ಕನ್ನಡಿಗರ ಪ್ರಾಥಿನಿಧಿಕ ಸಂಸ್ಥೆಯಾಗುವಂತೆ ಮಾಡಿದವರು ಸರ್​. ಎಂ. ವಿಶ್ವೇಶ್ವರಯ್ಯ

15GDG09
Published on

ವಿಜಯವಾಣಿ ಸುದ್ದಿಜಾಲ ಗದಗ
ವಿಶ್ವೇಶ್ವರಯ್ಯ ನವರು ಮಹಾನ್​ ಮೇಧಾವಿ, ತಂತ್ರ, ಅಮರ ವಾಸ್ತುಶಿಲ್ಪಿ, ಅಭಿವೃದ್ಧಿಯ ಹರಿಕಾರರಾಗಿದ್ದರು. ಕನ್ನಡ ನಾಡಿನ ಕೀತಿರ್ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಎತ್ತಿ ಹಿಡಿದ ಮಹಾನ್​ ಮೇಧಾವಿ ಆಗಿದ್ದರು ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯೆ ಡಾ. ರಶ್ಮಿ ಅಂಗಡಿ ಹೇಳಿದರು.
ಕಸಾಪ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಸರ್​ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಣೆಕಟ್ಟೆ, ಬ್ಯಾಂಕಿಂಗ್​, ಶಿಣ ಹೀಗೆ ನಾನಾ ೇತ್ರಗಳಲ್ಲಿ ದೇಶವನ್ನು ಪ್ರಗತಿ ಪಥದತ್ತ ಮುನ್ನಡೆಸಿದವರು ಸರ್​ ಎಂ. ವಿಶ್ವೇಶ್ವರಯ್ಯನವರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಕೃಷ್ಣರಾಜಸಾಗರ ನಿರ್ಮಾಣ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಚೇರಮನ್ನರಾಗಿ ಅಭಿವೃದ್ಧಿ ಮಾಡಿದರು. ಮೈಸೂರು ಸಾಬೂನು ಕಾರ್ಖಾನೆಯ ಸ್ಥಾಪನೆ, ಮೈಸೂರು ಬ್ಯಾಂಕ್​ ಸ್ಥಾಪನೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಯಂಥ ಮಹತ್​ ಕಾರ್ಯಗಳನ್ನು ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ರತ್ನಕ್ಕ ಪಾಟೀಲ ಮಾತನಾಡಿ, ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಾಗ ಬ್ರೀಟಿಷ್​ ಸರ್ಕಅರ ಇವರಿಗೆ "ಸರ್​' ಪದವಿ ನೀಡಿತು. 1955 ರಲ್ಲಿ ಭಾರತ ಸರ್ಕಅರ ಅತ್ಯುಚ್ಚ ಗೌರವ ಭಾರತ ರತ್ನ ನೀಡಿ ಗೌರವಿಸಿತು. ಭಾರತರತ್ನ ಪುರಸ್ಕಾರ ಪಡೆದ ಮೊದಲ ಕನ್ನಡಿಗರಾಗಿದ್ದಾರೆ ಎಂದರು.
ವಿವೇಕಾನಂದಗೌಡ ಪಾಟೀಲ, ಡಾ. ರಶ್ಮಿ ಅಂಗಡಿ, ಐ.ಎಸ್​. ಹಿರೇಮಠ, ಸುರೇಶ ಕುಂಬಾರ, ಅಮರೇಶ ರಾಂಪೂರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net