

ವಿಜಯವಾಣಿ ಸುದ್ದಿಜಾಲ ಗದಗ
ಗದಗ: ವೈದ್ಯಕಿಯ ೇತ್ರದಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಡಾ. ಜಿ. ಬಿ. ಬಿಡಿನಹಾಳ ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ರಾಜ್ಯ ಸರ್ಕಾರ ಸನ್ಮಾನಿಸಿದೆ. ವೈದ್ಯಕಿಯ ವೃತ್ತಿಯೊಂದಿಗೆ ಸಾವಯವ ಕೃಷಿ ಚಟುವಟಿಕೆಗಳ ಮೂಲಕ ಮಾದರಿ ರೈತರಾಗಿ ಡಾ. ಬಿಡನಾಳ ಗುರುತಿಸಿಕೊಂಡಿದ್ದಾರೆ ಎಂದು ಕಸಾಪ ಕಾರ್ಯದಶಿರ್ ಶಿವಾನಂದ ಗಿಡ್ನಂದಿ ಹೇಳಿದರು.
ಕಸಾಪ ವತಿಯಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಬಿಡನಾಳ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ವೈದ್ಯರ ಓಲಂಪಿಕ್ ಕ್ರೀಡಾಕೂಟದ ನಡಿಗೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀತಿರ್ ತಂದಿದ್ದಾರೆ. ಬಡವರು ದೀನ ದಲಿತರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿ, ವೈದ್ಯಕಿಯ ೇತ್ರಕ್ಕೆ ಸವಾಲೆನಿಸಿದ ಅನೇಕ ಶಸ್ತ್ರ ಚಿಕಿತ್ಸೆಗಳನ್ನು ಯಸಶ್ವಿಗೊಳಿಸಿದ್ದಾರೆ ಎಂದರು.
ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಡಾ. ಬಿಡಿನಹಾಳ ವೈದ್ಯರು ವೃತ್ತಿಯಲ್ಲಿ ರೋಗಿಗಳ ರೋಗವನ್ನು ಕಳೆಯುವವರಾದರೂ ಅವರೊಬ್ಬ ಉತ್ತಮ ಸಾವಯವ ಕೃಷಿಕರು. ಅತ್ಯುತ್ತಮ ಕ್ರೀಡಾಪಟುಗಳು. ಮ್ಯಾರಾಥಾನ್ ನಡಿಗೆ, ರಿಲೆ ಓಟದಲ್ಲಿ ಚಿನ್ನದ ಪದಕ ಪಡೆದು ರಾಜ್ಯದ ಕೀತಿರ್ಯನ್ನು ಹೆಚ್ಚಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಡಾ. ಜಿ. ಬಿ. ಬಿಡಿನಹಾಳ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯನಾಗಿ ನನಗೆ ಪರಿಷತ್ತಿನ ಬಗೆಗೆ ಹಾಗೂ ಕನ್ನಡದ ಬಗ್ಗೆ ಅಪಾರವಾದ ಅಭಿಮಾನವಿದೆ. ನಮ್ಮ ತಂದೆ ತಾಯಿಗಳು ಅನರಸ್ಥರು. ಬಾಲ್ಯದಲ್ಲಿ ನನಗೆ ವಿದ್ಯಾಬ್ಯಾಸ ಮಾಡಲು ಶಾಂತವೀರಯ್ಯ ಗುರುಗಳು, ಪಿ. ಎಂ. ಪಾಟೀಲ, ಅಡರಕಟ್ಟಿ ಸಕ್ಕರಗೌಡ ಗುರುಗಳು ಮಾರ್ಗದರ್ಶನ ನೀಡಿದ್ದರಿಂದ ಅಖಂಡ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಬರುವಂತಾಯಿತು. ಕಲಕೇರಿಯ ಮುದುಕೇಶ್ವರ ಪ್ರೌಢಶಾಲೆ ತರಳಬಾಳು ಶಿಣ ಸಂಸ್ಥೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ವಿವೇಕಾನಂದಗೌಡ ಪಾಟೀಲ, ಮಾಜಿ ಸಚಿವ ಎಸ್. ಎಸ್. ಪಾಟೀಲ, ಆರ್. ಬಿ. ಕಮತ, ಆರ್. ಎಸ್. ಬುರಡಿ, ಡಾ. ನಿಂ. ಗು. ಸೊಲಗಿ, ಅಕ್ಕಮಹಾದೇವಿ ಕಮತ ಸೇರಿದಂತೆ ಇತರರು ಇದ್ದರು.