ಡಾ. ತೋಂಟದ ಸಿದ್ಧಲಿಂಗ ಶ್ರೀ ಹಾಗೂ ಸದಾನಂದ ಪಿಳ್ಳಿ ಸ್ಮರಣಾರ್ಥ ದತ್ತಿ ಉಪನ್ಯಾಸ

24GDG05
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತೋಂಟದ ಸಿದ್ಧಲಿಂಗಶ್ರೀ ಹಾಗೂ ಸದಾನಂದ ಪಿಳ್ಳಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ಶಿವಾನಂದ ಪಟ್ಟಣಶೆಟ್ಟರ, ವಿವೇಕಾನಂದಗೌಡ ಪಾಟೀಲ, ಸುರೇಖಾ ಪಿಳ್ಳಿ, ಬಸವರಾಜ ಪಿಳ್ಳಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ

ತೋಂಟದ ಸಿದ್ಧಲಿಂಗ ಶ್ರೀಗಳು ಗೋಕಾಕ ಚಳವಳಿಗೆ ಸಿಂದಗಿಯಲ್ಲಿ ಮುನ್ನುಡಿ ಬರೆಯುವ ಮೂಲಕ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಕಾರ್ಯಕ್ಕೆ ಮುನ್ನಡಿ ಬರೆದರು ಎಂದು ತೋಂಟದಾರ್ಯ ವಿದ್ಯಾಪಿಠದ ಕಾರ್ಯದಶಿರ್ ಎಸ್​. ಎಸ್​. ಪಟ್ಟಣಶೆಟ್ಟರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಸಂಜೆ ಜರುಗಿದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹಾಗೂ ಮಾಜಿ ನಗರಸಭೆ ಸದಸ್ಯ ಸದಾನಂದ ಪಿಳ್ಳಿ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಪುಸ್ತಕ ಪ್ರಕಟನೆಯನ್ನು ಪ್ರಾರಂಭಿಸಿ ಮರೆತು ಹೋಗಬಹುದಾದ ಮಹನೀಯರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಶ್ರೀಗಳು ಮಾಡಿದರು. ಸಾಹಿತ್ಯ ಸಂವರ್ಧನೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಶಿವಾನುಭವ ವೇದಿಕೆ ಮೂಲಕ ಕನ್ನಡವನ್ನು ಕಟ್ಟುವ ಕಾರ್ಯವನ್ನು ಪೂಜೆಯ ರೂಪದಲ್ಲಿ ನೇರವೇರಿಸಿದ್ದಾರೆ. ಅವರು ಕನ್ನಡಕ್ಕಾಗಿ ಬದುಕಿದವರು ಎಂದರು.

ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ 600 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಮಠವನ್ನು ಜ್ಞಾನ ದಾಸೋಹದ ಕೇಂದ್ರವನ್ನಾಗಿಸಿದರು. ಲೇಖಕರನ್ನು, ಸಂಶೋಧಕರನ್ನು ಪ್ರೋತ್ಸಾಹಿಸಿದರು. ಈ ಕಾರ್ಯದಿಂದಲೇ ಅವರನ್ನು ಪುಸ್ತಕ ಸ್ವಾಮಿಜೀ, ಕನ್ನಡ ಜಗದ್ಗುರು ಎಂದು ಜನರು ವ್ಯಾಖ್ಯಾನಿಸಿದರು.

ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಸದಾನಂದ ಪಿಳ್ಳಿ ಅವರು ಜನಸೇವೆಗೆ ಅಪಿರ್ಸಿಕೊಂಡ ಅಪರೂಪದ ರಾಜಕಾರಣಿ ಆಗಿದ್ದರು. ನಗರಸಭೆಯ ವಿರೋಧ ಪದ ನಾಯಕರಾಗಿ ಸಮಸ್ಯೆಗಳಿಗೆ ಸ್ಪಂದಿಸಿ ನಗರದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಸಮಾಜಮುಖಿ, ಜನಪರ ಕಾಳಜಿಯ ಸದಾನಂದ ಅವರು ತಮ್ಮ ಸೇವೆಯ ಮೂಲಕ ಅಜರಾಮರರಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ ಸಿದ್ದಲಿಂಗ ಶ್ರೀಗಳು ಸೂಕ್ಷ$್ಮಮತಿಗಳಾಗಿದ್ದರು. ಸಮಾಜಕ್ಕೆ ಒದಗಬಹುದಾದ ಆಪತ್ತುಗಳನ್ನು ಮುಂಚಿತವಾಗಿಯೇ ಗ್ರಹಿಸಿ ಅವುಗಳಿಗೆ ಈಗಿನಿಂದಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುತ್ತಿದ್ದರು. ಪ್ರತಿ ವ್ಯಕ್ತಿಯಲ್ಲಿರುವ ಉತ್ತಮ ಗುಣಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಬಂದ ಭಕ್ತರಿಗೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ ಓದುವ ಸಂಸತಿಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಮಾಡಿದರು ಎಂದರು.

ಡಾ. ಅನಂತ ಶಿವಪುರ, ಸಿ. ಕೆ. ಎಚ್​.ಶಾಸ್ತ್ರಿ, ಡಾ. ಶಿವಪ್ಪ ಕುರಿ, ಜೆ. ಎ. ಪಾಟೀಲ, ಡಾ. ಧನೇಶ ದೇಸಾಯಿ, ಅ. ದ. ಕಟ್ಟಿಮನಿ, ಅಂದಾನೆಪ್ಪ ವಿಭೂತಿ, ಯಲ್ಲಪ್ಪ ಹಂದ್ರಾಳ, ಬಿ. ಎಸ್​. ಹಿಂಡಿ, ಮಂಜುಳಾ ವೆಂಕಟೇಶಯ್ಯ, ಡಾ. ರಶ್ಮಿ ಅಂಗಡಿ, ಎಸ್​. ಎಸ್​. ಪಿಳ್ಳೆ, ಪಾರ್ವತಿ ಬೇವಿನಮರದ, ರತ್ನಾ ಪುರಂತರ, ಷಡರಿ ಮೆಣಸಿನಕಾಯಿ, ಸತೀಶಕುಮಾರ ಚನ್ನಪ್ಪಗೌಡರ, ಅಮರೇಶ ರಾಂಪುರ, ಗುರುಪಾದ ಕಟ್ಟಿಮನಿ, ಬಸವರಾಜ ಗಣಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net