ಗದಗ: ನಿವೃತ್ತ ಪ್ರೊಫೆಸರ್, ಕಲಾ ಪೋಷಕ ರಾಜಗೋಪಾಲ್ ಕಡ್ಲಿಕೊಪ್ಪ ಅವರ ನಿವೃತ್ತಿ ನಿಮಿತ್ಯ ಆರವತ್ತೈದರ ಅಭಿನಂದನೆ ಕಾರ್ಯಕ್ರಮವನ್ನು ಏ.20 ರಂದು ಬೆಳಗ್ಗೆ 10 ಗಂಟೆಗೆ ಗಂಗಿಮಡಿ ಬಡಾವಣೆಯ ವಿಶ್ವಕರ್ಮ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನ ಸಮಿತಿ ಅಧ್ಯಕ್ಷ ಡಾ. ಜೆ. ಪಿ. ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜಗೋಪಾಲ್ ಕಡ್ಲಿಕೊಪ್ಪ ಅವರು ವಿಶ್ವಕರ್ಮ ಸಮುದಾಯಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ನೌಕರ ಪತ್ತಿನ ಸಂಘ, ಮಹಿಳಾ ಸಂಘ, ಸಾಂಸ್ಕೃತಿಕ ಮತ್ತು ಸಾಹಿತ್ಯ ಸಂಘ, ವಿದ್ಯಾಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳನ್ನು ಹುಟ್ಟು ಹಾಕಲು ಕಡ್ಲಿಕೊಪ್ಪ ಕಾರಣರಾಗಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ತೋಂಟದಾರ್ಯ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸುವರು. ಎಚ್.ಕೆ. ಪಾಟೀಲ ಅವರು ಕಲೋನ್ ಮಿ ಎಂಬ ಗ್ರಂಥ ಬಿಡುಗಡೆ ಮಾಡವರು. ಪ್ರೊ. ಎಸ್. ವಿ. ಸಂಕನೂರು ಅವರು ವಿಶ್ವ ಸಾಹಿತ್ಯ ಸಂಪದ ಗ್ರಂಥವನ್ನು ಬಿಡುಗಡೆ ಮಾಡುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಕರ್ಮ ಸಮುದಾಯದಲ್ಲಿ ಸಾಧನೆ ಮಾಡಿದ 12 ಜನರಿಗೆ ಸನ್ಮಾನಿಸಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಮ್ಮಾರ ಬರೆದ ಮೋರಿಕಾಡು ಎಂಬ ನಾಟಕ ಪ್ರದರ್ಶನ ಆಗಲಿದೆ. ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ಬಿ.ಜಿ. ಪಾಟೀಲ ಹೇಳಿದರು.
ಅಶೋಕ ಅಕ್ಕಿ, ರಾಮರಾವ್, ಜಿ.ಎಸ್. ಹಿರೇಮಠ, ಉಮೇಶ ಪುರದ, ವಿಜಯ ಕಿರೇಸೂರು, ಮೌನೇಶ ಬಡಿಗೇರ, ವಿಶ್ವನಾಥ ಕಮ್ಮಾರ, ಕೃಷ್ಣ ಕಡ್ಲಿಕೊಪ್ಪ, ಅಂದಾನಪ್ಪ ಬಿಂಕಿ, ಸಿ. ವಿ. ಬಡಿಗೇರ ಇತರರು ಇದ್ದರು.