

ಗದಗ : ಗದಗ ನಗರದ ಡಾ.ಪಂ.ಪುಟ್ಟರಾಜ ಗವಾಯಿಗಳ ಸಂಸ್ಕೃತ ಪಾಠಶಾಲೆಯಲ್ಲಿ ಜಿಲ್ಲಾ ಮಟ್ಟದ ಸಂಸ್ಕೃತ ಶ್ರಾವಣಿ ಮತ್ತು ಯುಷ್ಮಾಕಂ ಸಂಸ್ಕೃತA ಸಮಾರೋಪ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಜ್ಞಾನದ ನಿಧಿಯನ್ನು ಒಳಗೊಂಡ ಭಾಷೆಯಾವುದಾದರು ಇದ್ದರೆ ಅದು ಸಂಸ್ಕೃತ ಭಾಷೆ, ಇದನ್ನು ಸರ್ವರೂ ಅಧ್ಯನವನ್ನು ಮಾಡುತ್ತಾ ಮನನ ಮಾಡಿಕೊಳ್ಳಬೇಕು. ಸಂಸ್ಕೃತ ಭಾಷೆ ಅಪಾರ ಜ್ಞಾನ ಸಂಪತ್ತುಳ್ಳ ಭಾಷೆ ಪುಟ್ಟರಾಜ ಗುರುಗಳೂ ಸಹ ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರಾಗಿದ್ದರು. ಈ ಭಾಷೆಯನ್ನು ಕಲಿತವರು ಸರ್ವರೂ ಸುಸಂಸ್ಕೃತರಾಗಿ ಭಾಳುತ್ತಾರೆ ಆದ್ದರಿಂದ ಸರ್ವರೂ ಹೆಚ್ಚು ಹೆಚ್ಚು ಸಂಸ್ಕೃತ ಕಲಿತು ಸಂಭಾಷಣೆ ಮಾಡುವಂತಾಗಲಿ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ತಮ್ಮ ಆಶಿರ್ವಚನದಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಪಿ.ಜಿ.ಎ.ಎಸ್.ಸಮಿತಿಯ ಆಡಳಿತಾಧಿಕಾರಿ ಶ್ರೀ ಪಿ.ಸಿ.ಹಿರೇಮಠರು 1995-96ರಲ್ಲಿ ಉಡುಪಿಯಲ್ಲಿ ಜರುಗಿದ ದೊಡ್ಡ ಸಂಸ್ಕೃತ ಸಮ್ಮೇಳನದಲ್ಲಿ ತ್ರಿಭಾಷಾ ಕವಿಗಳಾದ ಪೂಜ್ಯ ಪುಟ್ಟರಾಜ ಗವಾಯಿಗಳು ಭಾಗವಹಿಸಿದ್ದನ್ನು ಸ್ಮರಿಸಿ ಸಂಸ್ಕೃತ ಪಾಠಶಾಲೆಗೆ 24*7 ರೀತಿಯಲ್ಲಿ ಸಹಾಯ ಮಾಡುವುದಾಗಿ ಅಲ್ಲದೆ ಬಹುಮಾನ ವಿತರಣೆ, ಸನ್ಮಾನ ಮುಂತಾದ ಕಾರ್ಯಕ್ರಮಗಳಿಗೆ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಧಾರವಾಡ ವಲಯ ಸಂಸ್ಕೃತ ಪಾಠಶಾಲಾ ವಿಷಯ ಪರಿವೀಕ್ಷಕರು ಮತ್ತು ಡಿ.ಜಿ.ಎಂ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕರಾದ ಶ್ರೀ ಜಿ.ಎಸ್ ಗಾಂವ್ಕರ್ ಮಾತನಾಡಿ ಹಿಂದಿನಿದ ನಡೆಸಿಕೊಂಡು ಬಂದ ಕಾರ್ಯಕ್ರಮವನ್ನು ಮತ್ತಷ್ಟು ಚೆನ್ನಾಗಿ ನಡೆಸಬೇಕು ಎಲ್ಲ ಸಂಸ್ಕೃತ ಪಾಠಶಾಲೆ ಶಿಕ್ಷಕರು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡು ಸಂಸ್ಕೃತವನ್ನು ಪ್ರಚಾರ ಪ್ರಸಾರ ಮಾಡಬೇಕು, ಭಾಷಣ, ಕಂಠಪಾಠ, ಪ್ರಬಂಧ ಸ್ಪರ್ಧೆಗಳ ನಿರ್ಣಾಯಕರಾಗಿ ಬಂದ ಜ.ತೋಂಟದಾರ್ಯ ಸಂ.ಪಾ. ನಿವೃತ್ತ ಮುಖ್ಯ ಗುರುಗಳಾದ ಶ್ರೀ ಎಸ್ ವಿ.ಹಿರೇಮಠರು ನಿವೃತ್ತ ಮುಖ್ಯ ಗುರುಮಾತೆಯರಾದ ಶ್ರೀಮತಿ ಜಯಶ್ರೀ ಮೆಳ್ಳಿಗೇರಿಯವರೊಂದಿಗೆ ಅತ್ಯಂತ ಪರಿಶ್ರಮದಿಂದ ನಿರ್ಣಯ ಕೈಗೊಳ್ಳಲಾಗಿದೆ ಯಾರಿಗೆ ಬಹುಮಾನ ಬಂದಿಲ್ಲವೋ ಅವರು ಹತಾಶರಾಗಿರದೆ ಮತ್ತೆ ಪ್ರಯತ್ನಿಸಿದರೆ ಖಂಡಿತ ಯಶಸ್ಸು ಗಳಿಸುವಿರಿ ಎಂದು ತಿಳಿಸಿದರು.
2025ನೇ ಸಂಸ್ಕೃತ ಪ್ರಸಿದ್ಧ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದವರಿಗೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು ಜ.ಪಂ.ಪಾಠಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಗುರುಶಿದ್ಧಯ್ಯ ಹಿರೇಮಠ ಹಾಗೂ ಶ್ರೀ ಬಿ.ಜಿ.ಅ. ಸಂ.ಪಾ ಶ್ರೀ ಕಳಕಪ್ಪ ಕುರ್ತಕೋಟಿ ಕಾರ್ಯಕ್ರಮ ನಿರೂಪಿಸಿದರು ತೋಂಟದಾರ್ಯ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕರಾದ ಶ್ರೀ ಎಸ್ ಎನ್ ಶಿಂಪಿಗೇರವರು ಸ್ವಾಗತಿಸಿದರು ಗದಗ ಜಿಲ್ಲಾ ಸಂ.ಪಾ.ಶಾ.ಸAಘ ಅಧ್ಯಕ್ಷ ಶ್ರೀ ಎಸ್ ಎಸ್ ಸಾಲಿಮಠ ವಂದಿಸಿದರು. ಧಾರವಾಡ ವಲಯ ಸಂಸ್ಕೃತ ಪಾಠಶಾಲೆಗಳ ಸಂಯೋಜಕರು ಶ್ರೀ ಬಿ.ಬಿ.ಆರೇರ ಗುರುಗಳು ಸಂಸ್ಕೃತ ಗೀತೆ ಹಾಡಿ ತಮ್ಮ ಅನುಭವಗಳನ್ನು ಹಂಚಿಕೊAಡರು ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಎಲ್ಲ ಸಂಸ್ಕೃತ ಪಾಠಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮುದ್ದು ವಿದ್ಯಾರ್ಥಿಗಳು ಭಾಗವಹಿಸಿದ್ದರು.