ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ

01GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ತಾಲೂಕಿನ ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಜರುಗಿತು.

ಬಸವಕೇಂದ್ರದ ಕಾರ್ಯಾಧ್ಯ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡದಲ್ಲಿ ಅತ್ಯಂತ ಹೆಸರಾಂತ ಕವಿಗಳು, ವಚನಕಾರರು, ಲೇಖಕರು, ನಾಟಕರಾರರು, ಇತಿಹಾಸಕಾರರು, ರಾಜರು ಈ ಕನ್ನಡ ನಾಡಿನಲ್ಲಿ ಬಾಳಿ ಕನ್ನಡ ಭಾಷೆ ರಾಜ್ಯಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಸ್ಮರಿಸಿಕೊಂಡು ಇಂದಿನ ದಿನಾಚರಣೆ ಆಚರಿಸಬೇಕು. ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ ವ್ಯಾಮೋಹ ಹೆಚ್ಚಾಗಿದ್ದರಿಂದ ಕನ್ನಡ ಭಾಷೆಯ ಮೇಲೆ ಜನರಿಗೆ ಆಸಕ್ತಿ ಕಡಿಮೆ ಆಗಿದೆ. ಯುವಕರು ಪರಭಾಷೆಗೆ ಮಾರು ಹೋಗುತ್ತಿದ್ದು ಅತ್ಯಂತ ನೋವಿನ ವಿಷಯ. ಇಂದಿನ ದಿನಗಳಲ್ಲಿ ಬಹುಭಾಷೆಗಳನ್ನು ಗೌರವಿಸೋದು ಅಗತ್ಯವಿದೆ. ಆದರೆ ಮಾತೃ ಭಾಷೆಯನ್ನು ಉಳಿಸಿ, ಬೆಳಸುವುದು ಅಷ್ಟೇ ಅಗತ್ಯವಿದೆ. ರಾಜ್ಯ ಸರ್ಕಾರವು ಕನ್ನಡ ಭಾಷೆಗೆ ಒತ್ತುಕೊಟ್ಟು ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿ ವರೆಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.

ಶರದರಾವ ಹುಯಿಲಗೋಳ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಅಧ್ಯೆ ಅನುಸೂಯಾ ಬೆಟಗೇರಿ ಅಧ್ಯಕಷತೆ ವಹಿಸಿದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಕನ್ನಡ ಪರ ೂಷಣೆಗಳನ್ನು, ವಚನ ೂಷಣೆಗಳನ್ನು ಸಾರುತ್ತ, ಬಿತ್ತಿಪತ್ರಗಳನ್ನು ಹಂಚುತ್ತ ಮೆರವಣಿಗೆ ನಡೆಸಲಾಯಿತು. ಕಳಸಾಪುರ ಸರ್ಕಾರಿ ಶಾಲೆಯ ಲಮಾಣಿ ಗುರುಗಳು, ಶಿಕ್ಷಕ, ಶಿಕ್ಷಕಿಯರು ಇತರರು ಇದ್ದರು.

ಗದಗ ತಾಲೂಕಿನ ಕಳಸಾಪೂರ ಬಸವಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮಲ್ಲಿಕಾರ್ಜು ಖಂಡೆಮ್ಮನ್ನವರ, ಲಮಾಣಿ ಗುರುಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net