

ವಿಜಯವಾಣಿ ಸುದ್ದಿಜಾಲ ಗದಗ
ಕನ್ನಡ ಭಾಷೆ, ಸಂಸತಿಗೆ ಬಹುಕಾಲದ ಇತಿಹಾಸ ಇದೆ. ಆಯಾ ಕಾಲಟ್ಟದಲ್ಲಿ ಸಂಸತ, ಉರ್ದು, ಮರಾಠಿ, ತಮಿಳು, ತೆಲುಗು ಭಾಷೆಗಳೊಂದಿಗೆ ಪೈಪೋಟಿ ಎದುರಿಸಿದರೂ ಕನ್ನಡ ಸತ್ವಯುತವಾಗಿ ಬೆಳೆದಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನವೆಂಬರ ತಿಂಗಳಲ್ಲಿ ಜಿಲ್ಲಾದ್ಯಂತ ರಾಜ್ಯೋತ್ಸವ ನಿಮಿತ್ಯ ಜರುಗುವ ಕನ್ನಡ ಕಾರ್ಯಕ್ರಮಗಳನ್ನು ಶನಿವಾರ ತೋಂಟದ ಸಿದ್ಧಲಿಂಗಶ್ರಿ ಕನ್ನಡ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲೀಷನೊಂದಿಗೆ ಮುಖಾಮುಖಿ ಆಗುತ್ತಿದ್ದರೂ ಈ ಎಲ್ಲ ಸಂಕಟಗಳನ್ನು ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನೂತನ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ರಮೇಶ ಕಲ್ಲನಗೌಡರ ಮಾತನಾಡಿ, ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಗೀತೆ ರಚನೆಯಾಗಿ ನೂರು ವರ್ಷಗಳು ಸಂದಿವೆ. ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಬಿಂಬಿಸುವ ಈ ಗೀತೆ ಸಮಕಾಲೀನ ಸಂದರ್ಭಕ್ಕೆ ಸೂಕ್ತವಾಗಿದೆ. ಸರ್ವಜನಾಂಗ ಶಾಂತಿಯ ತೋಟವನ್ನಾಗಿ ಕರ್ನಾಟಕವನ್ನು ನೋಡುವ ಆಶಯವನ್ನು ಹೊಂದಿದೆ. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಕೂಡಾ ಆ ಕಾಲದಲ್ಲಿ ನಾಡಗೀತೆಯ ಸ್ವರೂಪವನ್ನು ಪಡೆದುಕೊಂಡು ಕನ್ನಡಿಗರೆಲ್ಲರೂ ಒಂದುಗೂಡಿಸುವ ಪ್ರಯತ್ನ ಮಾಡಿತು. ಇದು ಕಾವ್ಯಕ್ಕಿರುವ ಶಕ್ತಿಯಾಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಾಡಗೀತೆ ನಮ್ಮಲ್ಲಿ ಕನ್ನಡಾಭಿಮಾನವನ್ನು ಇಮ್ಮಡಿಗೊಳಿಸುವ ಶಕ್ತಿಯನ್ನು ಹೊಂದಿದೆ. ಅದರ ಆಶಯಗಳನ್ನು ಈಡೇರಿಸುವದು ಪ್ರತಿ ಕನ್ನಡಿಗ ಕರ್ತವ್ಯವಾಗಿದೆ. ಡೆಪ್ಯುಟಿ ಚನ್ನಬಸಪ್ಪನವರು ಈ ಭಾಗದಲ್ಲಿ ಕನ್ನಡದ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಕನ್ನಡವನ್ನು ಗಟ್ಟಿಗೊಳಿಸಿದರು. ಪ್ರತಿ ಕನ್ನಡ ಶಾಲೆಯಲ್ಲಿ ಅವರ ಭಾವಚಿತ್ರ ಅಳವಡಿಸಲು ಶಿಣ ಇಲಾಖೆ ಮುಂದಾಗಬೇಕೆಂದು ಒತ್ತಾಯಿಸಿದ್ದರು ಎಂದರು.
ವಿವಿಧ ೇತ್ರದಲ್ಲಿ ಸಾಧನೆ ಮಾಡಿದ ವಿರೂಪಾಪ್ಪ ತ್ರಿ, ಬಸವರಾಜ ಕಡೇಮನಿ, ಶಿವಕುಮಾರಗೌಡ ಪಾಟೀಲ ಇವರನ್ನು ಸನ್ಮಾನಿಸಲಾಯಿತು. ದತ್ತಪ್ರಸನ್ನ ಪಾಟೀಲ, ಕಿಶೋರಬಾಬು ನಾಗರಕಟ್ಟಿ, ಡಿ. ಎಸ್. ಬಾಪುರಿ, ಅಶೋಕ ಹಾದಿ, ಕೆ. ಎಚ್.ಬೇಲೂರ, ಚಂದ್ರಶೇಖರ ವಸ್ತ್ರದ, ರಶ್ಮಿ ಅಂಗಡಿ, ಶಿವಪ್ಪ ಕುರಿ, ಸಿ. ಕೆ. ಎಚ್.ಶಾಸ್ತ್ರೀ, ಅಂದಾನೆಪ್ಪ ವಿಭೂತಿ, ಅನ್ನದಾನಿ ಹಿರೇಮಠ, ಪಿ. ಎಚ್. ಕಡಿವಾಲ, ಗಿರಿಜಕ್ಕ ಧರ್ಮರೆಡ್ಡಿ, ರತ್ನಕ್ಕ ಪಾಟೀಲ ಇತರರು ಇದ್ದರು.