ಕಪ್ಪತಗುಡ್ಡದ ರಕ್ಷಣೆಗೆ ಕೇಂದ್ರ ಮಹತ್ವದ ಹೆಜ್ಜೆ

download
Published on

ವಿಜಯವಾಣಿ ವಿಶೇಷ ಗದಗ

ಕಪ್ಪತಗುಡ್ಡದ ವನ್ಯಜಿವಿಧಾಮ ಸುತ್ತಲಿನ 322 ಚದರ್​ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ$್ಮವಲಯ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಇಲಾಖೆ ಗುರುವಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಅಧೀಸೂಚನೆಯಲ್ಲಿ ಅನೇಕ ಕಟ್ಟುನಿಟ್ಟಿನ ನಿಯಮಗಳನ್ನು ಸೂಚಿಸಲಾಗಿದ್ದು, ಗಣಿಗಾರಿಕೆ ನಿಷೇಧಿಸಿದೆ. ಕೇಮದ್ರದ ನಿರ್ಧಾರದಿಂದ ಈ ಭಾಗದಲ್ಲಿ ಪರಿಸರ ಹೋರಾಟಗಾರರದಲ್ಲಿ ಸಮಾಧಾನ ತಂದಿದೆ. ಆದರೆ, ವನ್ಯ ಜೀವಿ ಧಾಮದ 1 ಕಿಮೀ ವ್ಯಾಪ್ತಿ ಬದಲಾಗಿದೆ 10 ಕಿಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ$್ಮ ವಲಯ ಎಂದು ಘೋಷಣೇ ಮಾಡಬೇಕಿತ್ತು ಎಂಬ ಕೂಗು ಕೇಳಿಬಂದಿದೆ.

ಕಪ್ಪತಗುಡ್ಡದಲ್ಲಿ ಮ್ಯಾಂಗ್​ನೀಸ್​, ಚಿನ್ನ ಸೇರಿದಂತೆ ಅತ್ಯಧಿಕ ಲೋಹದ ಕಚ್ಚಾ ವಸ್ತು ಸಿಗುವ ಹಿನ್ನೆಲೆ ಗಣಿಕಾರಿಕೆ ನಡೆಸಲು ಪ್ರಸ್ತಾವನೆ ಸಲ್ಲಿಕೆ ಆಗಿದ್ದವು. ಕಪ್ಪತಗುಡ್ಡದ ಕೇಂದ್ರದಲ್ಲಿ ವನ್ಯಜಿವಿಧಾಮ ಎಂದು ಘೋಷಣೆ ನಂತರೂ ಸುತ್ತಲಿನ ಪ್ರದೇಶವಾದ ಪರಿಸರ ಸೂಕ್ಷ$್ಮ ವಲಯದದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೋರಿ ಗಣಿ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದವು. ಗಣಿಗಾರಿಕೆ ನಡೆಸಲು ಹಲವು ಕ್ರಮ ಪ್ರಯತ್ನಗಳು ನಡೆದವು. ಆದರೆ, ಸ್ಥಳಿಯರ, ಮಠಾಧೀಶರ ಮತ್ತು ಸಾಮಾಜಿಕ ಹೋರಾಟಗಾರರ ಪ್ರಯತ್ನಗಳಿಂದ ಅಕ್ರಮಕ್ಕೆ ಅವಕಾಶ ನೀಡಲಾಗಿಲ್ಲ. ಅಂತಿಮವಾಗಿ ಸರ್ಕಾರ ಕಪ್ಪತಗುಡ್ಡದ ವನ್ಯಜಿವಿಧಾಮದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ$್ಮ ವಲಯದ ಎಂದು ಘೋಷಣೆ ಮಾಡಿದೆ.

