ಸ್ವಚ್ಛ ಮೇವ ಜೀವಿತೇ : ಸ್ವಚ್ಛತಾ ಕಾರ್ಯ

WhatsApp Image 2025-10-07 at 2.38.00 PM
Published on

Gadag: ನಗರದ ಪ್ರತಿಷ್ಠತ ಕೆ. ಎಲ್.‌ ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.‌ ಎಸ್.‌ ಎಸ್.‌ ಘಟಕದ ವತಿಯಿಂದ ದಿನಾಂಕ 07-10-2025 ಮಂಗಳವಾರ ರಂದು ಗದಗ ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ. ಸೋಮೇಶ್ವರ ದೇವಸ್ಥಾನ(ಕರೇ ದೇವರ ಗುಡಿ) ಹಾಗೂ ಶ್ರೀ. ರಾಮೇಶ್ವರ ದೇವಸ್ಥಾನದಲ್ಲಿ “ಸ್ವಚ್ಛ ಮೇವ ಜೀವಿತೇ” ಎಂಬ ವಾಖ್ಯದ ಅಡಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಹಿತು. ನಂತರ ದೇವಸ್ಥಾನದ ಅರ್ಚಕರಾದ ಶ್ರೀ. ಪ್ರದೀಪ ವಿ. ಹೀರೇಮಠ ಶಾಸ್ತ್ರಿಗಳು‌ ಎನ್. ಎಸ್.‌ ಎಸ್.‌ ಘಟಕದ ಸ್ವಯಂ ಸೇವಕರೊಂದಿಗೆ ಸಂವಾದವನ್ನು ಮಾಡಿದರು ಜೊತೆಗೆ ದೇವಸ್ಥಾನದ ಇತಿಹಾಸವನ್ನು ತಿಳಿಸಿದರು ಮತ್ತು ಹಲವಾರು ವಿಚಾರಗಳನ್ನು ಚರ್ಚಿಸಿದರು.

ಈ ಚಟುವಟಿಕೆಯಲ್ಲಿ ಐತಿಹಾಸಿಕ ಪ್ರಸಿದ್ಧ ಶ್ರೀ. ಸೋಮೇಶ್ವರ ದೇವಸ್ಥಾನ(ಕರೇ ದೇವರ ಗುಡಿ) ಯ ಅರ್ಚಕರಾದ ಶ್ರೀ. ಪ್ರದೀಪ ವಿ. ಹೀರೇಮಠ ಶಾಸ್ತ್ರಿಗಳು‌, ಎನ್.‌ ಎಸ್.‌ ಎಸ್.‌ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್.‌ ಎಸ್.‌ ಎಸ್.‌ ಘಟಕದ ಕಾರ್ಯನಿರ್ವಾಹಕನಾದ ಕುಮಾರ. ಅಪ್ಪಣ್ಣ ಹಡಪದ, ಕುಮಾರಿ. ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಯಾದ ಕುಮಾರ. ಪ್ರಶಾಂತ ಕಲಬುರ್ಗಿ, ಕುಮಾರ. ಮುತ್ತಪ್ಪ ನೈನಾಪೂರ, ಕುಮಾರ. ರುದ್ರಗೌಡ ಹಿರೇಗೌಡ್ರ, ಕುಮಾರಿ. ಐಶ್ವರ್ಯ ಶಲವಡಿ, ಕುಮಾರಿ. ಸಹನಾ ನಾಲ್ವಾಡದ, ಎನ್.‌ ಎಸ್.‌ ಎಸ್.‌ ತಂಡ 01, 04, ಮತ್ತು 10 ರ ನಾಯಕರಾದ ಕುಮಾರ. ಮಹಾದೇವಪ್ಪ ಬೋಳಣ್ಣವರ., ಕುಮಾರಿ. ರೇಖಾ ಪೂಜಾರ, ಕುಮಾರ. ಆಕಾಶ ಕಳಗಣ್ಣವರ, ಕುಮಾರಿ. ಸಹನಾ ನಾಲ್ವಾಡದ, ಕುಮಾರ. ಸೋಮಶೇಖರ ಕುರಿ, ಕುಮಾರಿ. ಶಹನಾಜ ನಧಾಪ‌, ಎನ್.‌ ಎಸ್.‌ ಎಸ್.‌ ಘಟಕದ ವರದಿಗಾರರಾದ ಕುಮಾರಿ. ಸವಿತಾ ಕಾಮತ ಮತ್ತು ಎನ್.‌ ಎಸ್.‌ ಎಸ್.‌ ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net