ಜಿಲ್ಲಾಡಳಿತ ಭವನಕ್ಕೆ ಬಸ್​ ಸಂಚಾರ ಒದಗಿಸಿ: ಬಸವರಾಜ ಬಳ್ಳಾರಿ

12GDG04
Published on

ಗದಗ : ಗದಗ ಜಿಲ್ಲಾಡಳಿತ ಭವನಕ್ಕೆ ಬಸ್​ ಸಂಚಾರ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರ ಸಂದ ಜಿಲ್ಲಾ ಅಧ್ಯ ಡಾ. ಬಸವರಾಜ ಬಳ್ಳಾರಿ ಅವರ ನೇತೃತ್ವದಲ್ಲಿ ಕೆಎಸ್​ಆರ್​ಟಿಸಿ ಗದಗ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಈ ಹಿಂದೇ ಗದಗ ಜಿಲ್ಲಾಡಳಿತ ಭವನಕ್ಕೆ ಬಸ್​ ಸಂಚಾರ ಕಲ್ಪಿಸಲಾಗಿತ್ತು. 3 ತಿಂಗಳ ಹಿಂದೇ ಈ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಯಿತು. ಗದಗ ಜಿಲ್ಲಾಡಳಿತ ಭವನಕ್ಕೆ ದಿನ ನಿತ್ಯ ನೂರಾರು ನಾಗರಿಕರು ಕಾರ್ಯ ನಿಮಿತ್ಯ ಬರುತ್ತಾರೆ. ಅವರು ಸಂಚಾರಕ್ಕಾಗಿ ಪರದಾಡುತ್ತಿರುವ ಹಿನ್ನೆಲೆಯಲ್ಲಿ ತಣವೇ ಗದಗ ಜಿಲ್ಲಾಡಳಿತ ಭವನಕ್ಕೆ ಬಸ್​ ಸಂಚಾರ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಬಸವರಾಜ ಬಳ್ಳಾರಿ ಹಕ್ಕೊತ್ತಾಯ ಮಾಡಿದರು.

ಡಿ. ಎಸ್​. ತಳವಾರ, ಎಂ. ಎಂ. ನಿಟ್ಟಾಲಿ, ಮಾರುತಿ ಮಂಗಳಾಪೂರ, ಅರವಿಂದ ಬಂಡಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net