

ವಿಜಯವಾಣಿ ಸುದ್ದಿಜಾಲ ಗದಗ
ಕನ್ನಡ ಸಂಸತಿಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಕಾಣುತ್ತೇವೆ. ದೈನದಿಂದ ಬದುಕು, ಹಬ್ಬ ಹರಿದಿನಗಳು, ಕೃಷಿ ಚಟುವಟಿಕೆಗಳು, ಭಕ್ತಿ ಭಾವ, ಪೌರಾಣಿಕ ಸನ್ನಿವೇಶಗಳನ್ನು ಇದು ಒಳಗೊಂಡಿದೆ. ಇದು ಜೀವನ ಮೌಲ್ಯಗಳ ಹೂರಣದಿಂದ ಕೂಡಿದೆ ಎಂದು ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ತಿಳಿಸಿದರು.
ಜಿಲ್ಲಾ ಕಸಾಪ ಕಾರ್ಯಾಲಯ ಸೋಮವಾರ ದಿ. ನಾರಾಯಣಭಟ್ ಶಿವಪೂರ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ ಯುವಜನತೆ ಮತ್ತು ಜನಪದ ಸಾಹಿತ್ಯ ಕುರಿತು ಮಾತನಾಡಿದ ಅವರು, ಇಂದಿನ ಪೀಳಿಗೆಯವರು ಈ ಸಂಸತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಕಸಾಪ ಕಾರ್ಯದಶಿರ್ ಕಿಶೋರಬಾಬು ನಾಗರಕಟ್ಟಿ ಮಾತನಾಡಿ, ಶ್ರಮಸಂಸತಿ ಮೂಲಕ ಗದಗ ಪರಿಸರದಲ್ಲಿ ಹೊಟೆಲ್ ಉದ್ಯಮವನ್ನು ಪ್ರಾರಂಭಿಸಿ ಮಾದರಿ ಜೀವನವನ್ನು ನಡೆಸಿದ್ದಾರೆ. ಕಲೆ, ಸಾಹಿತ್ಯ, ಸಂಸತಿಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು ಎಂದು ತಿಳಿಸಿದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿಷ್ಠ ಸಾಹಿತ್ಯದ ಉಗಮಕ್ಕೆ ಜನಪದವೇ ಮೂಲ. ಗ್ರಾಮೀಣ ಜನ ತಮ್ಮ ಜೀವಾನುಭವಗಳನ್ನು ಎರಕ ಹೊಯ್ದು ಜನಪದ ಸಾಹಿತ್ಯವನ್ನು ಸೃಷ್ಠಿಸಿದ್ದಾರೆ. ಉತ್ತರ ಕರ್ನಾಟಕದ ಜನಪದ ಸಂಸತಿ ವಿಶಿಷ್ಠವಾಗಿದೆ. ಜಾನಪದ ಪ್ರಕಾರಗಳ ಕಲಿಕೆ ಶಿಣದ ಒಂದು ಭಾಗವಾಗಿ ಸರ್ಕಾರ ಅಳವಡಿಸಿದಾಗ ಇಂದಿನ ಪೀಳಿಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಾರಾಯಣಭಟ್ ಶಿವಪೂರ ಅವರು ಸಾಮಾಜಿಕ ಸೇವೆಯ ಕುರಿತು ಡಾ. ಆರ್.ಎನ್.ಗೋಡಬೋಲೆ, ಡಾ. ವಾಣಿ ಶಿವಪೂರ ಹಾಗೂ ಡಾ. ಅನಂತ ಶಿವಪೂರ ಮಾತನಾಡಿದರು. ಅಶೋಕ ಹಾದಿ ಅವರನ್ನು ಗೌರವಿಸಲಾಯಿತು. ಮಂಜುಳಾ ವೆಂಕಟೇಶಯ್ಯ ಕವನ ವಾಚಿಸಿದರು. ದತ್ತಪ್ರಸನ್ನ ಪಾಟೀಲ, ಚಂದ್ರಶೇಖರ ವಸ್ತ್ರದ, ಡಾ. ಜಿ. ಬಿ. ಪಾಟೀಲ, ಸಿ. ಕೆ. ಎಚ್. ಕಡಣಿ ಶಾಸ್ತ್ರೀ, ಆರ್. ಡಿ. ಕಪ್ಪಲಿ, ಬಿ. ಬಿ. ಹೊಳಗುಂದಿ, ರತ್ನಕ್ಕ ಪಾಟೀಲ, ರಾಜೇಶ್ವರಿ ಬಡ್ನಿ, ಉಮಾದೇವಿ ಕಣವಿ, ಬಸವರಾಜ ಗಣಪ್ಪನವರ, ಯಲ್ಲಪ್ಪ ಹಂದ್ರಾಳ, ಪ್ರಸನ್ನಕುಮಾರ ಇನಾಮದಾರ, ಚಂದ್ರಶೇಖರ ಐಲಿ, ರಾಜಶೇಖರ ಕರಡಿ, ಮಲ್ಲಿಕಾರ್ಜುನ ನಿಂಗೋಜಿ, ಜೆ. ಎ. ಪಾಟೀಲ, ಅಶೋಕ ಸತ್ಯರೆಡ್ಡಿ, ಗಂಗವ್ವ ಮುದಗಲ್ಲ, ಚನವೀರಪ್ಪ ದುಂದೂರ, ಸತೀಶ ಕುಲಕಣಿರ್ ಇತರರು ಇದ್ದರು.