

ವಿಜಯವಾಣಿ ಸುದ್ದಿಜಾಲ ಗದಗ
ಭಕ್ತರ ಉದ್ದಾರವೇ ಗುರುವಿನ ಸತ್ಕಾರ್ಯವಾಗಿದೆ. ಈ ದಿಸೆಯಲ್ಲಿ ಭಕ್ತಾಧಿಗಳಿಗೆ ಗುರಿ ಸಾಧಿಸಲು ಗುರುವಿನ ಅಗತ್ಯವಿದೆ. ಗುರು ಮಾರ್ಗದರ್ಶನ ಮೂಲಕ ತಮ್ಮ ಗುರಿಯನ್ನು ಸಾಧಿಸಿಕೊಳ್ಳಬೇಕು ಎಂದು ಗವಿಸಿದ್ಧಲಿಂಗ ಶ್ರೀಗಳು ಹೇಳಿದರು.
ಭಾನುವಾರ ನಡೆದ ಕೊಟ್ಟೂರೇಶ್ವರ ಮಠದ ಜಾತ್ರಾ ಮಹೋತ್ಸವ, ಹಿರಿಯ ಶ್ರೀಗಳು ಪುಣ್ಯಸ್ಮರೋಥ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮತನಾಡಿದ ಅವರು, ಲಿಂಗೈಕ್ಯರಾದ ಹಿರಿಯ ಶ್ರೀಗಳು ಆದರ್ಶ ಗುಣಗಳು, ಹಾಗೂ ಸಾಮಾಜಿಕ ಬದುಕು, ನಮಗೆ ಪ್ರೇರಣೆ ನೀಡಲಿ ಎಂಬ ಉದ್ದೇಶದಿಂದ ಸ್ಮರೆಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇವಲ ಭಾವಚಿತ್ರ ಪೂಜೆ ಮಾಡುವುದಲ್ಲ. ಈ ನಿಟ್ಟಿನಲ್ಲಿ ಕೊಟ್ಟೂರೇಶ್ವರ ಶ್ರೀಗಳು ನಮಂತಹ ನೂತನ ಸ್ವಾಮೀಜಿಗಳಿಗೆ ಆದರ್ಶವಾಗಿದ್ದಾರೆ ಎಂದರು.
ಕೊಣ್ಣೂರು ಡಾ. ಶಿವಾನಂದ ಶ್ರಿಗಳು ಮಾತನಾಡಿ, ಪ್ರತಿ ಧಾಮಿರ್ಕ ೇತ್ರದಲ್ಲಿ ಶರಣರು, ಸಂತರು, ಮನುಷ್ಯನ ಜೀವನಕ್ಕೆ ಬೇಕಾಗುವ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳು ನಮಗೆ ಆದರ್ಶವಾಗಿವೆ ಎಂದರು.
ಹರ್ಲಾಪೂರ ಗೆಜ್ಜೇಸಿದ್ದಶ್ವರ ಮಠದ ಶಿವಯೋಗಿ ರಾಮನಾಥ ಶ್ರೀಗಳು ಮಾತನಾಡಿ, ಜೀವನದಲ್ಲಿ ಅನೇಕ ಕಷ್ಟಗಳು ಬರುತ್ತವೆ. ಆ ಕಷ್ಟಗಳನ್ನು ಎದುರಿಸಲು ಗುರುವಿನ ಪ್ರೇರಣೆ ಅಗತ್ಯವಿದೆ. ನಾವೆಲ್ಲರೂ ಗುರುವಿನ ಸ್ಮರಣಿ ಮಾಡುವುದು ಅವಶ್ಯವಿದೆ ಎಂದರು.
ಹಳ್ಳಿಗುಡಿ ಶಂಕ್ರಯ್ಯಜ್ಜನವರು ಮಾತನಾಡಿ, ಹರ್ಲಾಪೂರ ಮತ್ತು ಹಳ್ಳಿಗುಡಿ ಗ್ರಾಮದ ಭಕ್ತರಿಗೆ ಕೊಟ್ಟೂರೆಶ್ವರ ಶ್ರೀಗಳು ಅಮೂಲ್ಯ ಆಸ್ತಿ ಆಗಿದ್ದಾರೆ. ಅವರು ನಮ್ಮ ಬದುಕಿಗೆ ಆಧರ್ಶಪ್ರಾಯ ಆಗಿದ್ದಾರೆ ಎಂದರು.
ಡಾ. ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಕಳೆದ 15 ದಿನಗಳಿಂದ ನಡೆದ ಜಾತ್ರಾ ಮಹೋತ್ಸವ ಯಶಸ್ವಿಗೆ ಸೇವೆ ಸಲ್ಲಿಸಿದ ಸರ್ವ ಭಕ್ತರಿಗೆ ಅಭಿನಂದನೆ ಸಲ್ಲಿಸಿದರು. ತಮ್ಮೆಲ್ಲರ ಸೇವಾ ಮನೋಭಾವ ಹೀಗೆ ಮುಂದುವರೆಯಲಿ ಎಂದರು.
ಇದೇ ಸಂದರ್ಭದಲ್ಲಿ ಕೊಟ್ಟೂರೇಶ್ವರ ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ನೆರವೇರಿಸಿದರು. ರಾಮಣ್ಣ ಬೆಳಧಡಿ, ಕೆ. ಬಿ. ವಿರಾಪೂರ, ನಾಗೇಂದ್ರ ಅರ್ಕಸಾಲಿ, ಶ್ರೀದೇವಿ ಹರಕುಣಿ, ಕೆ. ಬಿ. ಕೊಣ್ಣೂರು, ಸಿದ್ದಲಿಂಗಯ್ಯ ಹಿರೇಮಠ, ವೆಂಕಟೇಶ ಜುಂಜಣಿ, ಎಸ್. ಸಿ. ಸವಿರ್ ಇತರರು ಇದ್ದರು.