ಅಂತಿಮ ಅಧಿಸೂಚನೆ

ಕಪ್ಪತಗುಡ್ಡ ವನ್ಯಜಿವಿಧಾಮದ ಸುತ್ತಲಿನ 322 ಚದರ್​ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ$್ಮ ವಲಯ ಎಂದು ಗುರುತಿಸಿ ಕೇಂದ್ರ ಅರಣ್ಯ ಸಚಿವಾಲಯ ಕಳೆದ ವರ್ಷ ಕರಡು ಅಧಿಸೂಚನೆ ಹೊರಡಿಸಿತ್ತು. ನಂತರ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ-ಸೂಚನೆಗಳನ್ನು ನೀಡುವಂತೆ ಅವಕಾಶ ನೀಡಲಾಗಿತ್ತು. ಆಕ್ಷೇಪಣೆ ಸಲಹೆ ಸೂಚನೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು. ಈ ಸಮಯದಲ್ಲಿ ಕಪ್ಪತಗುಡ್ಡ ವ್ಯಾಪ್ತಿಯ ಅನೇಕ ಪರಿಸರವಾದಿಗಳು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದರು. ಎಲ್ಲ ಅಭಿಪ್ರಾಯ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಅಂತಿಮ ಸರ್ಕಾರ ಅಧಿಸೂಚನೆ ಹೊರಬಿದ್ದಿದೆ.

62 ಗ್ರಾಮಗಳ ವ್ಯಾಪ್ತಿ:

ಸರ್ಕಾರ ಘೋಷಿತ ಸೂಕ್ಷ$್ಮಪರಿಸರ ವಲಯದಲ್ಲಿ 298.89 ಚದರ ಕಿ.ಮೀ. ಕಂದಾಯ ಗ್ರಾಮಗಳ ಪ್ರದೇಶ ಮತ್ತು 23.80 ಚದರ ಕಿ.ಮೀ. ಅಧಿಸೂಚಿತ ಅರಣ್ಯ ಪ್ರದೇಶ ಸೇರಿವೆ. ಈ ಪ್ರದೇಶದಲ್ಲಿ ಒಟ್ಟು 62 ಗ್ರಾಮಗಳು ವ್ಯಾಪ್ತಿಗೆ ಒಳಪಟ್ಟಿವೆ. ವನ್ಯಜಿವಿಧಾಮದ ಅಂಚಿನಿಂದ ಕನಿಷ್ಠ 1 ಕಿ.ಮೀ.ನಿಂದ ಗರಿಷ್ಠ 4.30 ಕಿ.ಮೀ.ವರೆಗೆ ಪರಿಸರ ಸೂಕ್ಷ$್ಮ್ಮ ವಲಯವನ್ನು ಗುರುತಿಸಲಾಗಿದೆ. ಉತ್ತರ ದಿಕ್ಕಿನಲ್ಲಿ 1 ಕಿ.ಮೀ. ನಿಂದ 3.25 ಕಿ.ಮೀ., ಪಶ್ಚಿಮ ದಿಕ್ಕಿನಲ್ಲಿ 4.30 ಕಿ.ಮೀ., ವಾಯುವ್ಯ ದಿಕ್ಕಿನಲ್ಲಿ 1.96 ಕಿ.ಮೀ., ಇನ್ನುಳಿದ ದಿಕ್ಕುಗಳಲ್ಲಿ 1 ಕಿ.ಮೀ ಘೋಷಣೆ ಮಾಡಲಾಗಿದೆ.

ನಿಷೇಧಿತ ಚಟುವಟಿಕೆಗಳು:

322 ಚದರ್​ ಕಿ.ಮೀ. ಪರಿಸರ ಸೂಕ್ಷ$್ಮವಲಯ ಘೋಷಯಿಂದ ಘೋಷಿತ ಪರಿಸರದಲ್ಲಿ ಎಲ್ಲ ರೀತಿಯ ಗಣಿಗಾರಿಕೆಗೆ ಬ್ರೇಕ್​ ಬೀಳಲಿದೆ. ಪರಿಸರಕ್ಕೆ ಹಾನಿ ಮಾಡುವ ಕೈಗಾರಿಕೆಗಳ ಸ್ಥಾಪನೆಗೆ ನಿಷೇಧ. ಹೊಸ ಉಷ್ಣ ವಿದ್ಯುತ್​ ಯೋಜನೆಗಳು, ನೈಸಗಿರ್ಕ ಜಲಮೂಲಗಳಿಗೆ ಸಂಸ್ಕರಿಸದ ತ್ಯಾಜ್ಯಗಳನ್ನು ವಿಸಜಿರ್ಸುವುದು, ಹೊಸ ನತ್ಯಾಜ್ಯ ವಿಲೇವಾರಿ ಟಕಗಳು, ಜೈವಿಕ ಮತ್ತು ವೈದ್ಯಕಿಯ ತ್ಯಾಜ್ಯ ಸುಡುವ ಟಕಗಳಿಗೆ ಅವಕಾಶವಿಲ್ಲ.

