ಕಪತ್ತಗುಡ್ಡದಲ್ಲಿ ಹಲವು ಪ್ರಾಣಿ ಸಂಕಲು, ಸಮೀಕ್ಷೆಯಲ್ಲಿ ಬಹಿರಂಗ, ಪ್ರಾಣಿ ಸಂಕುಲ ಅಲ್ಲಗಳೆದಿದ್ದ ಗಣಿ ಕಂಪನಿಗಳಿಗೆ ಹಿನ್ನಡೆ. ಅಪರೂಪದ ಚಿಂಕಾರ ಜೀವಿ ಪತ್ತೆ.

20230721_172142
Published on

ವಿಜಯವಾಣಿ ವಿಶೇಷ, ಗದಗ
ಕಪ್ಪತಗುಡ್ಡದಲ್ಲಿ ವನ್ಯಜೀವಿ ಸಂಕುಲ ಇರುವಿಕೆ ಬಗ್ಗೆ ಆಗಾಗ ತಗಾದೆ ತೆಗೆದು, ಗಣಿಗಾರಿಕೆ ನಡೆಸಲು ಸಂಚು ರೂಪಿಸುತ್ತಿದ್ದ ಹಲವು ಗಣಿಕಂಪನಿಗಳಿಗೆ ಹಿನ್ನಡೆಯಾಗಿದೆ. ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಹಲವು ಜೀವಿ ಸಂಕುಲ ಇರುವಿಕೆ ಗುರುತು ಪತ್ತೆಯಾಗಿದ್ದಲ್ಲದೇ ಹೊಸ ಸಂಕುಲಗಳು ಕಂಡು ಬಂದಿವೆ. ಜತೆಗೆ ವನ್ಯ ಜೀವಿ ಸಂಕುಲವು ಅಧಿಕಗೊಂಡಿದೆ.
ಕಪ್ಪತಗುಡ್ಡವನ್ನು "ಸಂರಕ್ಷತ ಅರಣ್ಯ ಪ್ರದೇಶ' ಎಂದು ಘೋಷಿಸುವ ಸಲುವಾಗಿ 2016ರಲ್ಲಿ ತಾಲೂಕಿನ ಡಂಬಳದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಗಣಿ ಕಂಪನಿಗಳು ಕಪ್ಪತಗುಡ್ಡದಲ್ಲಿ ವನ್ಯಜೀವಿ ಸಂಕುಲ ಇರುವಿಗೆ ಬಗ್ಗೆ ಪ್ರಶ್ನೆ ಎತ್ತಿದ್ದವು. ದಟ್ಟ ಅರಣ್ಯ ಇಲ್ಲವೆಂದು ಸಮಿತಿಗೆ ಅರ್ಜಿ ಸಲ್ಲಿಸಿದ್ದವು. 2019ರಲ್ಲಿ ರಾಜ್ಯ ಸರ್ಕಾರ ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸಿತು. ಜಿಲ್ಲಾ ಅರಣ್ಯ ಇಲಾಖೆ ಪ್ರಸ್ತುತ ನಡೆಸಿದ ಸಮೀಕ್ಷೆಯಲ್ಲಿ ಮೊಟ್ಟಮೊದಲ ಬಾರಿಗೆ ಅತೀ ಅಪರೂಪದ ಪ್ರಾಣಿಗಳಾದ ಚಿಂಕಾರ ಮತ್ತು ರಸ್ಟಿ ಸ್ಪಾಟೆಡ್​ ಬೆಕ್ಕು ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ. ಜತೆಗೆ ಕತ್ತೆಕಿರುಬ, ಚಿರತೆ, ನರಿ, ಕಾಡುಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣ ಮೃಗ ಹಾಗೂ ವಿಶೇಷವಾಗಿ ಕಪ್ಪತ್ತಗುಡ್ಡದಲ್ಲಿ 3 ಜಾತಿಯ ಹುಲ್ಲೆಗಳು (ಆ್ಯಂಟಿಲೋಪ್​) ಕಂಡು ಬಂದಿದೆ.

