ಕೆ ಎಲ್ ಇ ಶಾಲೆಯಲ್ಲಿ ಪದಗ್ರಹಣ ಸಮಾರಂಭ

18GDG05
Published on
ಗದಗ:ಶಾಲೆಯು ಭವಿಷ್ಯತ್ತಿನ ಬುತ್ತಿಯನ್ನು ಕಟ್ಟಿಕೊಡುವ ವಿದ್ಯಾಸಂಸ್ಥೆ, ವಿದ್ಯಾರ್ಥಿಗಳಾದ ನಾವು ಅಲ್ಪ ಆಹಾರವನ್ನು ಸೇವಿಸಬೇಕು. ನಿದ್ರಾವಧಿಯಲ್ಲಿಯೂ ನಮ್ಮ ಮನಸ್ಸು ಜಾಗೃತವಾಗಿರಬೇಕು. ಸದಾ ಕಲಿಕೆಯತ್ತ ಪ್ರಯತ್ನವಾದಿಗಳಾಗಬೇಕು. ವಿದ್ಯಾರ್ಥಿ ಪ್ರತಿನಿಧಿಗಳು ಶಾಲೆಯ ನಿಯಮಾವಳಿಗಳನ್ನು ಮತ್ತು ಕರ್ತವ್ಯಗಳನ್ನು  ಜವಾಬ್ದಾರಿಯಿಂದ ಪಾಲನೆ ಮಾಡಿದಾಗ ನಾಳಿನ ಆದರ್ಶ ನಾಯಕರಾಗಿ ಗುರುತಿಸಿಕೊಳ್ಳುತ್ತಿರಿ"ಎಂದು ಕೆ ಎಲ್ ಇ ಸಂಸ್ಥೆಯ ಎಸ್ ಎ ಮಾನ್ವಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಯುತ ಜೈ ಹನುಮಾನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೀಯುತರು ಕೆ ಎಲ್ ಇ ಸಂಸ್ಥೆಯ ಸಿ ಬಿ ಎಸ್ ಇ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಲ್ಪನಾ ಚಚಡಿ ಆಯ್ಕೆಯಾದ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು "ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಕಠಿಣ ಪರಿಶ್ರಮ ಎಷ್ಟು ಮುಖ್ಯವೋ ಅಷ್ಟೇ ಕೌಶಲ್ಯ ಆಧಾರಿತ ಕಲಿಕೆಯು ಮುಖ್ಯ" ಎಂದು ಹೇಳಿದರು. ಶಾಲೆಯ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕುಮಾರಿ ಶ್ರೀಯಾ ಜೋಷಿ "ಶಾಲೆ ಹಾಗೂ ಶಿಕ್ಷಕರು ವಹಿಸಿದ ಪಠ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಜವಾಬ್ದಾರಿಗಳನ್ನು ತಪ್ಪದೆ ಅಚ್ಚುಕಟ್ಟಾಗಿ ನಿಭಾಯಿಸುತ್ತೇವೆ ಮತದಾನ ಮಾಡಿ ನಮ್ಮನ್ನು ಆಯ್ಕೆ ಮಾಡಿದ ಸರ್ವರಿಗೂ ಈ ವೇದಿಕೆಯ ಮೂಲಕ ಕೃತಜ್ಞತೆ ಸಲ್ಲಿಸುವೆ" ಎಂದು ಮಾತನಾಡಿದಳು.
ಹಿರಿಯ ಶಿಕ್ವಕರಾದ ಶ್ರೀಯುತ ವಿರೇಂದ್ರ ಗಂಗಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಯುತ ಶರಣು ಚಳಗೇರಿ ಮತ್ತು ಶ್ರೀ ರಾಘವೇಂದ್ರ ಲಕ್ಕುಂಡಿ ತಾಂತ್ರಿಕ ಮತದಾನದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ಮತದಾನ ಮಾಡುವ ವಿಧಾನ ಮತ್ತು ಅದರ ಮಹತ್ವ ತಿಳಿಸಿದರು. ವಿದ್ಯಾರ್ಥಿಗಳು ತಾಂತ್ರಿಕ ಮತದಾನ ಮಾಡುವುದರ ಮೂಲಕ ಸಮಥ೯ ನಾಯಕರನ್ನು ಆಯ್ಕೆ ಮಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಾಗುವ ಬದಲಾವಣೆಗಳನ್ನು ಅರಿತುಕೊಂಡರು.