ವಾಣಿಜ್ಯ ಚಟುವಟಿಕೆಗಳು:

ನಿರ್ಮಾಣ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಇಟ್ಟಿಗೆ ಗೂಡುಗಳು, ಮರದ ಮಿಲ್​ಗಳು ಮತ್ತು ಮರ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ನಿಷೇಧ. ದೊಡ್ಡ ಪ್ರಮಾಣದ ಜಾನುವಾರು ಹಾಗೂ ಕೋಳಿ ಫಾರ್ಮಗಳಿಗೆ ಅವಕಾಶವಿಲ್ಲ. ಪರಿಸರ ಸೂಕ್ಷ$್ಮ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯೊಳಗೆ ಯಾವುದೇ ಹೋಟೆಲ್​ಗಳು ಅಥವಾ ರೆಸಾರ್ಟ್​ಗಳನ್ನು ಆರಂಭಿಸುವಂತಿಲ್ಲ.

ಏನಿದು ಕಪ್ಪತಗುಡ್ಡ ಪರಿಸರ:

ಕಪ್ಪತಗುಡ್ಡ 32,346 ಹೆಕ್ಟೇರ್​ ಪ್ರದೇಶದಲ್ಲಿ ವ್ಯಾಪಿಸಿದೆ. ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರ ವರೆಗೆ ಸುಮಾರು 63 ಕಿ.ಮೀ. ಉದ್ದವಿದೆ. 300ಕ್ಕೂ ಹೆಚ್ಚ ಔಷಧೀಯ ಸಸ್ಯಗಳು, 18ಕ್ಕೂ ಹೆಚ್ಚು ವನ್ಯಜಿವಿಗಳು, ನೂರಾರು ಬಗೆಯ ಪಕ್ಷಿಗಳಿಗೆ ಆಶ್ರಯ ನೀಡಿದೆ. 2019ರಲ್ಲಿ ರಾಜ್ಯ ಸರ್ಕಾರ ಕಪ್ಪತಗುಡ್ಡದ 24,415 ಹೆಕ್ಟೇರ್​ ಪ್ರದೇಶವನ್ನು ವನ್ಯಜಿವಿಧಾಮ ಎಂದು ಘೋಷಣೆ ಮಾಡಿದೆ. ಪ್ರಸ್ತುತ ವನ್ಯಜಿವಿಧಾಮ ಸುತ್ತಲಿನ 322 ಚ. ಕಿ. ಮೀ. ಪ್ರದೇಶವನ್ನು ಪರಿಸರ ಸೂಕ್ಷ$್ಮ ವಲಯ ಎಂದು ಘೋಷಿಸಲಾಗಿದೆ.

ಕೋಟ್​

ಕೇಂದ್ರದ ಸರ್ಕಾರ ಘೋಷಣೆಯಿಂದ ಇಲ್ಲಿನ ಗ್ರಾಮಸ್ಥರಿಗೆ ಯಾವುದೇ ತೊಂದರೆ ಇಲ್ಲ. ಗ್ರಾಮಸ್ಥ ಆದರೆ, ವಾಣಿಜ್ಯ, ಕೈಗಾರಿಕೆ ಸೇರಿದಂತೆ ಪರಿಸರ ನಾಶದ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಪರಿಸರ ವಲಯದಲ್ಲಿ ಇಟ್ಟಿಗೆ ಗೂಡುಗಳನ್ನು ನಿಷೇಧಿಸಲಾಗಿದೆ.

& ಮಂಜುನಾಥ ಮೇಗಲಮನಿ, ಆರ್​ಎ್​ಓ, ಮುಂಡರಗಿ.

ಕೋಟ್​:

ಕೇಂದ್ರ ಅಧಿಸೂಚನೆ ಸ್ವಾಗತರ್ಹ. ಪರಿಸರ ರಕ್ಷಣೆಗೆ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ, ವನ್ಯಜಿವಿಧಾಮದಿಂದ 10 ಕೀಮಿ ವ್ಯಾಪ್ತಿಯನ್ನು ನಿಷೇಧಿಸಿದ್ದರೆ ಇನ್ನೂ ಒಳಿತಾಗುತ್ತಿತ್ತು.

ರವಿಕಾಂತ ಅಂಗಡಿ, ಸಾಮಾಜಿಕ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net