ಕದಳಿಶ್ರೀ ವೇದಿಕೆಯಿಂದ ಅಮೃತಭೋಜನ ಜ್ಞಾನ ಸಿಂಚನ ಮಾಲಿಕೆ

12GDG07
Published on

ನೊಂದ ಸಮುದಾಯಕ್ಕೆ ಜೀವ ಜಲ ಆದ ಶರಣರು : ಪ್ರೋ. ಪ್ರೇಮಾ

ಗದಗ: ಹನ್ನೆರಡನೆ ಶತಮಾನ ಕನ್ನಡ ನಾಡಿನ ಚರಿತ್ರೆಯಲ್ಲಿ ಗಮನಾರ್ಹವಾದ ಕಾಲ. ಹಲವಾರು ಜನಸಮುದಾಯಕ್ಕೆ ಜೀವ ಜಲವಾಗಿ ಬಂದ ಬಸವಾದಿ ಶರಣರು ನೊಂದ ಜನ ಸಮುದಾಯಕ್ಕೆ ಧ್ವನಿಯಾದವರು ಸಮಾಜದಲ್ಲಿ ಗೌರವಯುತವಾಗಿ ಬದುಕುವಂತೆ ಮಾಡಿದವರು. ಕಾಯಕವನ್ನು ಅರಿತು ತಮ್ಮ ಜೀವನದ ಸಿದ್ಧಾಂತಗಳನ್ನು ವಚನಗಳ ಮೂಲಕ ಸಾರಿದ ಶರಣ ನೂಲಿಯ ಚಂದಯ್ಯ ಎಂದು ಚಿಂತಕಿ ಪ್ರೊ. ಪ್ರೇಮಾ ಹಂದಿಗೋಳ ಹೇಳಿದರು.

ಅವರು ಸೋಮುವಾರ ಗದುಗಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ನಂ.2 ರಲ್ಲಿ ಗದಗ ಜಿಲ್ಲಾ ಶರಣೆ ಶ್ರೀ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಶ್ರಾವಣಮಾಸದ ಅಂಗವಾಗಿ ಜರುಗಿದ ಅಮೃತ ಭೋಜನ- ಜ್ಞಾನ ಸಿಂಚನ ಮಾಲಿಕೆ-9 ರಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಶರಣರ ವಚನಗಳ ಕುರಿತು ಮಾತನಾಡಿದರು.

ಬಸವಣ್ಣನವರು ತಮ್ಮ ವಚನಗಳಲ್ಲಿ ಕಾಯಕ ಹಾಗೂ ದಾಸೋಹ ಕುರಿತು ಬಹಳಷ್ಟು ತಿಳಿಸಿದ್ದಾರೆ. ಹಾಗೆಯೇ ನೂಲಿಯ ಚಂದಯ್ಯನವರು ಹಗ್ಗ ಮಾರುವ ಕಾಯಕವನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡುತ್ತ ಚಂದೇಶ್ವರಲಿAಗ ಅಂಕಿತ ನಾಮದಿಂದ ಹಲವಾರು ವಚನಗಳನ್ನು ರಚಿಸಿದ್ದಾರೆ. ಕಾಯಕದ ಮಹತ್ವತೆಯನ್ನು ಇವರು ತಮ್ಮ ವಚನಗಳಲ್ಲಿ ಎತ್ತಿ ಹಿಡಿದಿದ್ದಾರೆ ಎಂದರು.

