ವಿಜಯವಾಣಿ ಸುದ್ದಿಜಾಲ ಗದಗ
ಕನ್ನಡ ನಶಿಸುತ್ತಿದೆ. ಕಾಸರಗೋಡು ಕೇರಳ ಪಾಲಾಯಿತು. ಬೆಳಗಾವಿ ಬೀದರ್ ನಲ್ಲಿ ಮರಾಠಿ ಭಾಷೆ ಹೆಚ್ಚತ್ತಿದೆ. ರಾಯಚೂರು ತೆಲುಗು ಭಾಷಿಕರ ಪಾಲಾಗುತ್ತಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಚಂದ್ರಶೇಖರ ವಸ್ತ್ರದ ಹೇಳಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಭಾಷಣ ಮಾಡಿದ ಅವರು, ಬೆಲೂರಿನ ಶಿಲಾ ಬಾಲಕೆಯರ ಒಂದು ಶಿಲೆಯಲ್ಲನ್ನು ಕೆತ್ತಿದವರು ಗದಗ ಜಿಲ್ಲೆಯವರು ಎಂದು ನಾಡಿನ ಶಿಲ್ಪಕಲೆಗಳ ಬಗ್ಗೆ  ವಿವರಿಸಿದ ಅವರು, ಗ್ರಾಮೀಣ ಕೈಗಾರಿಕೋಧ್ಯಮದಲ್ಲಿ ಜಾನಪದ, ಶಿಲ್ಪಕಲೆ ಬಿತ್ತರಿಸುವ ಕೆಲಸ ಆಗಬೇಕಿದೆ. ವಿಶೇಷವಾಗಿ ಜಾನಪದವನ್ನು ವಾಣಿಜ್ಯೀಕರಣ ಮಾಡಬೇಕಿದೆ ಎಂದರು. ಜಾನಪದಗಳು ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ಇದ್ದರೆ ಬೆಳೆಯುವುದಿಲ್ಲ. ಜಾನಪದಗಳು ಕಲಾವಿದರಿಂದ ಮಾತ್ರ ಬೆಳೆಯಲು ಸಾಧ್ಯ ಎಂದರು.
ಜಿಲ್ಲೆಯಲ್ಲಿ ಚಾಮರಸನ ಬಗ್ಗೆ ಸಂಶೋಧನೆ ನಡೆಯಲಿಲ್ಲ. ಚೆನ್ನವೀರ ಕಣವಿ ಅವರ ಸ್ಮಾರಕ, ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಸ್ಥಾಪನೆ ಇನ್ನೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ಸ್ಪಷ್ಟ ನೀಲುವು ತಾಳಬೇಕು ಎಂದು ಒತ್ತಾಯಿಸಿದರು.
ಸರ್ವಾಧ್ಯಕ್ಷರ ಆಗ್ರಹಗಳು:
* ಸಾಹಿತಿ, ಸಂಗೀತಗಾರ, ಕಲಾವಿದರ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಅಕಾಡೆಮಿ ಸ್ಥಾಪನೆ.
* ರೈತ-ಗ್ರಾಹಕರಿಗೆ ಅನುಕೂಲ ಆಗಲು ಗದಗನಲ್ಲಿ 'ಶನಿವಾರ ಸಂತೆ' ಸ್ಥಾಪನೆ
* ಕಪ್ಪತಗುಡ್ಡ ರಕ್ಷಣೆಗೆ ಒಕ್ಕೊರಲಿನಿ ನಿರ್ಣಯ.
* ಜಿಲ್ಲೆಯ ಎಲ್ಲ ಐತಿಹಾಸಿಕ ಸ್ಥಳಗಳ ಉತ್ಖನನಕ್ಕೆ ಆಗ್ರಹ.
* ಜಿಲ್ಲೆಯ ನೀರಾವರಿ ಯೋಜನೆಗಳಿಗೆ ವೇಗ
* ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ, ಮೂಲಭೂತ ಸೌಕರ್ಯ ಒದಗಿಸುವುದು