

ವಿಜಯವಾಣಿ ಸುದ್ದಿಜಾಲ ಗದಗ
ಪ್ರಾಚಿನ ದೇವಾಲಯಗಳು, ಕೆರೆಕಟ್ಟೆಗಳು, ಶಾಸನಗಳು ನಮ್ಮ ಸಂಸತಿ, ಪರಂಪರೆಯನ್ನು ಸಾರುವ ಆಕರಗಳಾಗಿವೆ. ಪ್ರಾಚ್ಯಪ್ರಜ್ಞೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವ ಮೂಲಕ ಸಂರಸುವ ಕಾರ್ಯ ಮಾಡಬೇಕು. ಗದಗ ಪರಿಸರದಲ್ಲಿ ಶ್ರೇಷ್ಠ ಐತಿಹಾಸಿಕ ಕುರುಹುಗಳನ್ನು ಕಾಣಬಹುದಾಗಿದೆ ಎಂದು ಶಾಸನತ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯ ಡಾ. ದೇವರಕೊಂಡಾರೆಡ್ಡಿ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಗದಗ ಜಿಲ್ಲಾ ಟಕದ ವತಿಯಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ದೇವಾಲಯ ನಿರ್ಮಾಣಕ್ಕೆ ಕನಿಷ್ಠ ಹತ್ತು ವರ್ಷಗಳಿಂದ ಒಂದು ಶತಮಾನದ ಕಾಲವೇ ತೆಗೆದುಕೊಂಡಿದೆ. ದುಡಿವ ವರ್ಗಕ್ಕೆ ಕೆಲಸವನ್ನು ನೀಡುವದರ ಜೊತೆಗೆ ನಮ್ಮ ಕೌಶಲ್ಯ ಮತ್ತು ಪರಂಪರೆಯನ್ನು ಬಿಂಬಿಸುವ ಮಹಾನ ಕೃತಿಗಳಾಗಿವೆ. ಕಾಲಕಾಲಕ್ಕೆ ಮತಗಳನ್ನು ಬದಲಾಯಿಸಿದ್ದರಿಂದ ದೇವರ ಆರಾಧನೆಯೂ ಬದಲಾಗಿ ಅನೇಕ ದೇವಾಲಯಗಳು ಪಾಳು ಬೀಳಲು ಕಾರಣವಾಯಿತು ಎಂದರು.
ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂದ ಅಧ್ಯ ಎಸ್. ಎಸ್. ಸೋಮಣ್ಣವರ ಮಾತನಾಡಿ, ನಮ್ಮ ಶ್ರೀಮಂತ ಪರಂಪರೆಯನ್ನು ಅರಿಯಲು ಐತಿಹಾಸಿಕ ಸ್ಮಾರಕಗಳು ಸಹಕಾರಿಯಾಗಿವೆ. ಇವುಗಳನ್ನು ನೋಡುವ ದೃಷ್ಠಿಕೋನವನ್ನು ಬದಲಾಯಿಸುವ ನಿಟ್ಟಿನಲ್ಲಿ ಅನೇಕ ಚಟುವಟಿಕೆಗಳನ್ನು ಆಯೋಜಿಸುವದು ಅವಶ್ಯಕವಾಗಿದೆ. ಜಿಲ್ಲೆಯ ವಿದ್ಯಾಥಿರ್ಗಳಲ್ಲಿ ಕಲೆ, ವಾಸ್ತುಶಿಲ್ಪ, ಶಾಸನಗಳ ಕುರಿತು ಜಾಗೃತಿಯನ್ನು ಹಾಗೂ ವಿವೇಕವನ್ನು ಬೆಳೆಸುವ ನಿಟ್ಟಿಯಲ್ಲಿ ಅನೇಕ ಕಾರ್ಯ ಚಟುವಟಿಕೆಗಳನ್ನು ಸಂವು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಭಾರತೀಯರಲ್ಲಿ ಪ್ರಾಚ್ಯಪ್ರಜ್ಞೆಯ ಕೊರತೆಯನ್ನು ಕಾಣುತ್ತೇವೆ. ಬ್ರಿಟಿಷರು ಈ ಕುರಿತು ಸಾಕಷ್ಟು ಸಂಶೋಧನೆಯನ್ನು ಮಾಡಿ ನಮ್ಮ ಪರಂಪರೆಯ ಅರಿವನ್ನು ಮೂಡಿಸಿದರು. ಈ ಕುರಿತು ಶಿಣ ಸಂಸ್ಥೆಗಳಲ್ಲಿ ಆಯಾ ಪ್ರದೇಶದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ವಸ್ತುಪ್ರದರ್ಶನ, ಉಪನ್ಯಾಸ, ಪ್ರವಾಸಗಳನ್ನು ಸಂಟಿಸುವ ಹಿನ್ನೆಲೆಯಲ್ಲಿ ಅಕಾಡೆಮಿ ಕಾರ್ಯ ನಿರ್ವಹಿಸಬೇಕು."ದೇವಾಲಯ ಓದು' ಕಾರ್ಯಕ್ರಮವನ್ನು ರೂಪಿಸುವ ಮೂಲಕ ಸಮಗ್ರ ತಿಳುವಳಿಕೆಗೆ ದಾರಿ ಮಾಡಿಕೊಡಬೇಕು ಎಂದು ತಿಳಿಸಿದರು.
ಗದಗ ಜಿಲ್ಲಾ ಇತಿಹಾಸ ಅಕಾಡೆಮಿ ಅಧ್ಯ ಡಾ. ವೈ. ಆರ್. ಬೇಲೇರಿ, ಮಾಜಿ ಸಚಿವ ಎಸ್. ಎಸ್. ಪಾಟೀಲ, ದತ್ತಪ್ರಸನ್ನ ಪಾಟೀಲ, ಕೆ. ಎಂ. ಗರಗ, ಅ. ದ. ಕಟ್ಟಿಮನಿ, ಅನ್ನದಾನಿ ಹಿರೇಮಠ, ರಾಹುಲ ಗಿಡ್ನಂದಿ, ಶಂಕ್ರಪ್ಪ ಬಡಿಗೇರ, ಧನೇಶ ದೇಸಾಯಿ, ಬಿ.ಎಲ್.ಪತ್ತಾರ, ಜಯದೇವಭಟ್, ಶೇಖರಪ್ಪ ಕಳಸಾಪೂರಶೆಟ್ಟರ, ಕೆ. ಎಸ್. ಬಾಳಿಕಾಯಿ, ಬಿ. ಎಸ್. ಹಿಂಡಿ ಇತರರು ಇದ್ದರು.