

ವಿಜಯವಾಣಿ ಸುದ್ದಿಜಾಲ ಗದಗ
ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದರೂ ಇಂದಿಗೂ ಆಕೆ ಅನೇಕ ಸೌಲಭ್ಯಗಳಿಂದ ವಂಚಿತಳಾಗಿದ್ದಾಳೆ. ಆದರ್ಶ, ಮೌಲ್ಯಗಳನ್ನು ಮಹಿಳೆಯರಿಗಷ್ಟೇ ಸೀಮಿತಗೊಳಿಸಲಾಗಿದೆ. ಪೂಜ್ಯನಿಯ ಸ್ಥಾನ ನೀಡಿ ಗೃಹ ಬಂಧನದಲ್ಲಿ ಇರಿಸಲಾಗಿದೆ. ಆದಾಗ್ಯೂ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಮಹಿಳೆ ಸಾಧಿಸಿ ತೋರಿಸಿದ್ದಾಳೆ ಎಂದು ವಿಜಯಲಕ್ಷಿ$್ಮ ಕೋಟಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಸೋಮವಾರ ಜರುಗಿದ ಶಶಿಕಲಾ ಶಂಕರಗೌಡ ಪಾಟೀಲ ಹಾಗೂ ಪಾರ್ವತಿ ಚಂದ್ರಶೇಖರ ಹನುಮಸಾಗರ ಇವರ ಸ್ಮರಣಾರ್ಥ ಜರುಗಿದ ದತ್ತಿ ಕಾರ್ಯಕ್ರಮದಲ್ಲಿ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆಥಿರ್ಕವಾಗಿ ಮಹಿಳೆ ಸಬಲೀಕರಣಗೊಂಡಾಗ ಮಾತ್ರ ಸಮಾನತೆ ನೆಲೆಗೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಶಿಣವೊಂದೇ ಮಾರ್ಗವಾಗಿದೆ. ಶೋಷಣೆಮುಕ್ತ, ಸಮಾನತೆಯಿಂದ ಕೂಡಿದ ಸಮಾಜದಿಂದ ಮಾತ್ರ ದೇಶದ ಅಭಿವೃದ್ಧಿ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಯಶ್ರೀ ತಾತನಗೌಡ ಪಾಟೀಲ, ಮಹಿಳೆ ತನ್ನ ಹಕ್ಕುಗಳಿಗಾಗಿ ಹೋರಾಟ ಮಾಡಿದ ದಿನವಿದು. ಇಂದು ಅನೇಕ ಕಾನೂನುಗಳು ಮಹಿಳೆಯರ ಪರವಾಗಿದ್ದರೂ ಮಾನವೀಯತೆ ನೆಲೆಯ ಮೇಲೆ ಸಮಾನ ಅವಕಾಶಗಳನ್ನು ನೀಡಬೇಕು. ತಾರತಮ್ಯದಿಂದ ಕೂಡಿದ ಸಮಾಜದಿಂದ ಪ್ರಗತಿ ಸಾಧ್ಯವಿಲ್ಲ. ಮನೆಯಲ್ಲಿ ಪೋಷಕರು ಮಕ್ಕಳನ್ನು ಬೆಳೆಸುವಾಗಲೇ ಸಮಾನತೆಯ ಬೀಜವನ್ನು ಬಿತ್ತಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಬುದ್ಧಿಶಕ್ತಿ, ಕೌಶಲ್ಯದ ದೃಷ್ಟಿಯಿಂದ ಮಹಿಳೆ ಪುರುಷನಿಗಿಂತ ಮುಂದಿದ್ದಾಳೆ. ಶಿಣದ ಅವಕಾಶಗಳು ರ್ಪೂಣ ಪ್ರಮಾಣದಲ್ಲಿ ದೊರೆತಾಗ ಮಾತ್ರ ಪ್ರತಿಲ ದೊರೆಯುತ್ತದೆ. ಸಾಮಾಜಿಕ ತಾರತಮ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಪ್ರಜ್ಞಾಪೂರ್ವಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಶಶಿಕಲಾ ಶಂಕರಗೌಡ ಪಾಟೀಲ ಸ್ಮರಣಾಥ ದತ್ತಿ ಪ್ರಶಸ್ತಿಯನ್ನು ಗಿರಿಜಕ್ಕ ಧರ್ಮರೆಡ್ಡಿ ಅವರಿಗೆ ಹಾಗೂ ರಂಗಭೂಮಿಯ ಹಿರಿಯ ಕಲಾವಿದೆ ಗಾಯತ್ರಿ ಹಿರೇಮಠ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತಿ ಮೋಹನ ಕೋಟಿ ಅವರು ತಂದೆ ಶಾಂತರಸರ ಸ್ಮರಣಾರ್ಥವಾಗಿ ದತ್ತಿಯನ್ನು ಸ್ಥಾಪಿಸಿದರು.
ಶಿಲ್ಪಾ ಕುರಹಟ್ಟಿ, ಮಂಜುಳಾ ವೆಂಕಟೇಶಯ್ಯ, ಜಯಶ್ರಿ ಅಂಗಡಿ, ಭಾಗ್ಯಶ್ರೀ ಹುರಕಡ್ಲಿ, ಸರ್ವಮಂಗಳಾ ಗುಜಮಾಗಡಿ, ಉಮಾದೇವಿ ಕಣವಿ, ಭಾರತಿ ಮೋಹನ ಕೋಟಿ, ರಾಜೇಶ್ವರ ಬಡ್ನಿ, ಶ್ರೇಯಾ ಪಾಟೀಲ, ವೀರಣ್ಣ ಗುಜಮಾಗಡಿ, ಡಾ. ಜಿ.ಬಿ.ಪಾಟೀಲ, ಡಾ. ರಾಜಶೇಖರ ದಾನರಡ್ಡಿ, ಬಿ. ಬಿ. ಪಾಟೀಲ, ಪರಮೇಶ್ವರ ಐರಣಿ, ಬಸವರಾಜ ಗಣಪ್ಪನವರ, ಬಸವರಾಜ ವಾರಿ, ರಾಚಪ್ಪ ಕುಪ್ಪಸದ, ಚನ್ನವಿರಪ್ಪ ದುಂದೂರ, ಬಸವರಾಜ ಗಿರಿತಿಮ್ಮಣ್ಣವರ ಹಲವರು ಇದ್ದರು.