ವಿದ್ಯಾಥಿರ್ಗಳಿಗಾಗಿ ಕತೆ ಹಾಗೂ ಕಾವ್ಯ ಕಮ್ಮಟ

17GDG04
Published on

ವಿಜಯವಾಣಿ ಸುದ್ದಿಜಾಲ ಗದಗ

ಮಕ್ಕಳು ಬಾಲ್ಯದಲ್ಲಿಯೇ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಅಂಕ ಗಳಿಕೆಯ ಭರಾಟೆಯಲ್ಲಿ ಇಂದು ಮಕ್ಕಳ ಕತೆ ಕೇಳುವ ಮತ್ತು ಕಾವ್ಯವನ್ನು ಆಸ್ವಾದಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ಜಿಲ್ಲಾ ಶಿಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಯಲ್ಲಪ್ಪ ಹಂದ್ರಾಳ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಷ್ಠಾನದ ಸಹಯೋಗದಲ್ಲಿ ಶನಿವಾರ ಜರುಗಿದ ಎರಡು ದಿನಗಳ ಕತೆ ಹಾಗೂ ಕಾವ್ಯ ರಚನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯ ಸುಂದರವಾಗಿದ್ದರೆ ಮಾತ್ರ ಬದುಕು ಸುಂದರವಾಗಿರುತ್ತದೆ. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗೆ ಇಂತಹ ಕಮ್ಮಟಗಳು ಸಹಕಾರಿ. ಮಕ್ಕಳು ಸಾಹಿತ್ಯದ ಬಗ್ಗೆ ವಿದ್ಯಾಥಿರ್ ದೆಸೆಯಲ್ಲಿಯೇ ಆಸಕ್ತಿ ಮೂಡಿಸಿಕೊಂಡರೆ ಬರಹಗಾರ ಆಗುವುದರಲ್ಲಿ ಸಂದೇಹ ಇಲ್ಲ. ಇದರಿಂದ ಭಾಷೆ, ಸಂಸತಿಯ ಸಂವರ್ಧನೆ ಆಗುತ್ತದೆ ಎಂದರು.

ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯ ಶಿವಕುಮಾರ ಪಾಟೀಲ ಮಾತನಾಡಿ ಓದುವ ಸಂಸತಿಯಿಂದ ವಿಮುಖರಾಗುತ್ತಿರುವ ಇಂದಿನ ವಿದ್ಯಾಥಿರ್ಗಳಿಗೆ ಸಾಹಿತ್ಯಾಭಿರುಚಿಯನ್ನು ಬೆಳೆಸುವುದು ನಮ್ಮ ಆದ್ಯತೆ ಆಗಬೇಕು. ಈ ದಿಸೆಯಲ್ಲಿಯೂ ವಿದ್ಯಾಥಿರ್ಗಳು ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಪ್ರತಿಷ್ಠಾನ ಮಾಡಲಿದೆ ಎಂದು ತಿಳಿಸಿದರು.

ಅಧ್ಯತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ವಿಶಿಷ್ಠವಾದ ಸಾಮರ್ಥ್ಯ ಇರುತ್ತದೆ. ಅದಕ್ಕೆ ಅವಕಾಶ ದೊರೆಯಬೇಕು. ಈ ದಿಸೆಯಲ್ಲಿ ಪರಿಷತ್ತು ಕಮ್ಮಟಗಳನ್ನು ಆಯೋಜಿಸುವ ಮೂಲಕ ವಿದ್ಯಾಥಿರ್ ದೆಸೆಯಲ್ಲಿಯೇ ಸಾಹಿತ್ತಿಕ ಒಲವನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಸಾಹಿತ್ಯ ವ್ಯಕ್ತಿಯನ್ನು ಪರಿರ್ಪೂಣನನ್ನಾಗಿ ರೂಪಿಸಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಪಠ್ಯ ಪುಸ್ತಕದಾಚೆಗೆ ಮಕ್ಕಳು ಚಿಂತಿಸುವಂತೆ ಮಾಡಲು ಇಂತಹ ಶಿಬಿರಗಳ ಅವಶ್ಯಕತೆ ಇದೆ ಎಂದು ಹೇಳಿದರು. ಕಮ್ಮಟದಲ್ಲಿ 70ಕ್ಕೂ ಅ-ಕ ವಿದ್ಯಾಥಿರ್ಗಳು ಭಾಗವಹಿಸಿದ್ದರು.

ಡಾ. ಜಿ. ಬಿ. ಪಾಟೀಲ, ಡಾ. ವಿನಾಯಕ ಕಮತದ, ಬಸವರಾಜ ನೆಲಜೇರಿ, ಸಿದ್ಧಯ್ಯ ಮಠಪತಿ, ಭುವನಾ ಅಂಗಡಿ, ಶಿಲ್ಪಾ ಹಳ್ಳಿಕೇರಿ, ಗುರುರಾಜ ಅಣ್ಣಿಗೇರಿ, ಮಂಜುಳಾ ತುಮ್ಮರಮಟ್ಟಿ, ಹಷಿರ್ತಾ ಉಮಚಗಿ, ಸತೀಶ ಚನ್ನಪ್ಪಗೌಡ, ಡಿ.ಎಸ್​.ಬಾಪುರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net