ಕೆಎಲ್​ಇ ಸಂಸ್ಥೆಯಲ್ಲಿ ಉದ್ಯೋಗ ಮೇಳ

02GDG08
Published on

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಕೆಎಲ್​ಇ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಉದ್ಯೋಗ ಮೇಳ ಜರುಗಿತು. 800 ಕ್ಕೂ ಅಧಿಕ ಅಭ್ಯಥಿರ್ಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯ ಎಸ್​. ಪಿ. ಸಂಶಿಮಠ, ವಿದ್ಯಾಥಿರ್ಗಳು ಕೌಶಲ್ಯವನ್ನು ಹೆಚ್ಚಿಸಿಕೋಳ್ಳಬೇಕು. ಹೆಚ್ಚು ಕೌಶಲ್ಯವಿದ್ದರೆ ಉದ್ಯೋಗ ಅವಕಾಶಗಳು ಹೆಚ್ಚು. ಹೆಚ್ಚಿನ ಪರಿಣತಿ, ವೃತ್ತಿಪರ ಬೆಳವಣಿಗೆ ಮತ್ತು ಪ್ರತಿಷ್ಠಿತ ಕಂಪನಿಗಳಲ್ಲಿ ಅವಕಾಶಗಳಿಗೆ ಕಾರಣವಾಗುತ್ತದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ. ಜಿ. ಪಾಟೀಲ ಮಾತನಾಡಿ, ವಿದ್ಯಾಥಿರ್ಗಳು ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸೃಜನಶೀಲತೆ ಮತ್ತು ಉದ್ಯಮಶೀಲತಾ ಮನೋಭಾವವನ್ನು ಪೋಷಿಸಲು ವಿದ್ಯಾಥಿರ್ಗಳನ್ನು ಪ್ರೋತ್ಸಾಹಿಸಬೇಕು. ಒಂದೇ ಒಂದು ವಿನೂತನ ಕಲ್ಪನೆಯು ಹೇಗೆ ಗಮನಾರ್ಹ ಯಶಸ್ಸಿಗೆ ಕಾರಣ ಆಗಬಹುದು ಎಂದು ತಿಳಿಸಿದರು.

ಬಿಸಿಎ, ಬಿಬಿಎ, ಬಿಕಾಂ, ಬಿಎಸ್ಸಿ, ಬಿಎ, ಡಿಪ್ಲೋಮಾ ಮತ್ತು ಐ.ಟಿ.ಐ. ಸೇರಿದಂತೆ ವಿವಿಧ ವಿಭಾಗಗಳಿಂದ 800ಕ್ಕೂ ಹೆಚ್ಚು ಅಂತಿಮ ವರ್ಷದ ವಿದ್ಯಾಥಿರ್ಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಬಿಸಿಎ ವಿಭಾಗದ ಸಂಯೋಜಕ ಪ್ರೊ.ಸುದೀಪಕುಮಾರ ಕುಂದಗೋಳ, ಬಿಬಿಎ ವಿಭಾಗದ ಸಂಯೋಜಕ ಪ್ರೊ.ಚನ್ನರಾವ್​ ಗದಂ, ತರಬೇತಿ ಮತ್ತು ಉದ್ಯೋಗಾಧಿಕಾರಿ ಪ್ರೊ. ದೀಪಾ ಯನಮಶೆಟ್ಟಿ ಮತ್ತು ಪ್ರೊ. ಬಿಂದುಶ್ರೀ ಎಚ್​ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net