

ಗುಣಮಟ್ಟದ ಶಿಕ್ಷಣಕ್ಕೆ ಕೆಎಸ್ಎಸ್ ಮಹಾವಿದ್ಯಾಲಯ ಮಾದರಿ: ಡಾ. ಎಸ್. ಎಸ್. ಜಕಬಾಳ
ವಿಜಯವಾಣಿ ಸುದ್ದಿಜಾಲ ಗದಗ
ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದು ಉತ್ತಮ ಜೀವನದ ಅಭಿವೃದ್ಧಿಯನ್ನು ಸೃಷ್ಠಿಸುವ ಅಡಿಪಾಯ ಆಗಿದೆ. ಜೀವನದ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಅಂತರ್ಗತ ಶಿಣವು ವ್ಯಕ್ತಿಯನ್ನು ಉನ್ನತಮಟ್ಟದ ಸ್ಥಾನದ ಕಡೆಗೆ ಕೊಂಡೊಯ್ಯುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಎಸ್. ಎ್. ಜಕಬಾಳ ಹೇಳಿದರು.
ನಗರದ ಕೆಎಸ್ಎಸ್ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅದ್ಯಯನ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪದವಿ ವಿದ್ಯಾಥಿರ್ಗಳ ಬಿಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅತ್ಯುತ್ತಮ ಗುಣಮಟ್ಟದ ಶಿಣವನ್ನು ಕೊಡುವುದರಲ್ಲಿ ಕನಕದಾಸ ಶಿಣ ಸಮಿತಿಯ ಕೆಎಸ್ಎಸ್ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅದ್ಯಯನ ಕೇಂದ್ರವು ಮಾದರಿ ಆಗಿದೆ. ವಿದ್ಯಾಥಿರ್ಗಳು ಸಾಧ್ಯವಾದಷ್ಟು ಮೊಬೈಲ್ ಗಳಿಂದ ದೂರವಿದ್ದು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯವರಿಗೆ ಓದಿದ ಮಹಾವಿದ್ಯಾಲಯಕ್ಕೆ ಮತ್ತು ನಾಡಿಗೆ ಕೀತಿರ್ತರಬೇಕು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ. ಬಿ. ಗವಾನಿ ಮಾತನಾಡಿ, ವಿದ್ಯಾಥಿರ್ಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚಿನ ಜ್ಞಾನ ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕು ಹಾಗೂ ಪದವಿಯ ಜೊತೆಗೆ ವಿಶೇಷ ಕೌಶಲ್ಯದ ಜ್ಞಾನವನ್ನು ಹೊಂದುವುದು ಅತೀ ಅವಶ್ಯ. ಮಹಾವಿದ್ಯಾಲಯವು ಶೈಣಿಕ ಗುಣಮಟ್ಟ ಸುಧಾರಿಸಿ ಅತಿಹೆಚ್ಚು ರ್ಯಾಂಕ್ಗಳನ್ನು ಪಡೆದಿದ್ದು, ನ್ಯಾಕ್ನಿಂದ ಎ+ ಗ್ರೇಡ ಪಡೆದ ಜಿಲ್ಲೆಯ ಏಕೈಕ ಮಹಾವಿದ್ಯಾಲಯ ಆಗಿದೆ ಎಂದರು. ಶಿಣ ತ ಡಾ. ಬಿ. ಎ್. ದಂಡಿನರವರ ದೂರದೃಷ್ಠಿ, ಪ್ರಾಮಾಣಿಕತೆ, ತ್ಯಾಗದಿಂದ ಶಿಕ್ಷಣ ಸಂಸ್ಥೆ ಆಗಾದವಾಗಿ ಬೆಳೆದಿದೆ ಎಂದು ಗವಾನಿ ಹೇಳಿದರು.
ಎಂ. ಬಿ. ಡಂಬಳ, ಪ್ರೊ. ವಿ. ಎಚ್. ಕೊಳ್ಳಿ, ಪ್ರೊ. ಎಸ್. ಬಿ. ಪಲ್ಲೇದ, ಪ್ರೊ. ಐ. ಕೆ.ಪಟ್ಟಣಶೆಟ್ಟಿ. ಪ್ರೊ. ಎಸ್. ಬಿ. ಅಳಗುಂಡಗಿ. ಷಣ್ಮುಖ ಕಾರಬಾರಿ, ಡಾ. ಎ. ಕೆ. ಪೂಜಾರ, ಪ್ರೊ. ಎಸ್. ಕೆ. ವಂಡಕರ ಇತರರು ಇದ್ದರು.