ಮಕ್ಕಳ ಲಾಲನೆ, ಪಾಲನೆ ಅತೀ ಅವಶ್ಯ : ಪ್ರಮೊಧ ಹಿರೇಮಠ‌

WhatsApp Image 2025-10-13 at 4.03.24 PM (1)
Published on

Gadag: ನಗರದ ಪ್ರತಿಷ್ಠಿತ ಕೆ. ಎಲ್.‌ ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.‌ ಎಸ್.‌ ಎಸ್.‌ ಘಟಕದ ವತಿಯಿಂದ ಇತ್ತೀಚಿಗೆ ಗದಗ ನಗರದ ಸೇವಾ ಭಾರತಿ ಟ್ರಸ್ಟ್(ರಿ), ಅಮೂಲ್ಯ ದತ್ತು ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡುವದರ ಜೊತೆಗೆ ಅಲ್ಲಿಯ ಮಕ್ಕಳ ಲಾಲನೆ, ಪಾಲನೆ, ಪೋಷಣೆ ಬಗ್ಗೆ ಮಾಹಿತಿ ತಿಳಿದುಕೋಂಡು ಅಲ್ಲಿಯ ಸಂಯೋಜಕರಾದ ಶ್ರೀ. ಪ್ರಮೊಧ ಹಿರೇಮಠ ಅವರ ಜೊತೆಗೆ ಚರ್ಚಿಸಿದರು.

6 ವರ್ಷದೊಳಗಿನ ಮಕ್ಕಳ ಲಾಲನೆ-ಪಾಲನೆ ಮತ್ತು ದತ್ತು ನೀಡಲಾಗುತ್ತದೆ, ಅನಾಥ, ನಿರ್ಗತಿಕ, ವಿವಾಹ ಪೂರ್ವ ಜನಿಸಿದ ಮಕ್ಕಳು, ಪಾಲಕರಿಂದ ಬೇರ್ಪಟ್ಟ ಮಕ್ಕಳ ರಕ್ಷಣೆ ಮತ್ತು ದತ್ತು ನೀಡುವ ಕಾರ್ಯ, 1098, CWC, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಪೋಲಿಸ್‌ ಇಲಾಖೆಗಳಿಂದ ಬಂದ ದೂರುಗಳನ್ನು ಸ್ವೀಕರಿಸಿ, ಮಕ್ಕಳನ್ನು ರಕ್ಷಿಸಲಾಗುತ್ತದೆ, ದತ್ತು ಪಡೆಯುವ ಹಂತಗಳು, ದತ್ತು ನೀಡುವುದಕ್ಕಿಂತ ಮುಂಚೆ ಮತ್ತು ನಂತರದ ಕುಟುಂಬಗಳ ವಾತಾವರಣ, ಇಲ್ಲಿಯ ವರೆಗೆ ಒಟ್ಟು 69 ಮಕ್ಕಳನ್ನು ದತ್ತು ನೀಡಲಾಗಿದೆ, ಅದರಲ್ಲಿ 11 ಮಕ್ಕಳನ್ನು ವಿದೇಶಗಳಿಗೆ ದತ್ತು ನೀಡಲಾಗಿದೆ ಎಂದು ಹಲವಾರು ವಿಷಯಗಳನ್ನು ತಿಳಿಸಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಗದಗ ನಗರದ ಸೇವಾ ಭಾರತಿ ಟ್ರಸ್ಟ್(ರಿ), ಅಮೂಲ್ಯ ದತ್ತು ಸ್ವೀಕಾರ ಕೇಂದ್ರದ ಸಂಯೋಜಕರಾದ ಶ್ರೀ. ಪ್ರಮೊಧ ಹಿರೇಮಠ, ಸಾಮಾಜಿಕ ಕಾರ್ಯಕರ್ತರಾದ ಶ್ರೀ. ಶ್ರೀಧರ ಕಾಂಬಳೆ, ಕೆ. ಎಲ್.‌ ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ, ಎನ್.‌ ಎಸ್.‌ ಎಸ್.‌ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ,, ಎನ್.‌ ಎಸ್.‌ ಎಸ್.‌ ತಂಡದ ನಾಯಕರಾದ ಕುಮಾರಿ. ರುಕ್ಸಾರ್‌ ಕೊಪ್ಪಳ, ಕುಮಾರ. ಆಕಾಶ ಕಳಗಣ್ಣವರ, ಕುಮಾರಿ. ಐಶ್ವರ್ಯ ಶಲವಡಿ, ಎನ್.‌ ಎಸ್.‌ ಎಸ್.‌ ಘಟಕದ ಕಾರ್ಯನಿರ್ವಾಹಕನಾದ ಕುಮಾರ. ಅಪ್ಪಣ್ಣ ಹಡಪದ, ಸೇವಾ ಭಾರತಿ ಟ್ರಸ್ಟ್(ರಿ), ಅಮೂಲ್ಯ ದತ್ತು ಸ್ವೀಕಾರ ಕೇಂದ್ರದ ಸಿಬಂಧಿಗಳು, ಮತ್ತು ಕೆ. ಎಲ್.‌ ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.‌ ಎಸ್.‌ ಎಸ್.‌ ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net