ಕಳಸಾಪೂರ ಗ್ರಾಮದಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳು ಪುಣ್ಯಸ್ಮರಣೆ ಕಾರ್ಯಕ್ರಮ

14GDG02
ಗದಗ ತಾಲೂಕಿನ ಕಳಸಾಪೂರ ಬಸವಕೇಂದ್ರದಲ್ಲಿ ತೋಂಟದ ಸಿದ್ದಲಿಂಗ ಶ್ರೀಗಳು 6ನೇ ಪುಣ್ಯಸ್ಮರಣೆ ಆಚರಿಸಲಾಯಿತು. ಮಲ್ಲಿಕಾರ್ಜುನ ಖಂಡೆಮ್ಮನ್ನವರ, ಶೈಲಾ ಹೂಗಾರ, ಮಂಜುಳಾ ರಾಯನಗೌಡರ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಕಳಸಾಪೂರ ಬಸವಕೇಂದ್ರದಲ್ಲಿ ತೋಂಟದ ಸಿದ್ದಲಿಂಗ ಶ್ರೀಗಳು 6ನೇ ಪುಣ್ಯಸ್ಮರಣೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ, ಸಿದ್ಧಲಿಂಗ ಶ್ರೀಗಳು ಕನ್ನಡದ ಕುಲಗುರು ಎಂದೇ ಹೆಸರಾಗಿದ್ದರು. ಇವರು ಕನ್ನಡ ಭಾಷೆ, ಸಾಹಿತ್ಯ, ಸಂಸತಿಗಳ ಬಗ್ಗೆ ಅಗಾಧ ಆಸ್ಥೆಯನ್ನು ಹೊಂದಿದ್ದ ಶ್ರಿಗಳಾಗಿದ್ದರು. ಕನ್ನಡ ನಾಡು, ನುಡಿಯ ಅಸ್ಮಿತೆಯ ಪ್ರಶ್ನೆ ಬಂದಾಗಲೆಲ್ಲ ಶ್ರೀಗಳು ದೊಡ್ಡ ಶಕ್ತಿಯಾಗಿ ನಿಲ್ಲುತ್ತಿದ್ದರು. ಕನ್ನಡ ನಾಡಲ್ಲಿ ಕನ್ನಡಕ್ಕೆ ಸಾರ್ವಭೌಮತ್ವ ದೊರೆಯಬೇಕೆಂದು 1982ರಲ್ಲಿ ಆರಂಭಗೊಂಡ ವಿ. ಕೃ. ಗೋಕಾಕ ಚಳುವಳಿಯಲ್ಲಿ ಸಿದ್ಧಲಿಂಗ ಶ್ರೀಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಸಮಾಜದಲ್ಲಿನ ಬಡತನ, ಅಜ್ಞಾನ, ದುಶ್ಚಟಗಳ ನಿವಾರಣೆಗೆ ಶ್ರಮೀಸಿದ್ದ ಶ್ರಿಗಳು, ಅನೇಕ ಲಂಬಾಣಿ ತಾಂಡಾಗಳನ್ನು ದತ್ತು ತೆಗೆದುಕೊಂಡು ಉದ್ಧರಿಸಿದರು. ಜನಸಾಮಾನ್ಯರ ಜೊತೆಯಲ್ಲಿ ಬೀದಿಗಿಳಿದು ಹೋರಾಟ ಮಾಡಿದರು ಎಂದರು.
ಶೈಲಾ ಹೂಗಾರ, ಮಂಜುಳಾ ರಾಯನಗೌಡರ, ಮಹಾದೇವಿ ರಾಯನಗೌಡರ, ಶಿಲ್ಪಾ ಖಂಡಮ್ಮನವರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net