ಮಕ್ಕಳಿಗೆ ಅಮೃತ ಭೋಜನ ಉಣಬಡಿಸಿದ ಚಿಂತಕಿ ಸುಜಾತಾ ಲಕ್ಷೆö್ಮÃಶ್ವರ ಮಾತನಾಡಿ ಕಾಯಕ, ದಾಸೋಹ ಮತ್ತು ಸತ್ಯ-ನಿಷ್ಠೆಯ ಮೂಲಕ ಅರಿವಿನ ಬೆಳಕನ್ನು ನೀಡಿದ ಶರಣರಲ್ಲಿ ಕಾಯಕಮೂರ್ತಿ ನೂಲಿಯ ಚಂದಯ್ಯನವರು ಅಗ್ರಗಣ್ಯರು. ಇವರ ವಚನಗಳು ನಮಗೆಲ್ಲ ದಾರಿದೀಪಗಳಾಗಿವೆ. ಹನ್ನೆರಡನೆ ಶತಮಾನದ ಅನುಭವ ಮಂಟಪದಲ್ಲಿ ವಚನಕಾರರಾಗಿ ಬಸವಣ್ಣನವರ ಪ್ರೀತಿಗೆ ಪಾತ್ರರಾಗಿದ್ದರು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕವಿತಾ ಬೇಲೇರಿ ಶರಣರ ವಚನಗಳು ಸಮಾನತೆ ಹಾಗೂ ವೈಚಾರಿಕತೆಗೆ ಒತ್ತು ನೀಡಿವೆ. ಮಕ್ಕಳು ವಚನಗಳನ್ನು ಓದಿ ತಿಳಿದು ಅರ್ಥೈಸಿಕೊಳ್ಳಬೇಕು. ವಚನಗಳು ಎಲ್ಲರ ಬದುಕಿಗೆ ದಾರಿದೀಪಗಳಾಗಿವೆ. ಶರಣರು ಆದರ್ಶಪ್ರಾಯರು. ಅವರ ಜೀವನ ಚರಿತ್ರೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಶರಣೆ ಅಕ್ಕಮಹಾದೇವಿಯ ಕದಳಿ ಶ್ರೀ ವೇದಿಕೆಯು ಮಕ್ಕಳಿಗೆ ಅಮೃತ ಭೋಜನ-ಜ್ಞಾನ ಸಿಂಚನದAತಹ ಕಾರ್ಯಕ್ರಮಗಳನ್ನು ಆಯೋಜಿಸಿ ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದೆ ಎಂದರು.

ಇAದಿನ ಅಮೃತ ಭೋಜನ ಜ್ಞಾನಸಿಂಚನದ ದಾನಿಗಳಾದ ಪ್ರೊ.ಪ್ರೇಮಾ ಹಂದಿಗೋಳ ಹಾಗೂ ಶರಣೆ ಸುಜಾತಾ ಲಕ್ಷೆö್ಮÃಶ್ವರ ಅವರನ್ನು ಕದಳಿಶ್ರೀ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಇನ್ನೋರ್ವ ಅತಿಥಿ ಗಾಯಕ ಶಿವಶಂಕರ ದೊಡ್ಡಮನಿ ವಿದ್ಯಾರ್ಥಿಗಳಿಗೆ ಶಿವಶರಣರ ವಚನಗಳನ್ನು ರಾಗಬದ್ಧವಾಗಿ ಹಾಡುವದನ್ನು ಹಾಗೂ ವಚನಕಾರರ ಕಿರುಪರಿಯವನ್ನು ತಿಳಿಸುವ ತಿಳಿಸಿ ವಚನಗಳನ್ನು ಹಾಡುವ ಬಗೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು.

ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಎಫ್.ಜೆ.ದಲಭಂಜನ ವಹಿಸಿ ಮಾತನಾಡಿ ಶರಣರ ವಚನಗಳು ಸರಳವಾಗಿದ್ದು, ಮಕ್ಕಳು ವಚನಗಳೊಂದಿಗೆ ವಚನಕಾರರ ಜೀವನವನ್ನು ತಿಳಿಯಬೇಕು. ಪ್ರತಿಯೊಂದು ವಚನಗಳಲ್ಲಿ ಗೂಡಾರ್ಥಗಳಿದ್ದು, ಇವುಗಳ ಓದು ಜ್ಞಾನದ ವೃದ್ಧಿಗೆ ಕಾರಣವಾಗುತ್ತದೆ. ಕಾಲ ಬದಲಾದರೂ ವಚನಗಳು ಸ್ಥಿರವಾಗಿವೆ ಎಂದರು.

ಪ್ರಾರAಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ ಜರುಗಿತು. ಶ್ರೀಮತಿ ವಿ.ಕೆ. ಪಾಟೀಲ ಸ್ವಾಗತಿಸಿದರು. ವಿ.ಎಸ್.ಕಬ್ಬರಗಿ ನಿರೂಪಿಸಿದರು. ಹೆಚ್.ಬಿ.ಬಂಡಿವಡ್ಡರ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ವಿ.ಇಂದಿರಾಬಾಯಿ, ಬಿ.ಬಿ.ಪಾಟೀಲ, ಶ್ರೀಮತಿ ಗೌರಮ್ಮ, ಸಂಗಮ್ಮ ಅಲಗೂರ, ಶಿಲ್ಪಾ ಕಂಬಾರ, ದೀಪಾ ಬೆಟಗೇರಿ, ಪಾಲಕ-ಪೋಷಕರು ಮುಂತಾವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net