ಕಳಸಾಪೂರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

11GDG04
Published on

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ ಜಿಲ್ಲಾಸ್ಪತ್ರೆ ವತಿಯಿಂದ ಶನಿವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.
ಬಸವಕೇಂದ್ರದ ಕಾರ್ಯಾಧ್ಯ ಮಲ್ಲಿಕಾರ್ಜುನ ಖಂಡಮ್ಮನವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಸುಖಮಯ ಜೀವನಕ್ಕೆ ಉತ್ತಮ ಆರೋಗ್ಯವಂತರಾಗಿರುವುದು ಬಹಳ ಮುಖ್ಯ. ಈ ಶಿಬಿರದಲ್ಲಿ ಆಗಮಿಸಿರುವ ವೈದ್ಯರುಗಳು ನೀಡುವ ಸಲಹೆಗಳನ್ನು ರೋಗಿಗಳು ಸರಿಯಾಗಿ ಪಾಲಿಸಿ, ಔಷಧೋಪಚಾರಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ನಮ್ಮ ಕಳಸಾಪೂರ ಗ್ರಾಮದ ಜನತೆ ಈ ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯೆ ಅನಸೂಯಾ ಬೆಟಗೇರಿ, ಉಪಾಧ್ಯೆ ರಾಜೇಶ್ವರಿ, ಕೊಟ್ರೇಶ ಓಲಿ, ರಾಜಕುಮಾರ ಕಟ್ಟಿಮನಿ, ಕೃಷ್ಣಾ ಲಮಾಣಿ, ನಜೀರಸಾಬ ಪೆಂಡಾರಿ, ಬಸವಣ್ಣೆವ್ವ ಓಲೆಕಾರ, ಲಲಿತವ್ವ ತಳವಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net