

ಗದಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆ ಪಡೆದ ಇಲ್ಲಿನ ಕಲಾ ಸಂಸ್ಥೆ ಕಲಾಚೇತನ ಸಾಂಸತಿಕ ಅಕಾಡೆಮಿ ಕೊಡಮಾಡುವ ಕಲಾಚೇತನ ಪ್ರಶಸ್ತಿಗೆ ಈ ಬಾರಿ ಮೂವರು ಸಾಧಕರು ಭಾಜಾನರಾಗಿದ್ದಾರೆ. ರಂಗಭೂಮಿ, ಚಲನಚಿತ್ರ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ನಟ ರಾಮಕೃಷ್ಣ ನೀರ್ನಳ್ಳಿ, ಕ್ರೀಡೆ, ಕೃಷಿ, ವೈದ್ಯಕಿಯ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಡಾ. ಜಿ. ಬಿ. ಬಿಡಿನಹಾಳ ಹಾಗೂ ಯಕ್ಷಗಾನದಲ್ಲಿ ಪ್ರಸಿದ್ಧಿ ಪಡೆದ ಭಾಗವತ ರಾವೇಂದ್ರ ಮಯ್ಯ ಅವರಿಗೆ ಕಲಾಚೇತನ ಪ್ರಶಸ್ತಿ ಕೊಡಮಾಡಲಾಗುವುದು. ತೊಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜು. 28ರ ಸಂಜೆ 6 ಗಂಟೆಗೆ ಜರುಗಲಿರುವ ಯಕ್ಷ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ ಎಂದು ಕಲಾಚೇತನ ಅಕಾಡೆಮಿಯ ಅಧ್ಯಕ್ಷ ಕಾವೆಂಶ್ರೀ ಪ್ರಕಟಣೆ ತಿಳಿಸಿದ್ದಾರೆ.