

ವಿಜಯವಾಣಿ ಸುದ್ದಿಜಾಲ ಗದಗ
ಎಸ್ಸೆಸ್ಸೆಲ್ಸಿ ಹಂತದವರೆಗೆ ಇರುವ ಪಾಲಕರ ಕಾಳಜಿ ನಂತರದ ವಿದ್ಯಾಭ್ಯಾಸದ ಅವಧಿಯಲ್ಲಿ ಕಂಡುಬರದಿಲ್ಲ. ಈ ನಡೆ ವಿದ್ಯಾಥಿರ್ಗಳು ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗುತ್ತದೆ ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಜೆಟಿ ಪಿಯು ಕಾಲೇಜಿನಲ್ಲಿ ಮಂಗಳವಾರ ಪ್ರಥಮ ಪಿಯುಸಿ ವಿದ್ಯಾಥಿರ್ಗಳಿಗೆ ಆಯೋಜಿಸಿದ್ದ ದಿಗ್ದಶಿರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, 1975 ರಲ್ಲಿ ಜೆಟಿ ಕಾಲೇಜಿಗೆ ಪಾದಾರ್ಪಣೆ ಮಾಡಿದ ನನಗೆ ಈ ವಿದ್ಯಾಲಯ ಎಲ್ಲವನ್ನು ನೀಡಿದೆ. ಶಿಣದ ಉದ್ದೇಶ ನೌಕರರನ್ನು ಸೃಷ್ಟಿಸುವುದಲ್ಲ, ಬದಲಿಗೆ ಮನುಷ್ಯರನ್ನು ಸೃಷ್ಟಿಸುವುದಾಗಿದೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಬಹುಮುಖ್ಯ ಆಶಯ ಆಗಬೇಕಿದೆ. ವಿಕಲಚೇತನರಿಗೆ ಸಾಧಿಸಲು ಸಾಧ್ಯವಾಗುವುದಾದರೆ, ಎಲ್ಲ ಅವಯವಗಳು ಸರಿ ಇರುವ ನಮಗೇಕೆ ಸಾಧ್ಯವಾಗುವುದಿಲ್ಲ. ದೃಢ ಮನಸ್ಸು ಮತ್ತು ಸಂಕಲ್ಪದಿಂದ ಕಾರ್ಯಗಳನ್ನು ಕೈಗೊಳ್ಳುವುದಾದರೆ ಎಲ್ಲ ಸಾಧನೆಗಳು ನಮ್ಮ ಮಡಿಲು ಸೇರಲು ಸಾಧ್ಯ. ಸಾಧನೆಗೆ ನಂಬಿಕೆ ಮುಖ್ಯ ಎಂದು ಚಂದ್ರಶೇಖರ ವಸ್ತ್ರದ ಹೇಳಿದರು.
ಪಾಲಕರು ಮತ್ತು ಶಿಕರು ಮಾತ್ರ ಒಬ್ಬ ಒಳ್ಳೆಯ ವ್ಯಕ್ತಿಯನ್ನು ರೂಪಿಸಲು ಸಾಧ್ಯ. ನಮಗೆ ಮಕ್ಕಳ ಬೇಕು ಬೇಡಗಳ ಮಧ್ಯೆ ಗಮನಹರಿಸುವುದನ್ನು ಮರೆತು ತಮ್ಮ ಮಕ್ಕಳ ಸಾಧನೆಗೆ ಅಡ್ಡಿಯಾಗುತ್ತಾರೆ. ಅವರ ಮನಸ್ಸನ್ನು ಅರಿತು ಸರಿಯಾದ ಮಾರ್ಗದರ್ಶನ ಮಾಡಿದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಹಿಂದೇಟು ಹಾಕಲಾರರು ಎಂದರು.
ಅಧ್ಯತೆ ವಹಿಸಿದ್ದ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕರ ಪಾತ್ರ ಬಹು ದೊಡ್ಡದು. ವಿದ್ಯಾಥಿರ್ಗಳು ಪರೀೆಯಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ತೆಗೆದುಕೊಂಡರೂ ಪರಿಪೂರ್ಣ ಆಗಲಾರರು. ಗುರು ಮತ್ತು ಪಾಲಕರಿಗೆ ಮತ್ತು ಸಮಾಜಕ್ಕೆ ಗೌರವ ಕೊಡಲು ಕಲಿತುಕೊಳ್ಳುತ್ತಾನೋ ಅಂದು ವಿದ್ಯಾಥಿರ್ ಪೂರ್ಣಗೊಳ್ಳುತ್ತಾನೆ ಎಂದು ಹೇಳಿದರು.
ದ್ವೀತಿಯ ಪಿಯುಸಿ ವಾಷಿರ್ಕ ಪರೀೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಕಲಾ ವಿಭಾಗದ ಧನ್ಯಶ್ರೀ ಬೊಮ್ಮನಕಟ್ಟಿ, ಸೂಫಿಯಾ ಖಾಜಿ, ಲಕ್ಷ$್ಮವ್ವ ಲಮಾನಿ, ವಾಣಿಜ್ಯ ವಿಭಾಗದ ನವತಿಕ ಹಜೇರಿ, ಶಾಂಭವಿ ವನ್ನಾಲ್, ಸುಶೀಲಾ ಹಿರೇಮಠ, ವಿಜ್ಞಾನ ವಿಭಾಗದ ಹಿರೇಗೌಡರ ಕಾವ್ಯ, ನೇಹಾ ಹಿರೇಗೌಡರ, ಸಹನಾ ಬಿಚುಗಲ ಹಾಗೂ ಕ್ರೀಡಾ ವಿಭಾಗದಲ್ಲಿ ಸಂಜನಾ ಚಿಕ್ಕನಗೌಡರ ಅವರನ್ನು ಸನ್ಮಾನಿಸಲಾಯಿತು.
ಪ್ರೊ. ಎಸ್. ಬಿ. ಹಾವೇರಿ, ಪ್ರೊ. ಎನ್. ಎಸ್. ನಾಗಲೋಟಿಮಠ, ಪ್ರೊ. ಮಹಾಂತೇಶ ಮಡಿಕೇರಿ, ಅಶೋಕ ನಿಲುಗಲ, ವೀರೇಶ ಕೂಗು ಇತರರು ಇದ್ದರು.