ಮಕ್ಕಳ ಸ್ವಾಭಿಮಾನದ ಬದುಕು ಕಟ್ಟಲು ಪಾಲಕ, ಶಿಕ ಸಮಾನ ಜವಾಬ್ದಾರರು:ಡಾ. ಎ. ಕೆ.ಮಠ

29GDG03
Published on

ವಿಜಯವಾಣಿ ಸುದ್ದಿಜಾಲ ಗದಗ

ಪ್ರತಿಯೊಬ್ಬ ಮಕ್ಕಳು ಸಮಾಜದಲ್ಲಿ ಸುಸಂತರಾಗಿ, ವಿದ್ಯಾವಂತರಾಗಿ ಹಾಗೂ ಉತ್ತಮವಾಗಿ ತಮ್ಮ ಸ್ವಾಭಿಮಾನದ ಬದುಕನ್ನು ನಿಮಿರ್ಸಿಕೊಳ್ಳಲು ಕೇವಲ ಶಿಕರನ್ನಷ್ಟೇ ಜವಾಬ್ದಾರರನ್ನಾಗಿಸದೇ, ಅವರ ಬದುಕನ್ನು ಹಸನಾಗಿ ನಿಮಿರ್ಸಲು ಪಾಲಕರು ಅಷ್ಟೇ ಜವಾಬ್ದಾರರು ಎಂದು ಕೆಎಲ್​ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ. ಕೆ. ಮಠ ಹೇಳಿದರು.

ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಪಾಲಕರ ಹಾಗೂ ಹಳೆಯ ವಿದ್ಯಾಥಿರ್ಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಸಂಸ್ಥೆಯ ಬೆಳವಣಿಗೆ ಸಾಧಿಸಲು ಹಳೆಯ ವಿದ್ಯಾಥಿರ್ಗಳ ಸಲಹೆಗಳು ಅತ್ಯಾವಶ್ಯಕ. ಇಂತಹ ಸಭೆಗಳನ್ನು ಹಮ್ಮಿಕೊಂಡಾಗ ವಿದ್ಯಾಥಿರ್ಗಳು ಮತ್ತು ಪಾಲಕರು ತಮ್ಮ ಸಲಹೆ ಸೂಚನೆಗಳನ್ನು ನೀಡುವದರಿಂದ ವಿದ್ಯಾಥಿರ್ಗಳ ಮತ್ತು ಸಂಸ್ಥೆಯ ಪ್ರಗತಿಗೆ ಸಹಾಯಕವಾಗುತ್ತದೆ ಎಂದರು.

ಪಾಲಕರ ಪ್ರತಿನಿಧಿಯಾಗಿ ವೇದಿಕೆಯಲ್ಲಿ ಮಾತನಾಡಿದ ಎಚ್​. ಎಚ್​. ಕೊಪ್ಪಳ, ಪಾಲಕರು ತಮ್ಮ ಮಕ್ಕಳಿಗೆ ವಿದ್ಯೆ ಕೊಡಿಸಿ ಅವರನ್ನು ಸಮಾಜದಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳು ತಮ್ಮ ಜೀವನದಲ್ಲಿ ಸ್ವತಂತ್ರವಾಗಿ ಬದಕಲು ಉನ್ನತ ಶಿಣ ಕೊಡಿಸುವುದು ಅವರ ಪಾಲಕರ ಜವಾಬ್ದಾರಿ ಆಗಿದೆ. ಅಂತಹ ಜವಾಬ್ದಾರಿಯಿಂದ ಯಾವ ಪಾಲಕರು ಹಿಂಜರಿಯಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net