ಅವರು ವಿವೇಕಾನಂದ ರೋಡ ನಾಲ್ಕನೆ ಕ್ರಾಸ್ ಮಾಲಿಪಾಟೀಲ ಆಸ್ಪತ್ರೆ ಹತ್ತಿರ ಕಮೀತ್ಕರ ಕಾಂಪ್ಲೇಕ್ಷನಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸ್ಥಾಪನೆಗೊಂಡ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತೀನ ಸಹಕಾರ ಸಂಘ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ನೂತನ ಕಾರ್ಯಾಲಯ ಉದ್ಘಾಟಿಸಿ ಪೂಜೆ ಸಲ್ಲಿಸಿ ಶುಭಕೋರಿ ಸಮಾಜದ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ ಸವಿತಾ ಸಮಾಜವು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು ಉತ್ಸಾಹಿ ಯುವ ಸೇವಕರಾದ ಕೃಷ್ಣಾ ಎಚ್ ಹಡಪದ ಅವರು ಮಾಡುತ್ತಿರುವ ಅನೇಕ ರೀತಿಯಲ್ಲಿ ಸಮಾಜ ಪರ ರಚನಾತ್ಮಕ ಸೇವಾ ಕಾರ್ಯಕ್ಕೆ ಸಮಸ್ತ ಸವಿತಾ ಕ್ಷೌರಿಕ ಬಾಂಧವರು ಕೈಜೋಡಿಸುವ ಮೂಲಕ ಅವರ ಶಕ್ತಿ ತುಂಬಲು ಮಾಂದಾಗಬೇಕು ಎಂದು ಕರೆ ನೀಡಿದರಲ್ಲದೆ ಗದಗ ಜಿಲ್ಲಾ ಸವಿತಾ ಸಮಾಜದ ಹಲವು ಜ್ವಲಂತ ಸಮಸ್ಯೆಗಳ ನಿವಾರಣೆ ಬಗ್ಗೆ ಮತ್ತು ತಮ್ಮೇಲ್ಲರ ಬಹು ದೊಡ್ಡ ಅಪೇಕ್ಷೆಯಂತೆ ಗದಗ ಸವಿತಾ ಸಮಾಜದ ಉತ್ಸಾಹಿ ಮುಕಂಡರಾದ ಕೃಷ್ಣಾ ಎಚ್ ಹಡಪದ ಅವರಿಗೆ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ನಮ್ಮ ಪೂಜ್ಯ ತಂದೆಯವರು ಹಾಗೂ ಸಚಿವರಾದ ಎಚ್ ಕೆ ಪಾಟೀಲಜಿ ಅವರ ಗಮನ ಸೆಳೆಯುವ ಜತೆಗೆ ಸವಿತಾ ಸಮಾಜದ ಕ್ಷೌರಿಕ ಕಾರ್ಮಿಕರ ಹಾಗೂ ಸೇವಕರ ಪರವಾಗಿ ಮತ್ತು ತಮ್ಮ ಸವಿತಾ ಸಮಾಜದ ಸಮಘ್ರ ಅಭಿವೃದ್ಧಿಗೆ ಸದಾ ದ್ವನಿಯಾಗಿ ನಿಲ್ಲುತ್ತೆನೆ ಎಂದು ಕೃಷ್ಣಗೌಡ್ರ ಎಚ್ ಪಾಟೀಲರು ಭರವಸೆ ನೀಡಿ ಮಾತನಾಡಿದರು