                  ಶಾಲಾ ಸಂಸತ್ತಿನ ಪದಾಧಿಕಾರಿಗಳ ವಿವರ ಕೆಳಗಿನಂತಿದೆ.
ಕುಮಾರಿ: ಶ್ರೀಯಾ ಜೋಷಿ ಶಾಲಾ ಪ್ರಧಾನಿಯಾಗಿ, ಉಪ ಪ್ರಧಾನಿಯಾಗಿ ಕುಮಾರಿ ಧೃತಿ ವಾರಕರ್, ಕ್ರೀಡಾ ಮಂತ್ರಿಯಾಗಿ ಕುಮಾರ ವಿಶ್ವಾಸ್ ಸಿ ಪಿ, ಕ್ರೀಡಾ ಉಪ ಮಂತ್ರಿಯಾಗಿ ಕುಮಾರಿ ಸ್ಪಂದನಾ ರಕ್ಕಸಗಿ, ಶಿಸ್ತು ವಿಭಾಗದ ಮಂತ್ರಿಯಾಗಿ ಕುಮಾರಿ ನಿಧಿ ಬಿ ಐಲಿ, ಶಿಸ್ತು ವಿಭಾಗದ ಉಪಮಂತ್ರಿ ಕುಮಾರ ಮನೋಜ್ ಮೆಣಸಗಿ, ಸಾಂಸ್ಕೃತಿಕ ಮಂತ್ರಿಯಾಗಿ ಕುಮಾರಿ ಸುಕೃತಿ ಪಾಟೀಲ, ಸಾಂಸ್ಕೃತಿಕ ಉಪ ಮಂತ್ರಿಯಾಗಿ ಕುಮಾರಿ ಸಾಚಿ ಕುಡತರಕರ, ನೀಲಿ ಪಡೆಯ ನಾಯಕನಾಗಿ ಕುಮಾರ ಪವನ ಚಿಕ್ಕೇನಕೊಪ್ಪ, ನೀಲಿ ಪಡೆಯ ಉಪನಾಯಕಿಯಾಗಿ ಕುಮಾರಿ ಸ್ವಾತಿ ಹುಬ್ಬಳ್ಳಿ,
ಹಸಿರು ಪಡೆಯ ನಾಯಕನಾಗಿ ಕುಮಾರ ಪ್ರಣವ ಗೊರವರ,
ಉಪ ನಾಯಕಿಯಾಗಿ ಕುಮಾರಿ ಪೂರ್ವಿ ರಾಮನಕೊಪ್ಪ, ಕೆಂಪು ಪಡೆಯ ನಾಯಕಿಯಾಗಿ ಕುಮಾರಿ ಋತು ಮುಧೋಳ, ಉಪನಾಯಕಿಯಾಗಿ ಕುಮಾರಿ ಸಾಕ್ಷಿ ಹೊಳಗುಂದಿ, ಹಳದಿ ಪಡೆಯ ನಾಯಕಿಯಾಗಿ ಕುಮಾರಿ ಸೌಜನ್ಯ ಪಾಟೀಲ ಉಪನಾಯಕಿಯಾಗಿ ಕುಮಾರಿ ಪೂರ್ವಿ ಯಾದವಾಡ, ಹಾಗೂ ಶಾಲೆಯ  ಕಿರಿಯರ ವಿಭಾಗದ ಬಾಲಕರ ಪ್ರಧಾನಿಯಾಗಿ ಕುಮಾರ ವಿಹಾನ್ ಮಹೇಂದ್ರಕರ, ಕಿರಿಯರ ವಿಭಾಗದ ಬಾಲಕಿಯರ  ಪ್ರಧಾನಿಯಾಗಿ ಆಲಿಯಾ ಹವಾಲ್ದಾರ  ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.ಆಯ್ಕೆಯಾದ  ಸಂಸತ್ತಿನ ಸವ೯ ಸದಸ್ಯರಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು ಶಾಲೆಯ ಪ್ರಾಂಶುಪಾಲರು, ಸಂಯೋಜಕರು ಹಾಗೂ ಶಿಕ್ಷಕ ವೃಂದದವರು ಶುಭಾಶಯ ಕೋರಿ ಪ್ರೋತ್ಸಾಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net