್ ಆಫ್ ಕಾಮರ್ಸಿನ ಮಾಜಿ ಅಧ್ಯP್ಷÀರಾದ ಮಧುಸೂಧನ ಪುಣೇಕರ ಮಾತನಾಡಿ ಬ್ರಹಸ್ಪತಿ ಮಕರ ರಾಶಿಯ ಸೂರ್ಯ-ಚಂದ್ರರು ಉತ್ತಮ ಸ್ಥಿತಿಯಲ್ಲಿz್ದÁಗ ಮಹಾಕುಂಭ ಮೇಳ ಜರುಗುವುದು ಇಂತಹ ಕುಂಭಮೇಳದಲ್ಲಿ ಮಹಾನ್ ಸಾಧು-ಸಂತರು ಭಾಗವಹಿಸುವರು ಅವರೊಂದಿಗೆ ನಾವೂ ಭಾಗವಹಿಸುವುದು ನಮ್ಮೆಲ್ಲರ ಭಾಗ್ಯ ಎಂದು ತಿಳಿಸಿದರು.

ಮಹಾಕುಂಭ ಮೇಳಕ್ಕೆ ಹೊರಟಿರುವ ತಂಡದ ನೇತೃತ್ವದ ವಹಿಸಿರುವ ಚನ್ನವೀರ ಹುಣಸಿಕಟ್ಟಿ ಮಾತನಾಡಿ ಉತ್ತರ ಭಾರತದಲ್ಲಿ ಹೆಚ್ಚು ಚಳಿ ಇರುವುದರಿಂದ ಎಲ್ಲರೂ ಬೆಚ್ಚನೆಯ ಉಡುಗೆಯನ್ನು ತರಬೇಕು, ಅವಶ್ಯವಿದ್ದರು ಬಿ೧೨ ಲಸಿಕೆ ಹಾಕಿಸಿಕೊಳ್ಳಬೇಕು, ತಮಗೆ ಬೇಕಾದ ಔಷಧಿಗಳನ್ನು ತೆಗೆದುಕೊಂಡು ಬರಬೇಕು. ನಮ್ಮಲ್ಲಿ ಇಳಿವಯಸ್ಸಿನ ಹಾಗೂ ಮಧ್ಯಮ ವಯಸ್ಸಿನವರು ಇರುವುದರಿಂದ ಒಬ್ಬರಿಗೊಬ್ಬರು ಪರಸ್ಪರ ಸಹಕಾರದಿಂದ ವರ್ತಿಸಬೇಕು, ಈ ಕುಂಭ ಮೇಳ ೪೫ ದಿನಗಳ ಕಾಲ ನಡೆಯುವುದರಿಂದ ಮತ್ತಾರಾದರೂ ಮಹಾಕುಂಭ ಮೇಳಕ್ಕೆ ಹೋಗಲು ಇಚ್ಛಿಸಿದರೆ ಇನ್ನೊಂದು ತಂಡವನ್ನು ರಚಿಸಿ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರಾಚಪ್ಪ ವಾಲಿ, ಸಂಗರಾಜ ದೇಸಾಯಿ, ಅಶೋಕ ಸಂಕಣ್ಣವರ, ಮಹೇಶ ಮಾನ್ವಿ, ಸಿದ್ಧಣ್ಣ ಹಸಬಿ, ಆಯ್. ಎಲ್. ಪಾಟೀಲ, ಧರ್ಮಾಯತಗೌಡ್ರ, ವಾಕಿಂಗ್ ಮಿತ್ರರಾದ ಸಿದ್ಧಣ್ಣ ಹಲವಾಗಲಿ, ಮಹಾಂತೇಶಗೌಡ ಪಾಟೀಲ, ಮೌಲಾಲಿ ಮು¯್ಲÁನವರ, ರಮೇಶ ಶಿಗ್ಲಿ, ಅಶೋಕ ಭಗವತಿ, ರೇಣುಕಾಪ್ರಸಾದ ಹಿರೇಮಠ, ಬಾಪುಗೌಡ ಸಂಕನಗೌಡ, ಬಾಬುಗೌಡ ಮಲ್ಲನಗೌಡ್ರ, ಅರವಿಂದ ಕಾಮತ ಉಪಸ್ಥಿತರಿದ್ದರು. ವಿಶ್ವನಾಥ ಯಳಮಲಿ ಮತ್ತು ಎಲ್ಲ ವಾಕಿಂಗ್ ಮಿತ್ರರು ಕೂಡಿಕೊಂಡು ಎಲ್ಲರಿಗೂ ಶಾಲು ಹೊದಿಸಿ, ಟೋಪಿ ಹಾಕಿ ತಿಲಕವಿಟ್ಟು ವಂದನೆಗಳನ್ನು ತಿಳಿಸಿ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net