ಸಾಹಿತ್ಯಾಭಿರುಚಿಯಿಂದ ಸರ್ವಾಂಗೀಣ ವಿಕಾಸ: ವಿವೇಕಾನಂದಗೌಡ ಪಾಟೀಲ

20GDG10
Published on

ವಿಜಯವಾಣಿ ಸುದ್ದಿಜಾಲ ಗದಗ

ಇಂದಿನ ಶಾಲಾ  ಸೃಜನಶೀಲ ಅಭಿವ್ಯಕ್ತಿಯ ಅವಕಾಶಗಳು ಕಡಿಮೆ ಇರುವದರಿಂದ ಸಾಹಿತ್ಯ ಸೃಷ್ಠಿ ವಿದ್ಯಾಥಿರ್ಗಳಲ್ಲಿ ಸಾಧ್ಯವಾಗುತ್ತಿಲ್ಲ. ಮಕ್ಕಳು ಮೂಲತ: ಸೃಜನಶೀಲರಾಗಿದ್ದು ಸೂಕ್ತ ಅವಕಾಶಗಳನ್ನು ಕಲ್ಪಿಸುವ ಮೂಲಕ ಸುತ್ತಲಿನ ಸಂಗತಿಗಳನ್ನು ಲಿಖಿತವಾಗಿ ಹಾಗೂ ಮೌಖಿಕವಾಗಿ ವ್ಯಕ್ತಪಡಿಸುವ ಸನ್ನಿವೇಶಗಳನ್ನು ಕಮ್ಮಟದಿಂದ ಸೃಷ್ಠಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯ ವಿವೇಕಾನಂದಗೌಡ ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿ. ಜಿ. ಅಣ್ಣಿಗೇರಿ ಗುರುಗಳ ಪ್ರತಿಷ್ಠಾನದ ಸಹಯೋಗದಲ್ಲಿ ಮಂಗಳವಾರ ಜರುಗಿದ ಎರಡು ದಿನಗಳ ಕತೆ ಹಾಗೂ ಕಾವ್ಯ ರಚನಾ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದ ಅವರು, ಚರ್ಚೆ, ಸಂವಾದಗಳ ಮೂಲಕ ಪರಸ್ಪರ ಅನುಭವಗಳನ್ನು ಹಂಚಿಕೊಂಡು ಕತೆ ಮತ್ತು ಕವಿತೆಗಳನ್ನು ರಚಿಸಿದ ಪರಿಯನ್ನು ಗಮನಿಸಿದರೆ ಕಮ್ಮಟ ಯಶಸ್ವಿಯಾಗಿದೆ ಎಂಬುದು ವೇದ್ಯವಾಗುತ್ತದೆ ಎಂದು ತಿಳಿಸಿದರು.

ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಕಾರ್ಯದಶಿರ್ ಸುಭಾಸಚಂದ್ರ ಬೆಟದೂರ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿಯೇ ಮುಳುಗಿರುವ ವಿದ್ಯಾಥಿರ್ಗಳಿಗೆ ಇಂತಹ ಕಮ್ಮಟಗಳಿಂದ ಮನೋವಿಕಾಸವಾಗಿ ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತವೆ. ಪ್ರತಿಭಾ ಸಂಪನ್ನರಾದ ಮಕ್ಕಳಿಗೆ ವೈವಿಧ್ಯಮಯ ಅವಕಾಶಗಳನ್ನು ಕಲ್ಪಿಸಿ ಅವರ ಬದುಕನ್ನು ಸುಂದರಗೊಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.

ಕಮ್ಮಟದಲ್ಲಿ ಮಕ್ಕಳ ಬರವಣಿಗೆ ಪ್ರಗತಿ ಮತ್ತು ಸಾಧನೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ ನೆಲಜೇರಿ, ಭುವನೇಶ್ವರಿ ಅಂಗಡಿ, ಮಂಜುಳಾ ತುಮ್ಮರಮಟ್ಟಿ, ವಿನಾಯಕ ಕಮತದ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಲಾಯಿತು. ಹಷಿರ್ತಾ ಉಮಚಗಿ, ಡಿ. ಎಸ್​.ಬಾಪುರಿ, ಸತೀಶ ಚನ್ನಪ್ಪಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net