ಕನ್ನಡದ ಆಸ್ಮಿತೆ ಹುಯಿಲಗೋಳ ನಾರಾಯಣರಾಯರು: ಡಾ. ನಾಗರಾಜ್  ಬಳಿಗೇರ

IMG-20241004-WA0004
Published on

Gadag: ಕೆ ಎಲ್. ಇ  ಸಂಸ್ಥೆಯ ಜಗದ್ಗುರು ತೋಂಟದಾರ್ಯ  ಮಹಾವಿದ್ಯಾಲಯದಲ್ಲಿ  ಕನ್ನಡ ವಿಭಾಗ ಹಾಗೂ ಕರ್ನಾಟಕ ಸಂಘದ ಸಂಯುಕ್ತ ಆಶ್ರಯದಲ್ಲಿ ಹುಯಿಲುಗೋಳ ನಾರಾಯಣರಾಯರ ಜಯಂತೋತ್ಸವವನ್ನು ಆಚರಿಸಲಾಯಿತು.

ಪ್ರಸ್ತಾವಿಕ ಹಾಗೂ ಸ್ವಾಗತ ನುಡಿಗಳನ್ನು ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ ವಿಶ್ವನಾಥರವರು ನೆರವೇರಿಸಿದರು.  ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕುಮಾರಿ ಸೀಮಾ ಕೊಪ್ಪಳ ಹುಯಿಲಗೋಳ  ನಾರಾಯಣರಾಯರ ಜೀವನ ಮತ್ತು ಸಾಧನೆ ಕುರಿತು ಭಾಷಣ ಮಾಡಿದಳು. ವಿಭಾಗದ ಪ್ರಾಧ್ಯಾಪಕರಾದ  ಡಾ ನಾಗರಾಜ ವಿ ಬಳಿಗೇರ ಅವರು ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ಚೆಲುವ ಕನ್ನಡ ನಾಡು ಕವಿತೆಯ ಆಶಯವನ್ನು ತಿಳಿಸಿದರು. ಕರ್ನಾಟಕ ಏಕೀಕರಣ, ಕನ್ನಡತ್ವ, ನಾಡು ನುಡಿಗಾಗಿ ದುಡಿದ ನಾರಾಯಣರಾಯರು ಈ ನೆಲದ ಅಸ್ಮಿತೆ ಎಂದು  ಹೇಳಿದರು. ಕನ್ನಡ ಭಾಷೆಗಾಗಿ ಗದಗ ಜಿಲ್ಲೆಯ  ಮಹಾತ್ಮರ ಕೊಡುಗೆಗಳ ಕುರಿತು ಉಪಾನ್ಯಾಸ ನೀಡಿದರು. ಪ್ರಾಚಾರ್ಯರಾದ ಪ್ರೊ ಪಿ.ಜಿ. ಪಾಟೀಲರವರು ಇಂದಿನ ವಿದ್ಯಾರ್ಥಿಗಳು ಕನ್ನಡ ಭಾಷೆ ನಾಡು ನುಡಿಗಳ ಕುರಿತು ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು. ನಾಡಿಗಾಗಿ ದುಡಿದು ಮಾಡಿದ ವಿದ್ವಾಂಸರ ಸಾಧನೆಗಳನ್ನು ನಡೆದು ಅವುಗಳನ್ನು ನಮ್ಮ ಮಾರ್ಗದರ್ಶನವಾಗಿ ರೂಪಿಸಿಕೊಳ್ಳಬೇಕು ಎಂದು ಅಧ್ಯಕ್ಷಿಯ ನುಡಿಗಳ ನಾಡಿದರು. ಕಾರ್ಯಕ್ರಮದಲ್ಲಿ ಡಾ. ನಾಗರಾಜ್ ಓಬಯ್ಯ ಹಾಗೂ ಉಪನ್ಯಾಸಕಿ ಶ್ರುತಿ ಮ್ಯಾಗೇರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಚಿತ್ರಲೇಖ ಹಿರೇಮಠ ನಿರೂಪಿಸಿದರು. ಕುಮಾರ ರವಿ ಪೂಜಾರಿ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಯಶಸ್ಸುಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net