ಕಳಸಾಪೂರ ಗ್ರಾಮದಲ್ಲಿ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ

20GDG04
ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿ ಚೆನ್ನಣ್ಣವರ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಓಂಕಾರೇಶ್ವರ ಮಠದ ಕೀರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶರದರಾವ್​ ಹುಯಿಲಗೋಳ, ಚಂದ್ರಕಾಂತ ಹುಲಕೋಟಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಇಂದಿನ ಮಕ್ಕಳು ಮೊಬೈಲ್​ ವ್ಯಾಮೋಹವನ್ನು ಬಿಟ್ಟು ಓದಿನತ್ತ ಹೆಚ್ಚು ಗಮನ ಕೊಡಬೇಕು ಎಂದು ಡಿಐಜಿಪಿ ರವಿ ಚೆನ್ನಣ್ಣವರ ಹೇಳಿದರು.
ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಾಲ್ಮೀಕಿ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇಂದಿನ ಯುವಕರು ದುಶ್ಚಟಗಳಿಂದ ದೂರ ಇರಬೇಕು, ಆರೋಗ್ಯವಂತರಾಗಿ ಊರಿನ ಗುರು&ಹಿರಿಯರ ಮಾತುಗಳನ್ನು ಆಲಿಸಬೇಕು.ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಅಲ್ಲದೇ ತಂದೆ ತಾಯಿಗಳನ್ನು ಗೌರವಿಸಬೇಕು ಎಂದು ಹೇಳಿದರು.
ವಾಲ್ಮೀಕಿಯವರ ಜೀವನ ಚರಿತ್ರೆ ಕುರಿತು ವಿಡಿಎಸ್​ಟಿಸಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ. ಸಿ. ಕಟ್ಟಿಮನಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ 2024ರ ವಾಲ್ಮೀಕಿ ರತ್ನ ಪ್ರಶಸ್ತಿಯನ್ನು ರವಿ ಚನ್ನಣ್ಣವರಿಗೆ ನೀಡಿ ಸನ್ಮಾನಿಸಲಾಯಿತು. ಓಂಕಾರೇಶ್ವರ ಮಠದ ಕೀರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶರದರಾವ್​ ಹುಯಿಲಗೋಳ, ಚಂದ್ರಕಾಂತ ಹುಲಕೋಟಿ, ಸಂದೇಶ ಇರಾಳ, ಎಂ. ಆರ್​. ಪಾಟೀಲ, ಬಸಯ್ಯ ಇಟಗಿಮಠ, ಬಸವರಾಜ ಶಿರುಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net