ವಿಜಯವಾಣಿ ಸುದ್ದಿಜಾಲ ಗದಗ
ವ್ಯಕ್ತಿಯ ಜೀವನದಲ್ಲಿ ಓದು ಜ್ಞಾನವನ್ನು ತುಂಬಿ ಜಗತ್ತನ್ನು ಪರಿಚಯಿಸುತ್ತದೆ. ಇದರಿಂದ ವ್ಯಕ್ತಿಯಲ್ಲಿ ಸಾಮರ್ಥ್ಯ ವಿಸ್ತಾರವಾಗುತ್ತದೆ. ಜ್ಞಾನ ವ್ಯಕ್ತಿಗೆ ಆತ್ಮಬಲ ಹೆಚ್ಚಿಸುತ್ತದೆ ಎಂದು ವಿಡಿಎಸ್ ಹೆಣ್ಣುಮಕ್ಕಳ ಪಿಯು ಕಾಲೇಜಿನ ಪ್ರಾಚಾರ್ಯ ಬಿ. ಎಸ್. ರಾಠೋಡ ಹೇಳಿದರು.
ನಗರದ ಕಲ್ಯಾಣಸಿರಿ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಬಾವಹಿಸಿ ಮಾತನಾಡಿದ ಅವರು, ವಿದ್ಯೆಯ ಜೊತೆಗೆ ವಿದ್ಯಾಥಿರ್ ಜಿವನದಲ್ಲಿ ಕೆಟ್ಟ ಹವ್ಯಾಸಗಳನ್ನು ಇಟ್ಟುಕೊಳ್ಳದೇ ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸಕಾರಾತ್ಮಕವಾಗಿ ಚಿಂತಿಸುತ್ತ ಬದುಕುವುದರಿಂದ ಒಂದು ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾಥಿರ್ಗಳು ಎನ್ಸಿಸಿ ಮತ್ತು ಎನ್ಎನ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಶಿಸ್ತು, ಸಂಯಮ ದೇಶಭಕ್ತಿ ಮತ್ತು ಸಾಮಾಜಿಕ ಜವಾಬ್ದಾರಿ ಉನ್ನತ ಮಟ್ಟದಲ್ಲಿ ರೂಪಿತವಾಗುತ್ತದೆ ಎಂದರು.
ಪ್ರೊ. ಬಿ. ಎಂ. ನದ್ದಿಮುಲ್ಲಾ ಮಾತನಾಡಿ. ದೇಶದ ಸ್ವತ್ತು ಮತ್ತು ಸಮಾಜದ ಆಸ್ತಿ ಆಗಬೇಕೆಂದ್ರೆ ಜೀವನದಲ್ಲಿ ಶಿಸ್ತು ಕಾಯ್ದುಕೊಳ್ಳಬೇಕು. ಜೀವನದಲ್ಲಿ ಯಶಸ್ಸಿಗೆ ಒಳ ಮಾರ್ಗಗಳಿಲ್ಲ. ಯಾರು ಕಷ್ಟ ಸಹಿಸಿ ಪರಿಶ್ರಮ ಪಟ್ಟು ಸ್ವಂತ ವಿವೇಚನೆಯಿಂದ ಮುನ್ನುಗ್ಗುತ್ತಾರೋ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಬಿ. ಜಿ. ಹಿರೇಮಠ ಮಾತನಾಡಿ, ವಿದ್ಯಾಥಿರ್ಗಳು ಕಲಿಯುವ ಹಂತದಲ್ಲಿ ಒಳ್ಳೆಯ ಜ್ಞಾನ, ಒಳ್ಳೆಯ ಕೌಶಲ್ಯಗಳನ್ನು ಆಳವಡಿಸಿಕೊಂಡು ಶಿಕರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಅದರ ಸದುಪಯೋಗ ಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯ ಪ್ರಚಾರ್ಯ ಬಿ. ಬಿ. ಗೌಡರ ಮಾತನಾಡಿ, ಸತ್ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿ ಪ್ರಾರಂಭದಲ್ಲಿ ಅನೇಕ ಎಡರು&ತೊಡರುಗಳು ಕಷ್ಠಕಾರ್ಪಣ್ಯಗಳು ಸವಾಲಿನ ರೂಪದಲ್ಲಿ ಬಂದೆರಗುತ್ತವೆ. ಅಂತಹ ಸಂದರ್ಭದಲ್ಲಿ ನಿಮಗೆ ನೀವೆ ಶಕ್ತಿಯಾಗಿ ಧೈರ್ಯದಿಂದ ಮುನ್ನುಗ್ಗಬೇಕು, ಇಟ್ಟ ಗುರಿ ಮುಟ್ಟುವವರೆಗೂ ವಿಶ್ರಮಿಸದೆ ಸಾಗಿ ಗುರಿ ತಲುಪಿದಾಗ ಸಮಾಜ ನಿಮ್ಮನ್ನು ಒಪ್ಪಿ ಅಪ್ಪಿಕೊಳ್ಳುತ್ತದೆ. ಆದ್ದರಿಂದ ಸಾಧಿಸುವವನಿಗೆ ಮುಂದಿನ ಭವಿಷ್ಯ ಕಾಣಬೇಕೆ ಹೊರತು ಕಷ್ಠಗಳಿವೆ ಎಂದು ಹೇಳುತ್ತಾ ವಿದ್ಯಾಥಿರ್ಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಬಾರದು.
ವಿದ್ಯಾಥಿರ್ಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಮಹಾವಿದ್ಯಾಲಯವು ಶೈಕ್ಷಣಿಕವಾಗಿ ಸಾಂಸತಿಕವಾಗಿ ಮತ್ತು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿಸುತ್ತದೆ. ಅದರಿಂದ ನಮಗೆ ಜೀವನದಲ್ಲಿ ಉತ್ತಮ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಯಿತು ಎಂದು ವಿದ್ಯಾಥಿರ್ಗಳು ನೆನಪುಗಳನ್ನು ಹಂಚಿಕೊಂಡರು.
ಪ್ರೊ. ನಾಗರಾಜ ವಡಗೇರಿ, ಪ್ರೊ. ಶಶಿಕಲಾ ಉಮ್ಮಣ್ಣವರ, ಪ್ರೊ. ಚಂದನಾ ಹಿರೇಮಠ ಇತರರು ಇದ್ದರು.