ಕೆಎಲ್​ಇ ಶಾಲೆಯಲ್ಲಿ ಪದಗ್ರಹಣ ಸಮಾರಂಭ

18GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಭವಿಷ್ಯತ್ತಿನ ಬುತ್ತಿಯನ್ನು ಕಟ್ಟಿಕೊಡುವ ಶಾಲೆಯ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ವಿದ್ಯಾಥಿರ್ಗಳಿಗೆ ನಿದ್ರಾವಧಿಯಲ್ಲಿಯೂ ಮನಸ್ಸು ಜಾಗೃತವಾಗಿರಬೇಕು. ಸದಾ ಕಲಿಕೆಯತ್ತ ಪ್ರಯತ್ನ ಹೊಂದಿರಬೇಕು. ಎಂದು ಕೆಎಲ್​ಇ ಸಂಸ್ಥೆಯ ಎಸ್​. ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಜೈ ಹನುಮಾನ ಅವರು ಹೇಳಿದರು.

ಕೆಎಲ್​ಇ ಸಂಸ್ಥೆಯ ಸಿಬಿಎಸ್​ಇ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾಥಿರ್ ಪ್ರತಿನಿಧಿಗಳು ಶಾಲೆಯ ನಿಯಮಾವಳಿಗಳನ್ನು ಮತ್ತು ಕರ್ತವ್ಯಗಳನ್ನು ಜವಾಬ್ದಾರಿಯಿಂದ ಪಾಲನೆ ಮಾಡಿದಾಗ ಆದರ್ಶ ನಾಯಕರಾಗಿ ಬೆಳೆಯಲು ಸಾಧ್ಯ ಎಂದರು.

ಶಾಲೆಯ ಪ್ರಾಂಶುಪಾಲರಾದ ಕಲ್ಪನಾ ಚಚಡಿ ಮಾತನಾಡಿ, ವಿದ್ಯಾಥಿರ್ಗಳ ಬೆಳವಣಿಗೆಯಲ್ಲಿ ಕಠಿಣ ಪರಿಶ್ರಮ ಎಷ್ಟು ಮುಖ್ಯವೋ ಅಷ್ಟೇ ಕೌಶಲ್ಯ ಆಧಾರಿತ ಕಲಿಕೆಯು ಮುಖ್ಯ ಎಂದರು.

ವಿರೇಂದ್ರ ಗಂಗಲ, ರಾವೇಂದ್ರ ಲಕ್ಕುಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net