

ವಿಜಯವಾಣಿ ಸುದ್ದಿಜಾಲ ಗದಗ
ಗುರುವಿನ ಮಹಿಮೆ ವರ್ಣನೆಗೆ ನಿಲುಕದ್ದಾಗಿದೆ. ಆಧುನಿಕ ಯುಗದಲ್ಲಿ ಗುರುವಿನ ಮಾರ್ಗದರ್ಶನ ಎಲ್ಲರಿಗೂ ಅತ್ತಗತ್ಯ ಎಂದು ಹರ್ಲಾಪುರ ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.
ಹರ್ಲಾಪುರ ಗ್ರಾಮದ ಹತಿರ್ಮಠದ ಮಹಾ ತಪಸ್ವಿ ಬಸವಾನಂದ ಶಿವಯೋಗಿಗಳ ಶ್ರೀಮಠದಲ್ಲಿ 3ನೇ ವರ್ಷದ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಪುರಾಣದ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ದೀಪವನ್ನು ಬೆಳಗಿಸುವಲ್ಲಿ ಗುರುವಿನ ಪಾತ್ರ ಬಹಳ ಅವಶ್ಯವಾಗಿದೆ. ಗುರುವಿನ ಮುಖಾಂತರ ಪರಮಾತ್ಮನನ್ನು ಕಾಣಬೇಕು. ಗುರು ಸೇವೆಯನ್ನು ಮಾಡುತ್ತ ಗುರು ಪುತ್ರರಾಗಬೇಕು ಎಂದು ಹೇಳಿದರು.
ಪ್ರವಚನಕಾರದ ವೇದಮೂತಿರ್ ಸದಾನಂದಯ್ಯ ಶಾಸ್ತ್ರಿಗಳು ಮಾತನಾಡಿ, ಪುರಾಣ ಪುಣ್ಯಕಥೆಗಳನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ನಮ್ಮ ಸಂಸತಿ, ಸಂಸ್ಕಾರವನ್ನು ಮರೆತು ಮೃಗವಾಗುವುದಕ್ಕಿಂತ ಅರಿತು ಆಚರಿಸಿ, ಮಾನವ ಮಹದೇವ ನಾಗಬೇಕು ಅಂದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬಸವಾನಂದ ಸಾಂಸತಿ ಸೇವಾ ಸಂಸ್ಥೆಯ ಅಧ್ಯ ವೇದಮೂತಿರ್ ಕೀರಯ್ಯ ಸ್ವಾಮಿಗಳು ಮಾತನಾಡಿ, ಗುರುವಿನ ಗುಣಗಾನ ಬಹಳ ದೊಡ್ಡದು. ಮನುಷ್ಯ ಎತ್ತರ ಮಟ್ಟಕ್ಕೆ ಬೆಳೆಯಬೇಕಾದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದು ಹೇಳಿದರು. ಗ್ರಾಮ ಪಂಚಾಯತಿ ಅಧ್ಯೆ ಸುಮಂಗಲಾ ಚಟ್ರಿ ಮಾತನಾಡಿದರು.
ಗೂಳಪ್ಪ ರವದಿ, ರಾಮಣ್ಣ ಬೆಳದಡಿ, ಲಿಡಿಗ್ಗಣ ಸ್ವಾಮಿಗಳು ಇತರರು ಇದ್ದರು.