

ವಿಜಯವಾಣಿ ಸುದ್ದಿಜಾಲ ಗದಗ
ಹಿಂದೂ ಸಂಟನೆಯ ಕಾರ್ಯಕರ್ತ ಅನಿಲ ಮುಲ್ಲಾಳ ಮೇಲೆ ಹಲ್ಲೆ ಖಂಡಿಸಿ ಹಾಗೂ ವಿಡಿಯೋ ಒಂದರಲ್ಲಿ ಮುಸ್ಲಿಂ ಯುವಕ ಹಿಂದೂಗಳನ್ನು ಭಯ ಬೀಳುಸುವ ರೀತಿಯಲ್ಲಿ ಹಾಗೂ ಕೋಮುಗಲಭೆ ಸೃಷ್ಟಿಸುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಕ್ರಾಂತಿ ಸೇನಾ ಸಂಟನೆಯು ಬುಧವಾರ ನಗರದ ಟಾಂಗಾಕೂಟ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಪಾದಯಾತ್ರೆ ಮೂಲಕ ಶಹರ ಪೊಲೀಸ್ ಠಾಣೆಗೆ ತೆರಳಿ ಸಿಪಿಐ ಗೆ ಮನವಿ ಸಲ್ಲಿಸಿತು.
ಕ್ರಾಂತಿ ಸೇನಾ ಜಿಲ್ಲಾಧ್ಯ ಬಾಬು ಬಾಕಳೆ ಮಾತನಾಡಿ, ಹಿಂದೂ ಸಂಟನೆಯ ಕಾರ್ಯಕರ್ತ ಅನಿಲ ಮುಲ್ಲಾಳ ಮೇಲೆ ಮುಸ್ಲಿಂ ಸಮುದಾಯದ 20ಕ್ಕೂ ಹೆಚ್ಚು ಜನ ಸೇರಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದಾರೆ. ಇದನ್ನು ಕ್ರಾಂತಿ ಸೇನಾ ಸಂಟನೆ ಹಾಗೂ ಹಿಂದೂ ಸಮಾಜ ಉಗ್ರವಾಗಿ ಖಂಡಿಸುತ್ತದೆ . ವಿಡಿಯೋದಲ್ಲಿ ಒಬ್ಬ ಮುಸ್ಲಿಂ ಯುವಕ ಅವರ ಸಮಾಜದ ಕೆಲವರ ಮುಂದೆ ಹಿಂದೂಗಳನ್ನು ಭಯ ಬೀಳಿಸುವ ಹಾಗೂ ಶಾಂತಿ ಕದಡುವ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆ ನೀಡಿದ್ದಾನೆ. ಅವರ ಸಮಾಜದ ಕೆಲವರು ಚಪ್ಪಾಳೆ ತಟ್ಟುವ ಮುಖಾಂತರ ಅವನನ್ನು ಬೆಂಬಲಿಸಿದ್ದಾರೆ. ಇದು ಖಂಡನೀಯ ವಿಷಯವಾಗಿದ್ದು, ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕ್ರಾಂತಿ ಸೇನಾ ಜಿಲ್ಲಾ ಗೌರವ ಕಾರ್ಯದಶಿರ್ ಪ್ರವಿಣ ಹಬೀಬ ಮಾತನಾಡಿ, ಪ್ರಚೋದನಕಾರಿ ಹೇಳಿಕೆ ನೀಡಿರುವ ಮುಸ್ಲಿಂ ಯುವಕನ ಈ ವಿಡಿಯೋವನ್ನು ಸೂಕ್ತ ತನಿಖೆ ಮಾಡಿ ಆ ವಿಡಿಯೋದಲ್ಲಿ ಇರುವಂತ ಎಲ್ಲರ ಮೇಲೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕೋಮುಗಲಭೆ ಸೃಷ್ಟಿಸುತ್ತಿರುವ ಮುಸ್ಲಿಂ ಗುಂಡಾ ಗುಂಪಿನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಜಿಲ್ಲಾ ಉಪಾಧ್ಯ ಭೀಮಾ ಕಾಟಿಗಾರ, ಶಿವಕುಮಾರ ಕುಂಬಾರ, ಭರತ ಮಾರಪ್ಪನವರ, ಪವನ ಪುರದ ಇತರರು ಇದ್ದರು.