ಕಸಾಪದಿಂದ ನಾರಾಯಣಭಟ್​ ಹಾಗೂ ಹರಿದಾಸಭಟ್​ ದತ್ತಿ ಉಪನ್ಯಾಸ

05GDG04
Published on

ವಿಜಯವಾಣಿ ಸುದ್ದಿಜಾಲ ಗದಗ

ಬೇಂದ್ರೆಯವರ ಕಾವ್ಯ ಭಾಷೆ ವಿಶಿಷ್ಠವಾಗಿದೆ. ಜನಭಾಷೆ ಹಾಗೂ ಪ್ರಕೃತಿ ಭಾಷೆಯನ್ನು ಸೇರಿಸಿ ಧ್ವನಿರ್ಪೂಣ ಕವಿತೆಗಳನ್ನು ರಚಿಸಿದ್ದಾರೆ. ಓದುಗ ಹಾಗೂ ವಿಮರ್ಶಕನ ಸಾಮರ್ಥ್ಯಕ್ಕೆ ಅನುಗುಣವಾಗಿ ಅರ್ಥ, ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಕವಿತಾ ಸಂಕಲನದ ಅನೇಕ ಕವಿತೆಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹೂರಣವನ್ನು ಕಾಣಬಹುದಾಗಿದೆ ಎಂದು ಸಂಗಮೇಶ ತಮ್ಮನಗೌಡ್ರ ತಿಳಿಸಿದರು.

ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದಲ್ಲಿ ಬುಧವಾರ ಜರುಗಿದ ನಾರಾಯಣಭಟ್​ ಶಿವಪೂರ ಹಾಗೂ ಹರಿದಾಸಭಟ್​ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಂದ್ರೆಯವರ ಕಾವ್ಯವನ್ನು ಪ್ರಕೃತಿ, ಪ್ರೀತಿ, ತಾಯಿ, ಮಾನವೀಯತೆ, ವಿರಾಟ ದರ್ಶನ, ಅಧ್ಯಾತ್ಮ, ಅನುಭಾವ ಹಿನ್ನೆಲೆಯಲ್ಲಿ ಗಮನಿಸಬಹುದು. ಹೃದಯ ಸಮುದ್ರ, ಮುಕ್ತಕಂಠ, ಚೈತ್ಯಾಲಯ, ಜೀವಲಹರಿ ಈ ಸಂಕಲನಗಳು "ಅರಳು&ಮರಳು' ಎಂಬ ಹೆಸರಿನಲ್ಲಿ ಒಟ್ಟಾಗಿ ಸೇರಿ ಪ್ರಕಟವಾಗಿವೆ. ಈ ಕವಿತೆಗಳಲ್ಲಿ ಬೇಂದ್ರೆಯವರ ಆಧ್ಯಾತ್ಮಿಕತೆ, ಅನುಭಾವ, ಗುರುಭಕ್ತಿಯ ಸ್ವರೂಪದ ನೆಲೆಗಳು ವ್ಯಕ್ತವಾಗಿವೆ. ಮಾನವನ ಉನ್ನತಿಗೆ ಅವಶ್ಯವಾದ ಆಧ್ಯಾತ್ಮಿಕ ವಿಚಾರಗಳಿವೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಭಾರತೀಯ ಆಧ್ಯಾತ್ಮಿಕ ಚಿಂತನೆಗಳು ಮಾನವನ ಔನ್ನತ್ಯಕ್ಕೆ ದಾರಿದೀವಿಗೆಯಾಗಿವೆ. ಬೇಂದ್ರೆಯವರು ಅರವಿಂದರ, ಬ್ರಹ್ಮಚೈತನ್ಯರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಅವರ ಬಹುಪಾಲು ಕವಿತೆಗಳು ಆಧ್ಯಾತ್ಮಿಕತೆಯ ಲೇಪವನ್ನು ಹೊಂದಿವೆ ಎಂದು ತಿಳಿಸಿದರು.

ಡಾ. ದತ್ತಪ್ರಸನ್ನ ಪಾಟೀಲ, ಅನಂತ ಮೋಹನ ಭಟ್​, ಡಾ. ಅನಂತ ಶಿವಪೂರ, ವಾಣಿ ಶಿವಪೂರ, ಜಯದೇವ ಭಟ್​, ಕೃಷ್ಣಮೂತಿರ್ ಶಿವಪೂರ, ಡಿ. ಎಸ್​. ಬಾಪುರಿ, ಬಸವರಾಜ ಗಣಪ್ಪನವರ, ಶಿವಪ್ಪ ಕುರಿ, ಎಂ. ವಿ. ಕೆಂಭಾವಿಮಠ, ಶೋಭಾ ಶಿವಪೂರ, ಬಿ. ಎಸ್​. ಹಿಂಡಿ, ಯಲ್ಲಪ್ಪ ಹಂದ್ರಾಳ, ಎಸ್​. ಎಸ್​. ಕಳಸಾಪೂರ, ಮಂಜುಳಾ ವೆಂಕಟೇಶಯ್ಯ, ಭಾರತಿ ಮೋಹನ ಕೋಟಿ, ಜಯಶ್ರೀ ಅಂಗಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net