ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದಗೆ ಅಧಿಕೃತ ಆಹ್ವಾನ

06GDG01
Published on

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜ. 20 ಹಾಗೂ 21 ರಂದು ಗಜೇಂದ್ರಗಡದಲ್ಲಿ ನಡೆಯುವ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯತೆಯನ್ನು ವಹಿಸಿಕೊಳ್ಳಲು ಪ್ರೊ. ಚಂದ್ರಶೇಖರ ವಸ್ತ್ರದ ವರನ್ನು ಸೋಮವಾರ ಅಧಿಕೃತವಾಗಿ ಆಹ್ವಾನಿಸಲಾಯಿತು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯ ಶಾಸಕ ಜಿ.ಎಸ್​.ಪಾಟೀಲ ಹಾಗೂ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಅವರು ಶಾಲು ಹೊದಿಸಿ ಸನ್ಮಾನಿಸಿ ಆಹ್ವಾನ ನೀಡಿದರು.

ಶಾಸಕ ಜಿ. ಎಸ್​. ಪಾಟೀಲ ಮಾತನಾಡಿ, ಸಾಹಿತ್ಯ ಸಮ್ಮೇಳನ ನಮ್ಮ ಸಮ್ಮೇಳನವಾಗಿದೆ. ಜನಪ್ರತಿನಿಧಿಯಾಗಿ ಕನ್ನಡ ತಾಯಿಯ ನುಡಿಸೇವೆಯನ್ನು ಮಾಡುವುದು ನಮ್ಮ ಜವಾಬ್ದಾರಿ ಆಗಿದೆ. ಅದನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಮಾಡಬೇಕು ಎಂದರು.

ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಕೃಷಿಯನ್ನು ಮಾಡಿರುವ ಚಂದ್ರಶೇಖರ ವಸ್ತ್ರದ ಅವರು ಸಾಹಿತ್ಯ ಸಂಸತಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ಸರ್ವಾಧ್ಯತೆಯಲ್ಲಿ ಹಾಗೂ ಸಾಹಿತ್ಯ ಪೋಷಕರಾದ ಜಿ. ಎಸ್​. ಪಾಟೀಲ ನೇತೃತ್ವದಲ್ಲಿ ಸಮ್ಮೇಳನ ಯಶಸ್ವಿಯಾಗಿ ಜರುಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ ಸಮ್ಮೇಳನದ ಅಧ್ಯನಾಗಿರುವುದು ಹಿರಿಮೆಯಲ್ಲ. ಕನ್ನಡದ ಮನಸ್ಸುಗಳು ಒಕ್ಕೊರಲಿನಿಂದ ಅಧ್ಯನನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿ ಆಗಿದೆ. ಅದಕ್ಕೆ ನಾನು ಋಣಿ ಎಂದರು.

ಸಿದ್ದಣ್ಣ ಬಂಡಿ, ವಿ. ಬಿ. ಸೋಮನಕಟ್ಟಿಮಠ, ಡಾ. ಜಿ. ಬಿ. ಪಾಟೀಲ, ಅನ್ನದಾನಿ ಹಿರೇಮಠ, ಸಿ. ಕೆ. ಎಚ್​. ಶಾಸ್ತ್ರಿ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್​. ಬಾಪೂರಿ, ಅಮರೇಶ ಗಾಣಿಗೇರ, ರಮಾಕಾಂತ ಕಮತಗಿ, ರಶ್ಮಿ ಅಂಗಡಿ, ಪುಂಡಲೀಕ ಕಲ್ಲಿಗನೂರ, ವಿ. ಕೆ. ಪಾಟೀಲ, ಪಿ. ಆರ್​. ಹಿರೇಮಠ, ಶಂಕ್ರಣ್ಣ ಸಂಕಣ್ಣವರ. ಕ್ಕಮಹಾದೇವಿ ರೊಟ್ಟಿಮಠ, ಡಾ. ಎಚ್​. ಬಿ. ಪೂಜಾರ, ಬಸವರಾಜ ಗಣಪ್ಪನವರ, ಅಶೋಕ ಸತ್ಯರಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net