ಬಾಕ್ಸ್​:
ಕಪ್ಪತ್ತಗುಡ್ಡ ವನ್ಯಜೀವಿಧಾಮವು ಜಿಲ್ಲೆಯ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರು ವರೆಗೆ 65 ಕಿಮೀ ಊದ್ದ ಹಾಗೂ 2 ಕಯಿಂದ 10 ಕಿಮೀ ಗಳಷ್ಟು ಅಗಲ ಹರಡಿಕೊಂಡಿದ್ದು, 244.5 ಚಕಿಮೀ ವ್ಯಾಪಿಸಿದೆ. ಸಮುದ್ರ ಮಟ್ಟದಿಂದ 1005 ಮೀ. ಎತ್ತರದಲ್ಲಿದೆ. ಸೂಜಿ ಮಡ್ಡಿ, ಕೆಂಪ ಗುಡ್ಡ, ಗಾಳಿಗುಂಡಿ, ಎತ್ತಿನ ಗುಡ್ಡ, ಆನೆ ಸೊಂಡಿಲು, ಉಪ್ಪಿನ ಪಡಿ, ಮಂಜಿನ ದೋಣಿ, ಮಜ್ಜಿಗೆ ಬಸವಣ್ಣ ಗುಡ್ಡ ಹಾಗೂ ಇತರೆ ಗುಡ್ಡಗಳಿಂದ ಕೂಡಿದೆ. ಕತ್ತೆ ಕಿರುಬ, ತೋಳ, ಚಿರತೆ, ನರಿ, ಗುಳ್ಳೆನರಿ, ರಸ್ಟಿ ಸ್ಪಾಟೆಡ್​ ಬೆಕ್ಕು, ಕಾಡು ಬೆಕ್ಕು, ಪುನಗ ಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣಮೃಗ, ಕೊಂಡುಕುರಿ, ಚಿಂಕಾರ, ಮುಳ್ಳಹಂದಿ, ಕಾಡುಹಂದಿ, ನವಿಲು, ಕೌಜಗ, ಗೂಬೆ, ಹದ್ದು, ಹೆಬ್ಬಾವು, ಉಡಾ, ಕೊಳಕಮಂಡಲ, ನಾಗರಹಾವು, ಕಟ್ಟಹಾವು, ಗರಗಸ ಮಂಡಲ, ಮಣ್ಣಮುಕ್ಕು ಹಾವು, ತಾರೆ, ಅಳಲೆ, ಬೀಟೆ, ತೇಗ, ಶ್ರೀಗಂಧ, ನೆಲ್ಲಿ, ಅಂಜನ, ಬೇವು, ತಪಸಿ, ದಿಂಡಲ್​, ಕಕ್ಕೆ ತುಗ್ಗಲಿ, ಮಶವಾಳ ಜತೆಗೆ ಸಸ್ಯ ಔಷಧಿಗಳಾದ ಅಂಟವಾಳ, ತುಳಸಿ, ನೆಲಬೇವು, ಲೋಳೆಸರ, ಕಣಗಲಿ, ಆಡುಸೋಗೆ, ಎಕ್ಕೆ, ಉತ್ತರಾಣಿ ಸೇರಿದಂತೆ ಹತ್ತಾರು ಸಸ್ಯ ಔಷಧಗಳನ್ನು ಒಳಗೊಂಡಿದೆ.

ಕೋಟ್​:
ಕಪ್ಪತಗುಡ್ಡದಲ್ಲಿ ಅಧ್ಯಯನ ಮತ್ತು ಸಂಶೋಧನೆಗಳ ಅಗತ್ಯವಿತ್ತು. ಮೆ 7 ರಿಂದ ಜು. 15ರ ವರೆಗೆ ಕೈಗೊಳ್ಳಲಾಗಿತ್ತು. ಈ ಅಧ್ಯಯನಕ್ಕಾಗಿ ಸೈನ್​ ಸಮೀೆ, ಲೈನ್​ ಟ್ರಾನ್ಸೆಕ್ಟ್​ ಮತ್ತು ಕ್ಯಾಮರಾ ಟ್ರ್ಯಾಪ್​ ಮತ್ತು ಇತರೆ ವಿದ್ಮಾನುಗಳನ್ನು ಬಳಸಿಕೊಂಡು ಪ್ರಾಣಿಗಳ ಸಂತತಿ ಸಂಖ್ಯೆ, ಸಮೃದ್ಧಿತ ಪ್ರದೇಶ ಹಾಗೂ ವನ್ಯಜೀವಿಗಳ ಆಹಾರ ಪದ್ದತಿ ಬಗ್ಗೆ ಅಧ್ಯಯನ ಮಾಡಲಾಗಿದೆ.
- ದೀಪಿಕಾ ಬಾಜಪೇಯಿ,
ಉಪ ಅರಣ್ಯ ಸಂರಣಾಧಿಕಾರಿ, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net