ಎಲ್ಲಾ ತಂಬಾಕು ಮಾರಾಟಗಾರರು ಸ್ಥಳೀಯ ಸಂಸ್ಥೆಗಳಾದ ಪುರಸಭೆ. ಪಟ್ಟಣ ಪಂಚಾಯತ್, ನಗರಸಭೆಗಳಲ್ಲಿ ಪ್ರತ್ಯೇಕ ತಂಬಾಕು ಮಾರಾಟ ಮಾಡುವ ಪರವಾನಿಗೆಯನ್ನು ಪಡೆದು ಮಾರಾಟ ಮಾಡಲು ಸೂಚಿಸಲಾಯಿತು. ತಂಬಾಕು ಸೇವನೆಯಿಂದಾಗು ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಅ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ ಚಹಾ ಅಂಗಡಿ ಪಾನ ಶಾಪ್ ಅಂಗಡಿಗಳ ಒಳಗಡೆ ಸುಮಾರು ಅನಧಿಕೃತ ಧೂಮಪಾನ ಅಡ್ಡಾಗಳನ್ನು ಮಾಡಿಕೊಂಡು, ಧೂಮಪಾನ ಮಾಡದ ಅಮಾಯಕರ ಆರೋಗ್ಯದ ಮೇಲೆ ಪರಿಣಾಮ ಬೀರಿ ಅವರು ತಂಬಾಕಿನಿAದ ಉಂಟಾಗುವ ಖಾಯಿಲೆಗಳಿಗೆ ಬಲಿಯಾಗುತ್ತಿರುವದರಿಂದ ಇಂತಹ ಅಡ್ಡಾಗಳನ್ನು ಬಂದ ಮಾಡುವಂತೆ ಎಚ್ಚರಿಕೆ ನೀಡಿ ಕ್ರಮಕೈಗೊಳ್ಳಲಾಯಿತು. ತಂಬಾಕು ಮುಕ್ತ ಯುವ ಪಿಳಿಗೆ ಮಾಡುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿ ತಂಬಾಕು ಉತ್ಪನ್ನಗಳು ಸುಲಭವಾಗಿ ದೊರೆತು ಚಟಕ್ಕೆ ಬಲಿಯಾಗುವದನ್ನು ತಪ್ಪಿಸಲು, ಶಾಲಾ ಕಾಲೇಜು ಆವರಣದಿಂದ 100 ಗಜದ ವರೆಗೆ ತಂಬಾಕು ಮಾರಾಟ ನಿಷೇಧ ಮಾಡಲಾಗಿದೆ, ತಂಬಾಕು ಕುರಿತ ಜಾಹಿರಾತು ನಿಷೇಧಿಸುವದು, 18 ವರ್ಷದೊಳಗಿನವರಿಗೆ ತಂಬಾಕು ನಿಷೇಧಿಸುವದು ,ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ 85% ರಷ್ಟು ಅರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯವಾಗಿದೆ, ನಮ್ಮ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳು ಕಾನೂನು ಬದ್ಧವಾಗಿದ್ದರು ಅವುಗಳ ಮಾರಾಟ ಹಾಗೂ ಅದರ ಉಪಯೋಗ ಕೋಟ್ಪಾ ಕಾಯ್ದೆ ಅಡಿಯಲ್ಲಿ ಅವಕಾಶವಿದ್ದು ಅದನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತಿ ಕ್ರಮ ವಹಿಸಲಾಗುವದು.