

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ಕಪ್ಪತಗುಡ್ಡದ 80 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಸಂರತ ಜೀವ ವೈವಿಧ್ಯತಾ ತಾಣವನ್ನಾಗಿ ವಿಸ್ತರಿಸುವುದು ಮತ್ತು ಅದರ ಪರಿಧಿಯ 10 ಕಿಲೋ ಮೀಟರ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸಲು ಆಗ್ರಹಿಸಿ ಕಪ್ಪತಗುಡ್ಡ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಶ್ರೀಗಳು ಗುರುವಾರ ಬೆಳಗಾವಿ ವಿಭಾಗೀಯ ಆಯುಕ್ತರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ನಂದಿವೇರಿ ಶ್ರೀಗಳು, ಕಪ್ಪತಗುಡ್ಡದ ಸಂರಣಾ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿ ಆಗಾಗ ಸಂಕಷ್ಟಗಳನ್ನು ಸೃಷ್ಟಿಸುತ್ತಿರುವ ಕರ್ನಾಟಕ ಸರ್ಕಾರದ ಧೋರಣೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಪ್ಪತಗುಡ್ಡದ ನೆಲ, ಜಲ ಜಾನುವಾರಗಳ ಹಾಗೂ ಜೀವ ಜೈವಿಧ್ಯತೆಗಳ ಸಂರಣೆಗಾಗಿ ಬದ್ಧವಿರಬೇಕಿದ್ದ ಸರ್ಕಾರವು ಹಿತ್ತಲು ಬಾಗಿಲಿನಿಂದ ಗಣಿಗಾರಿಕೆಗೆ ಅವಕಾಶ ನೀಡುವ ಹುನ್ನಾರದೊಂದಿಗೆ ನೀತಿ ರೂಪಿಸಿ ಜನಸಾಮಾನ್ಯರ ಕಣ್ಣು ಒರೆಸುವ ತಂತ್ರ ಅನುಸರಿಸರಿಸಿದೆ. ಇತ್ತೀಚೆಗೆ ಗಣಿಗಾರಿಕೆಗೆ ಅನುಮತಿ ನೀಡುವ ಪ್ರಸ್ತಾವನೆಗಳ ಮೇಲೆ ನಿರ್ಧಾರ ಕೈಗೊಳ್ಳುವುದನ್ನು ಸರ್ಕಾರ ಮುಂದೂಡಿದೆ ವಿನ: ಕೈಬಿಟ್ಟಿಲ್ಲ. ಇದೊಂದು ಇಬ್ಬಗೆಯ ನೀತಿ ಎಂದು ವಿರೋಧಿಸಿದರು.
ಕಪ್ಪತಗುಡ್ಡದ ಸಂರಣಾ ಹೋರಾಟಗಾರ ರುದ್ರಣ್ಣ ಗುಳಗುಳಿ ಮಾತನಾಡಿ, ಗಣಿಗಾರಿಕೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಹಿಂದೆ ಸರ್ಕಅರವು ವ್ಯತಿರಿಕ್ತ ಆದೇಶ ಹೊರಡಿಸಿ ಕೈಸುಟ್ಟುಕೊಂಡಿದೆ. ತೋಂಟದ ಸಿದ್ಧಲಿಂಗ ಶ್ರೀಗಳು ಮತ್ತು ನಂದಿವೇರಿ ಶಿವಕುಮಾರ ಶ್ರೀಗಳ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಮಠಾಧೀಶರು ನಡಸಿದ ಪ್ರತಿಭಟನೆ ಹಿನ್ನೆಲೆ ಈ ಹಿಂದೆ ಕಪ್ಪತಗುಡ್ಡದ ಕೆಲವೇ ಕೆಲವು ಭಾಗವನ್ನು ಜೀವ ವೈವಿಧ್ಯತಾ ತಾಣವೆಂದು ಸರ್ಕಾರ ೂಷಿಸಿತ್ತು. ಸರ್ಕಾರವು ಜೇನು ಗೂಡಿಗೆ ಕೈಹಾಕಿದ್ದು ಈ ಭಾಗದ ಜನರ ರೋಷಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಪರಿಸರವಾದಿ ಭಾಲಚಂದ್ರ ಜಾಬಶೆಟ್ಟಿ, ನ್ಯಾಯವಾದಿ ಸರಸ್ವತಿ ಪೂಜಾರ, ಸಂಗನಗೌಡ ಬಿರಾದಾರ, ಶಂಕರ ಕುಂಬಿ, ಎಂ. ವೈ. ಮೆಣಸಿನಕಾಯಿ, ಶಾರದಾ ಗೋಪಾಲ, ಅನಿತಾ ಪಾಟೀಲ, ಸುಭದ್ರಾ ಕುಲಕಣಿರ್, ಕೆ. ಎಸ್. ನಾಯಕ, ಪರಿಮಳಾ ಜಕ್ಕಣ್ಣವರ ಇತರರು ಇದ್ದರು.
ಗದಗ ಕಪ್ಪತಗುಡ್ಡದಲ್ಲಿ 10 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ನಂದಿವೇರಿ ಶ್ರೀಗಳ ನೇತೃತ್ವದಲ್ಲಿ ಬೆಳಗಾವಿ ವಿಭಾಗ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಶಂಕರ ಕುಂಬಿ, ಎಂ. ವೈ. ಮೆಣಸಿನಕಾಯಿ, ಶಾರದಾ ಗೋಪಾಲ, ಅನಿತಾ ಪಾಟೀಲ, ಸುಭದ್ರಾ ಕುಲಕಣಿರ್ ಇತರರು ಇದ್ದರು.