

ವಿಜಯವಾಣಿ ಸುದ್ದಿಜಾಲ ಗದಗ
ಭಾರತ ದೇಶವು ಇಂದು ಬಲಿಷ್ಠವಾಗಿದೆ. ಜಗತ್ತಿನ ಯಾವ ದೇಶವೂ ಭಾರತಕ್ಕೆ ಸರಿಸಾಟಿಯಾಗದು ಎಂದು ನಿವೃತ್ತ ಕರ್ನಲ್ ಕಿಶನ್ ಸಿರೋಹಿ ಹೇಳಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂದ ಜಿಲ್ಲಾ ಟಕ ಮತ್ತು ಜಿಲ್ಲೆಯ ಎಲ್ಲ ತಾಲ್ಲೂಕು ಟಕಗಳ ಆಶ್ರಯದಲ್ಲಿ ಶುಕ್ರವಾರ ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಗಿರ್ಲ್ ವಿಜಯೋತ್ಸವದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
1999 ರ ಮೆ.3 ರಂದು ಆರಂಭವಾದ ಪಾಕಿಸ್ತನಾದೊಂದಿಗಿನ ಕಾಗಿರ್ಲ್ ಯುದ್ಧದಲ್ಲಿ "ಆಪರೇಷನ್ ವಿಜಯ' ಎಂದು ಅದಕ್ಕೆ ಹೆಸರಿಸಲಾಗಿತ್ತು. ಹೀಗಾಗಿಯೇ ಕಾಗಿರ್ಲ್ ಯುದ್ದ ಗೆದ್ದ ಬಳಿಕ ಅದಕ್ಕೆ "ಕಾಗಿರ್ಲ್ ವಿಜಯ ದಿವಸ್' ಎಂದು ಆಚರಿಸಲಾಗುತ್ತಿದೆ. ಇದು ದೇಶದ ಸೈನ್ಯದ ಬಗ್ಗೆ ಜನತೆ ಗರ್ವ ಹಾಗೂ ಹೆಮ್ಮೆ ಪಡುವ ವಿಷಯ. ಒಟ್ಟು 87 ದಿನಗಳ ಕಾಲ ನಡೆದ ಕಾಗಿರ್ಲ್ ಯುದ್ಧದಲ್ಲಿ ದೇಶದ ಸೇನೆಯ ಅಧಿಕಾರಿಗಳು, ಯೋಧರು ಸೇರಿ ಒಟ್ಟು 527 ಜನ ವೀರ ಮರಣವನ್ನಪ್ಪಿದ್ದಾರೆ. ಇದರೊಂದಿಗೆ ಯುದ್ಧದಲ್ಲಿ 1,363 ಜನ ಅಂಗನ್ಯೂನತೆ ಹೊಂದಿದರು ಎಂದು ಕಾಗಿರ್ಲ್ ಯುದ್ಧದ ದಿನಗಳನ್ನು ಸ್ಮರಿಸಿದರು.
ಸಾನ್ನಿಧ್ಯ ವಹಿಸಿದ್ದ ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ಮಾತನಾಡಿ, ದೇಶವನ್ನು ರಸಲು ಹೋರಾಡುವ ಸೈನಿಕರ ಕುಟುಂಬ ಮತ್ತು ಸೇವೆಯಿಂದ ಮರಳಿದ ಮಾಜಿ ಸೈನಿಕರಿಗೆ ಸರ್ಕಾರ ನೀಡಬೇಕಾದ ಸೌಲಭ್ಯಗಳನ್ನು ಸಕಾಲದಲ್ಲಿ ನೀಡುವ ಮೂಲಕ ಗೌರವಿಸುವ ಕೆಲಸ ಮಾಡಬೇಕು. ಸೈನಿಕ ಇಲ್ಲದಿದ್ದರೆ ದೇಶದ ರಣೆ ಅಸಾಧ್ಯ. ದೇಶಕ್ಕಾಗಿ ಸೇವೆ ಸಲ್ಲಿಸಿದ ಸೈನಿಕರಿಗೆ, ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಾಯ ನೀಡಬೇಕು. ಅವರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂದ ಜಿಲ್ಲಾಧ್ಯ ಬಸಲಿಂಗಪ್ಪ ಮುಂಡರಗಿ ಮಾತನಾಡಿ, ಯುವಕರಲ್ಲಿ ದೇಶಪ್ರೇಮವನ್ನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 25ನೇ ಕಾಗಿರ್ಲ್ ವಿಜಯೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದೆ. ಕಾಗಿರ್ಲ್ ವಿಜಯೋತ್ಸವ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸುವಂತಾಗಬೇಕು. ಸರ್ಕಾರ ಕಾರ್ಯಕ್ರಮವಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರಾಜು ಹೆಬ್ಬಳ್ಳಿ, ಶಿವಪುತ್ರಪ್ಪ ಸಂಗನಾಳ, ದೇವಪ್ಪ ಡಂಬಳ, ಪ್ರಭುಗೌಡ ಪಾಟೀಲ, ಮಲ್ಲಪ್ಪ ಬ್ಯಾಳಿ, ಮಂಜುನಾಥ ಮುಳಗುಂದ, ಇಂದಿರಾ ಹೆಬಸೂರ, ನಿರ್ಮಲಾ ಹಿರೇಮಠ ಹಲವರು ಇದ್ದರು.
===
ಮೆರವಣಿಗೆ:
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸೈನಿಕರ ಸಂದ ವತಿಯಿಂದ 25ನೇ ಕಾಗಿರ್ಲ್ ವಿಜಯೋತ್ಸವವು ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಮುಳಗುಂದ ನಾಕಾ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ್ ವೃತ್ತ ಮಾರ್ಗವಾಗಿ ಕೆ. ಎಚ್. ಪಾಟೀಲ ಸಭಾಭವನದವರೆಗೆ ಮಾಜಿ ಸೈನಿಕರು, ಎನ್ಸಿಸಿ ಅಧಿಕಾರಿಗಳು, ಕೆಡೆಟ್ಗಳು, ಶಾಲಾ&ಕಾಲೇಜು ವಿದ್ಯಾಥಿರ್ಗಳು ಮೆರವಣಿಗೆ ನಡೆಸಿದರು.
ಸನ್ಮಾನ:
ಕಾಗಿರ್ಲ್ ಯುದ್ಧದಲ್ಲಿ ಮಡಿದ ಚೊಳಚಗುಡ್ಡದ ವೀರಯೋಧ ಶಿವಬಸಯ್ಯ ಅವರ ಪತ್ನಿ ನಿರ್ಮಲಾ, ಅಳವಂಡಿ ಗ್ರಾಮದ ಮಲ್ಲಯ್ಯ ಅವರ ಪತ್ನಿ ಸರೋಜಾ ಹಾಗೂ ಕಾಶಿರಾಮೇಶಪ್ಪ ಅವರ ಪತ್ನಿ ಗಂಗಮ್ಮ ಅವರನ್ನು ಸನ್ಮಾನಿಸಲಾಯಿತು.