ಕಳಸಾಪೂರ ಬಸವಕೇಂದ್ರದಲ್ಲಿ ಶಿವಾನುಭವ ಕಾರ್ಯಕ್ರಮ

22GDG02
Published on

ಗದಗ: ತಾಲೂಕಿನ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ ಸೋಮವಾರ ಶಿವಾನುಭ ಕಾರ್ಯಕ್ರಮ ಜರುಗಿತು.
ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಕಂಡಮ್ಮನ್ನವರ ಮಾತನಾಡಿ, ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ. ಸತ್ಯ ಶುದ್ಧ ಇಲ್ಲದಿರುವು ಕಾಯಕವಲ್ಲ. ಆಸೆಯೆಂಬುದು ಭವದ ಬೀಜ. ನಿರಾಸೆ ಎಂಬುದು ನಿತ್ಯ ಮುಕ್ತಿ. ದೇಹ ಶಕ್ತಿಯನ್ನು ಬಳಸಿ, ದುಡಿದು ಬಾಳುವುದು ತನುವಿನಿಂದ ಸಲ್ಲಿಸುವ ಸಾರ್ವತ್ರಿಕ ಪೂಜೆ ಆಗಿದೆ ಆಗಿದೆ ಎಮದರು.
ಮಕ್ಕಳಿಂದ ವಚನಗೋಷ್ಠಿ ಜರುಗಿತು. ಸಾಧಕರನ್ನು ಸನ್ಮಾನಿಸಲಾಯಿತು. ಮಂಜುಳಾ ಎಂ, ರಾಯನಗೌಡ್ರ, ಬಸವರಾಜ ಕಣವಿ, ಹನಮಂತ ಹಾದಿಮನಿ, ಬಸವರಾಜ ತಳವಾರ, ಮಂಜಪ್ಪ ತಳವಾರ, ರಸೂಲ್​ ಅಮೀಮಸಾಬ ದಾವಲಖಾನವರ, ನಿಂಗಪ್ಪ ಇನಾಮತಿ, ಮಾದೇವಪ್ಪ ಅಣ್ಣಿಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net